ರಾಜ್ಯಕ್ಕೆ ರೈಲ್ವೆ ಯ ಬಂಪರ್: ಪಿಯುಷ್ ಗೊಯಲ್ ಗೆ ಕನ್ನಡಿಗರು ಫಿದ

ರಾಜ್ಯಕ್ಕೆ ರೈಲ್ವೆ ಯ ಬಂಪರ್: ಪಿಯುಷ್ ಗೊಯಲ್ ಗೆ ಕನ್ನಡಿಗರು ಫಿದ

ಶುಕ್ರವಾರದಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಘೋಷಿಸಿತು. ಈ ಬಜೆಟ್ ನಲ್ಲಿ ಪ್ರತಿ ವರ್ಗದ ಜನರಿಗೂ ಯೋಜನೆಗಳನ್ನು ರೂಪಿಸಿರುವ ಮೋದಿ ರವರ ಸರ್ಕಾರದ ಕೆಲಸಕ್ಕೆ ಇಡೀ ಭಾರತದಲ್ಲಿ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ರೈತರಿಂದ ಹಿಡಿದು ದೇಶ ಕಾಯುವ ಸೈನಿಕರ ವರೆಗೂ ಎಲ್ಲರಿಗೂ ಹೊಸ ರೀತಿಯ ಯೋಜನೆಗಳನ್ನು ರೂಪಿಸಿರುವ ಮೋದಿ ರವರ ಕಾರ್ಯಕ್ಕೆ ಶ್ಲಾಘನೆ ಗಳು ವ್ಯಕ್ತವಾಗುತ್ತಿದ್ದು ಕರ್ನಾಟಕ ರಾಜ್ಯಕ್ಕೆ ಸಹ ಹಲವಾರು ಯೋಜನೆಗಳು ಜಾರಿಯಾಗಿವೆ. ಆದರೆ ಮಾಧ್ಯಮಗಳು ಈ ಯೋಜನೆಯ ಸಂಕ್ಷಿಪ್ತ ವಿವರಗಳನ್ನು ನೀಡುವ ಬದಲು ಕೆಲವೇ ಕೆಲವು ಯೋಜನೆಗಳನ್ನು ಕೈಗೆತ್ತಿಕೊಂಡು ಗಂಟೆಗಟ್ಟಲೆ ಕಾಲಹರಣ ಮಾಡುತ್ತಿವೆ. ರಾಜ್ಯಕ್ಕೆ ಕೇಂದ್ರ ಬಜೆಟ್ ನಲ್ಲಿ ರೈಲ್ವೆಯಲ್ಲಿ ಬಂಪರ್ ಕೊಡುಗೆ ನೀಡಲಾಗಿದ್ದು ಯಾವ ಮಾಧ್ಯಮಗಳು ಇದರ ಬಗ್ಗೆ ಪ್ರಸಾರ ಮಾಡುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ.

ಅಷ್ಟಕ್ಕೂ ಆ ಕೊಡುಗೆ ಏನು ಗೊತ್ತಾ??

ಸೂಚನೆ: ಕೇಂದ್ರ ಸರ್ಕಾರದ ಅವಧಿ ಇನ್ನೂ ಇರುವುದು ಕೇವಲ ಮೂರು ತಿಂಗಳು ಮಾತ್ರ. ಕೇಂದ್ರ ಸರ್ಕಾರವು ಈ ಮೂರು ತಿಂಗಳ ಅವಧಿಗೆ ಮಾತ್ರ ಹಣ ಬಿಡುಗಡೆ ಮಾಡಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಬಜೆಟ್ ತಯಾರಾಗಿದ್ದು ಕರ್ನಾಟಕ ರಾಜ್ಯಕ್ಕೆ ಬರೋಬ್ಬರಿ ಮೂರು ಹೊಸ ಮಾರ್ಗಗಳಿಗೆ ಮಂಜೂರಾತಿ ನೀಡಲಾಗಿದೆ. ಹಲವಾರು ವರ್ಷಗಳ ಕನಸಾಗಿದ್ದ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ಮಾರ್ಗದ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ.ಈ ಯೋಜನೆಗಳಿಗಾಗಿ  1963 ಕೋಟಿ ರೂ ಮೀಸಲಿಡಲಾಗಿದೆ ( 3 ತಿಂಗಳ ಅವಧಿಗೆ) ಇನ್ನುಳಿದಂತೆ ಚಿಕ್ಕಬಳ್ಳಾಪುರ-ಗೌರಿಬಿದನೂರು ಹಾಗೂ ಗದಗ ಆಳವಾಗಿ ಮಾರ್ಗಗಳಿಗೆ ಮಂಜುರತಿ ನೀಡಲಾಗಿದ್ದು ಇದರ ಬಗ್ಗೆ ಯಾವ ಮಾಧ್ಯಮಗಳು ಸಹ ಪ್ರಕಟನೆ ಹೊರಡಿಸಿಲ್ಲ.

ಕೇಂದ್ರ ಸಚಿವರಾಗಿರುವ ಪಿಯುಶ್ ಗೋಯಲ್ ರವರು ಈಗಾಗಲೇ ಹಲವಾರು ಬಾರಿ ಕರ್ನಾಟಕದ ರೈಲ್ವೆ ಇಲಾಖೆಗಳಿಗೆ ಭರ್ಜರಿ ಆಫರ್ ಗಳನ್ನು ಘೋಷಿಸಿದ್ದಾರೆ ಅದರಂತೆಯೇ ಮತ್ತೊಮ್ಮೆ ಮೂರು ಹೊಸ ಮಾರ್ಗಗಳಿಗೆ ಮಂಜುರತಿ ನೀಡಲಾಗಿದ್ದು ಪಿಯುಶ್ ಗೋಯಲ್ ರವರ ಈ ನಡೆಗೆ ಕನ್ನಡಿಗರು ಫಿದಾ ಆಗಿದ್ದಾರೆ ಮತ್ತು ಈ ಬಾರಿಯ  ಯಾವುದೇ ರೈಲ್ವೇ ದರ ಏರಿಕೆಯಾಗಿಲ್ಲ ಎಂಬುದು ಗಮನಿಸಬೇಕಾದ ವಿಷಯ.