ದೀದಿ ಮಾತ್ರ ಕೋಟೆಗೆ ನುಗ್ಗಿ ಛಿದ್ರ ಛಿದ್ರ ಮಾಡಿದ ಮೋದಿ

ದೀದಿ ಮಾತ್ರ ಕೋಟೆಗೆ ನುಗ್ಗಿ ಛಿದ್ರ ಛಿದ್ರ ಮಾಡಿದ ಮೋದಿ

ಪಶ್ಚಿಮ ಬಂಗಾಳ ವೆಂದರೆ ನೆನಪಾಗುತಿದ್ದಿದ್ದ್ದು ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಎಂದು ಮಹಾ ಘಟಬಂಧನ್ ನಲ್ಲಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಮುಂಚೂಣಿಯಲ್ಲಿ ನಿಂತು ಕೊಂಡು ಮಹಾ ಘಟಬಂಧನ ಮುನ್ನೆಡೆಸುತ್ತಿರುವ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಮಮತಾ ಬ್ಯಾನರ್ಜಿ ರವರ ಕೋಟೆಯನ್ನು ನರೇಂದ್ರ ಮೋದಿ ಅವರು ಇಂದು ಛಿದ್ರ ಛಿದ್ರ ಮಾಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಠಾಕೂರ್ ನಗರ ಹಾಗೂ ದುರ್ಗಪೂರ್ ನಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಅವರು ಪಾಲ್ಗೊಂಡಿದ್ದರು. ಈ ವಿಷಯ ಕೇಳುತ್ತಿದ್ದಂತೆ ಇಡೀ ಪಶ್ಚಿಮ ಬಂಗಾಳದ ಜನತೆಯಲ್ಲಿ ಸೇರಿದಂತೆ ಭಾಸವಾಗುತ್ತಿತ್ತು  ನರೇಂದ್ರ ಮೋದಿ ರವರ ಭಾಷಣ ಕೇಳಲು ಲಕ್ಷಾಂತರ ಸಂಖ್ಯೆಯಲ್ಲಿ ಜನಸ್ತೋಮ ಸೇರಿತ್ತು.

ಎಂದಿನಂತೆ ತಮ್ಮ ಹರಿತ ಮಾತುಗಳಿಂದ ಎದುರಾಳಿ ಪಕ್ಷದ ಬೆವರಿಳಿಸಿದ ನರೇಂದ್ರ ಮೋದಿ ರವರು ತಮ್ಮ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಧೋರಣೆಯ ವಿರುದ್ಧ ನರೇಂದ್ರ ಮೋದಿ ರವರು ಮುಗಿಬಿದ್ದರು. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಆದ ಕಾರಣವೇ ಮಮತಾ ಬ್ಯಾನರ್ಜಿ ಅವರು ಈ ರೀತಿ ವರ್ತಿಸುತ್ತಿದ್ದಾರೆ ಸ್ವತಹ ಒಂದು ರಾಜ್ಯದ ಮುಖ್ಯಮಂತ್ರಿ ಹಿಂಸೆಯ ದಾರಿಯನ್ನು ಹಿಡಿದಿದ್ದಾರೆ.

ಬಂಗಾಳ ಪರಿವರ್ತನೆ ಆಗಿಯೇ ತೀರುತ್ತದೆ ಇಲ್ಲಿನ ಬಿಜೆಪಿ ಕಾರ್ಯಕರ್ತರ ಬಲಿದಾನ ವ್ಯರ್ಥವಾಗುವುದಿಲ್ಲ, ಬಂಗಾಳ ಈಗಿನ ತನ್ನ ಹಿಂಸಾತ್ಮಕ ನೀತಿಯನ್ನು ಹೆಚ್ಚು ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಹಾಗೂ ನಿಮ್ಮ ಪ್ರೀತಿ ಅವರಿಗೆ ಅಭದ್ರತೆ ಉಂಟುಮಾಡಿದೆ ಪ್ರೀತಿ ನನಗೆ ನೀಡಿದ ಜನತೆಗೆ ನಾನು ಧನ್ಯವಾದ ತಿಳಿಸುತ್ತೇನೆ ಖಂಡಿತವಾಗಿಯೂ ಬಂಗಾಳವನ್ನು ಶಾಂತಿ ರಾಜ್ಯವನ್ನು ಮಾರ್ಪಡಿಸುತ್ತೇನೆ ಎಂದು ಗುಡುಗಿದರು.

ಎಂದಿನಂತೆ ಕಾಂಗ್ರೆಸ್ನ ಸಾಲ ಮನ್ನಾ ಘೋಷಣೆ ಯನ್ನು ಮಹಾ ಸುಳ್ಳು ಎಂದು ಜರಿದ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪ್ರತಿ ಹತ್ತು ವರ್ಷಕ್ಕೆ ಸಾಲ ಮನ್ನಾ ಘೋಷಣೆಯೊಂದಿಗೆ ಚುನಾವಣೆಗೆ ಬರುತ್ತದೆ ಆದರೆ ಅದರ ಲಾಭ ಸಿಗುವುದು ಕೇವಲ ಎರಡು ಮೂರು ಕೋಟಿ ರೈತರಿಗಷ್ಟೆ, ನಾವು ಮುಂದಿನ 10 ವರ್ಷದಲ್ಲಿ ರೈತರಿಗೆ 70 ಲಕ್ಷ ಕೋಟಿ ಹಣ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಮಹಾಘಟಬಂಧನ ವಿರುದ್ಧ ತಿರುಗಿ ಬಿದ್ದಿರುವ ಮೋದಿ ರವರು ಅದೊಂದು ಭ್ರಷ್ಟರ ಕೂಟ ವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ  ಜನರಿಗೆ ಒಳ್ಳೆಯದು ಮಾಡುತ್ತಿಲ್ಲ, ಜೊತೆಗೆ ಕೇಂದ್ರ ಸರ್ಕಾರವನ್ನು ಒಳ್ಳೆಯದು ಮಾಡಲು ಬಿಡುತ್ತಿಲ್ಲ ಯಾಕೆಂದರೆ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿದರೆ ತಮ್ಮ ಕುರ್ಚಿ ಅಲ್ಲಾಡುತ್ತದೆ ಎಂಬ ಭಯದಿಂದ ನಮ್ಮ ಆಯುಷ್ಮಾನ್ ಭಾರತ್ ಯೋಜನೆಗೆ ಅಡ್ಡಗಾಲು ಹಾಕಿದ್ದಾರೆ ಎಂದು ಹೇಳಿದರು.

ಠಾಕೂರ್ ನಗರ ಮತ್ತು ದುರ್ಗಾ ಪುರದಲ್ಲಿ ಎರಡು ನಗರಗಳಲ್ಲಿ ಮೋದಿ ಅವರ ಸಮಾವೇಶಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಠಾಕೂರ್ ನಗರದಲ್ಲಿ ಜನ ಹೆಚ್ಚಾಗಿ ನೂಕಾಟ ತಳ್ಳಾಟ ಗಳು ಉಂಟಾಗಿ ಕೆಲವರು ಗಾಯಗೊಂಡರು ಸೇರಿ ತೊಂದರೆ ಆದಕಾರಣ ಮೋದಿ ಅವರ ಭಾಷಣವನ್ನು ಮೊಟಕು ಗೊಳಿಸಿ ಠಾಕೂರ್ ನಗರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದರ ಮೂಲಕ ನರೇಂದ್ರ ಮೋದಿ ರವರ ತಾಕತ್ತು ಪಶ್ಚಿಮ ಬಂಗಾಳದಲ್ಲಿ ಎಷ್ಟಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.