ಮತ್ತೊಮ್ಮೆ ಮೋದಿ ಮುಂದೆ ಮಂಡಿಯೂರಿದ ಸ್ವಿಸ್ ಬ್ಯಾಂಕ್: ಮಲ್ಯ ಮೊದಲ ಬಲಿ

ಸ್ವಿಜರ್ಲೆಂಡ್ ದೇಶದ ಸ್ವಿಸ್ ಬ್ಯಾಂಕ್ ಎಂದ ತಕ್ಷಣ ಎಲ್ಲರಿಗೂ ಕಪ್ಪು ಹಣ ನೆನಪಾಗುತ್ತದೆ ಯಾವ ದಾಖಲೆಗಳು ಇಲ್ಲದೆ ಹಾಗೂ ಕಲೆಕ್ಟ್ ಮಾಡುವ ಕೆಲವೇ ಕೆಲವು ದಾಖಲೆಗಳ ಸಂಪೂರ್ಣ ಪ್ರೈವಸಿ ಯನ್ನು ಸ್ವಿಸ್ ಬ್ಯಾಂಕ್ ಯಾರಿಗೂ ಬಿಟ್ಟು ಕೊಡುವುದಿಲ್ಲ ಆದ ಕಾರಣ ಸಾಮಾನ್ಯವಾಗಿ ಕಪ್ಪು ಹಣ ಸಂಗ್ರಹಿಸುವ ನಾಯಕರು ಸ್ವಿಸ್ ಬ್ಯಾಂಕ್ ಮೊರೆ ಹೋಗುತ್ತಾರೆ.

ಮೋದಿ ಅವರು ಅಧಿಕಾರಕ್ಕೆ ಬಂದ ತಕ್ಷಣ  ಕಾಳ ಧನಿಕರ ನಿದ್ದೆಗೆಡಿಸಲು ಸ್ವಿಸ್ ಬ್ಯಾಂಕ್  ಮೊರೆ ಹೋಗಿದ್ದರು ಆದರೆ ಇವರು ಸ್ವಿಸ್ ಬ್ಯಾಂಕ್ ಮೊರೆ ಹೋಗಿದ್ದು ತಮ್ಮ ಹಣವನ್ನು ಅದರಲ್ಲಿ ಇಡುವುದಕ್ಕೆ ಅಲ್ಲ ಬದಲಾಗಿ ಭಾರತದ ಕಪ್ಪುಹಣ ಹೊಂದಿರುವ ನಾಯಕರ ದಾಖಲೆಗಳಿಗಾಗಿ ಸ್ವಿಸ್ ಬ್ಯಾಂಕ್ ಕದ ತಟ್ಟಿದ್ದರು, ಮೊದಮೊದಲು ಮೋದಿ ರವರ ಬೇಡಿಕೆಗೆ ನಿರಾಕರಿಸಿದ ಸ್ವಿಸ್ ಬ್ಯಾಂಕ್ ತದನಂತರ ಮೋದಿ ರವರ ಚಾಕಚಕ್ಯತೆಗೆ ಮಂಡಿಯೂರಿ ದಾಖಲೆಗಳನ್ನು ನೀಡಲು ಒಪ್ಪಿಗೆ ನೀಡಿತ್ತು.

ಮೊಟ್ಟ ಮೊದಲ ಬಲಿ ವಿಜಯ್ ಮಲ್ಯ !

ಭಾರತದ ಬ್ಯಾಂಕುಗಳಲ್ಲಿ ಸಾಲ ಪಡೆದು ವಿದೇಶಕ್ಕೆ ಹಾರಿ ಹೋಗಿರುವ ವಿಜಯ್ ಮಲ್ಯರವರು ನರೇಂದ್ರ ಮೋದಿ ರವರ ಚಾಕಚಕ್ಯತೆಗೆ ಮೊದಲ ಬಲಿಯಾಗಿದ್ದಾರೆ. ಯಾಕೆಂದರೆ ಸಿಬಿಐ ಸಂಸ್ಥೆಯು ಸ್ವಿಸ್ ಬ್ಯಾಂಕ್ ಅಧಿಕಾರಿಗಳನ್ನು ವಿಜಯ್ ಮಲ್ಯರವರು 4 ಖಾತೆಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲು ಅನುಮತಿ ಕೋರಿ ಪತ್ರ ಬರೆದಿತ್ತು. ಕೇಂದ್ರ ಸರ್ಕಾರವು ಈ ಬಗ್ಗೆ ಸ್ವಿಜರ್ಲಂಡ್ ಸರ್ಕಾರಕ್ಕೆ ಶಿಫಾರಸು ಮಾಡಿ ಸಿಬಿಐ ಅಧಿಕಾರಿಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಮೂಲಕ ವಿಜಯ್ ಮಲ್ಯರವರ ಸಂಪೂರ್ಣ ಸ್ವಿಸ್ ಬ್ಯಾಂಕ್ ದಾಖಲೆಗಳು ಹಾಗೂ ಬ್ಯಾಂಕ್ ಖಾತೆಗಳು ಸಿಬಿಐ ವಶವಾಗಲಿದೆ. ಸ್ವಿಸ್ ಬ್ಯಾಂಕ್ ಇದೇ ಮೊಟ್ಟಮೊದಲ ಬಾರಿಗೆ ಭಾರತ ದೇಶಕ್ಕೆ ಕಪ್ಪು ಹಣ ಹೊಂದಿದವರ ದಾಖಲೆ ಹಾಗೂ ಖಾತೆಗಳನ್ನು ವಶಪಡಿಸಿಕೊಳ್ಳುವ ಅವಕಾಶ ನೀಡಿದ್ದು ಮೋದಿ ರವರ ರಾಜಕೀಯ ಚಾಣಕ್ಯ ತೆ ಗೆ ಮತ್ತೊಂದು ನಿದರ್ಶನ ಸಿಕ್ಕಂತಾಗಿದೆ.

Post Author: Ravi Yadav