ಬಿಜೆಪಿ ಅಭ್ಯರ್ಥಿಯಾಗಿ ಬಾಹುಬಲಿ ಪ್ರಭಾಸ್ ಕಣಕ್ಕೆ: ನಡುಗಿ ಹೋದ ನಾಯ್ಡು

ಬಿಜೆಪಿ ಅಭ್ಯರ್ಥಿಯಾಗಿ ಬಾಹುಬಲಿ ಪ್ರಭಾಸ್ ಕಣಕ್ಕೆ: ನಡುಗಿ ಹೋದ ನಾಯ್ಡು

ಒಂದು ಕಡೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂದು ನರೇಂದ್ರ ಮೋದಿ ರವರ ಜೊತೆ ಮೈತ್ರಿ ಕಳಚಿಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸಲು ಸಿದ್ಧರಾಗುತ್ತಾರೆ. ಅಷ್ಟೇ ಅಲ್ಲದೆ ಮಹಾ ಘಟಬಂಧನ ಮುಂಚೂಣಿ ಸಾಲಿನಲ್ಲಿ ನಿಂತು ನರೇಂದ್ರ ಮೋದಿ ಅವರನ್ನು ಸೋಲಿಸುವ ಕನಸು ಕಾಣುತ್ತಿದ್ದಾರೆ.

ಈಗಾಗಲೇ ಬಿಜೆಪಿ ಪಕ್ಷದ ಜೊತೆ ಮೈತ್ರಿ ತೊರೆದು ಕೊಂಡು ಪ್ರತ್ಯೇಕವಾದ ಮೇಲೆ ಚಂದ್ರಬಾಬು ನಾಯ್ಡು ರವರಿಗೆ ಶಾಕ್ ಗಳ ಮೇಲೆ ಶಾಕ್ ಎದುರಾಗುತ್ತಿದೆ ಈಗ ಮತ್ತೊಂದು ಶಾಕ್ ಎದುರಾಗಿದ್ದು ಆಂಧ್ರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಅಲೆ ಜೋರಾಗಿ ನಡೆಯುತ್ತಿದೆ ಹಾಗೂ ಈ ಮೂಲಕ ಕುತಂತ್ರಿ ನಾಯ್ಡು ರವರ ಪಕ್ಷ ಕೊಚ್ಚಿಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ ಎಂಬ ಮಾತು ಕೇಳಿ ಬಂದಿದೆ ಯಾಕೆಂದರೆ ಈಗ ನರೇಂದ್ರ ಮೋದಿ ರವರ ಜೊತೆ ಸೇರಿರುವುದು ಬಾಹುಬಲಿ.

ಹೌದು ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಬಲಗೊಳ್ಳುತ್ತಿದೆ, ಇಡೀ ವಿಶ್ವವೇ ಭಾರತದ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಮೊದಲ ಚಿತ್ರ ಬಾಹುಬಲಿ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ ಈ ಚಿತ್ರದ ನಾಯಕ ಪ್ರಭಾಕರ್ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮುಂದಿನ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಪ್ರಭಾಸ್ ರವರ ದೊಡ್ಡಪ್ಪ, ಮೊದಲು ಸಂಸದರಾಗಿ ಕೆಲಸ ಮಾಡಿದ್ದಾರೆ ಈಗ ತಮ್ಮ ದೊಡ್ಡಪ್ಪನ ಹಾದಿಯಲ್ಲಿ ನಡೆಯಬೇಕು ಎಂಬ ಇಚ್ಛೆಯನ್ನು ಹೊಂದಿರುವ ನಟ ಪ್ರಭಾಸ್ ರವರು ಮತ್ತು ಹಲವಾರು ಬಾರಿ ನರೇಂದ್ರ ಮೋದಿ ರವರ ಪರ ಧ್ವನಿ ಎತ್ತಿದ್ದರು. ನರೇಂದ್ರ ಮೋದಿ ರವರ ಕೆಲಸಗಳನ್ನು ಎತ್ತಿ ಹಿಡಿದಿದ್ದ ಪ್ರಭಾಸ್ ರವರು ಹಲವಾರು ಬಾರಿ ಮೋದಿ ಅವರನ್ನು ಭೇಟಿ ಮಾಡಿ ನಾನು ಮೋದಿ ರವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದರು.

ಪ್ರಭಾಸ್ ರವರ ದೊಡ್ಡಪ್ಪ ಈ ಹಿಂದೆ ಬಿಜೆಪಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಆದರೆ ಚಿರಂಜೀವಿ ಅವರ ಪಕ್ಕ ಅಭಿಮಾನಿ ಯಾಗಿದ್ದ ಇವರು ಚಿರಂಜೀವಿ ರವರ ಚಿತ್ರರಂಗದ ಆಕರ್ಷಣೆಗೆ ಒಳಗಾಗಿ ಬಿಜೆಪಿ ತೊರೆದು ಪ್ರಜಾರಾಜ್ಯಂ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದರು.

ಈ ತಪ್ಪನ್ನು ಮಾಡದಿರಲು ನಿರ್ಧರಿಸಿರುವ ಪ್ರಭಾಸ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಮೂಲಕ ನರೇಂದ್ರ ಮೋದಿ ರವರಿಗೆ ಆಂಧ್ರಪ್ರದೇಶದಲ್ಲಿ ಮತ್ತಷ್ಟು ಮತಗಳು ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ನರೇಂದ್ರ ಮೋದಿ ಅವರಿಗೆ ಮೋಸ ಮಾಡಿ ಮೈತ್ರಿ ತೆರೆದುಕೊಂಡ ಚಂದ್ರಬಾಬು ನಾಯ್ಡು ರವರಿಗೆ ಶಾಕ್ ಎದುರಾಗಿದೆ.

ಪ್ರಭಾಸ್ ರವರನ್ನು ರಾಜಕೀಯಕ್ಕೆ ಕರೆತಂದರೆ ಕೇವಲ ಆಂಧ್ರಪ್ರದೇಶದಲ್ಲಿ ಮಾತ್ರವಲ್ಲದೆ ತೆಲಂಗಾಣ ರಾಜ್ಯ ದಲ್ಲಿಯೂ ಸಹ ರಾಜಕೀಯ ಲೆಕ್ಕಾಚಾರಗಳು ಬದಲಾಗಲಿವೆ. ಬಾರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಭಾಸ್ ರವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ಮತ್ತೊಂದು ಚಿತ್ರ ರಿಲೀಸ್ ಮಾಡಲಿದ್ದು, ಚುನಾವಣೆ ಮುನ್ನವೇ ರಿಲೀಸ್ ಮಾಡುವ ಎಲ್ಲಾ ಯೋಜನೆಗಳು ಸಿದ್ಧವಾಗಿವೆ. ಈ ಮೂಲಕ ಆಂಧ್ರಪ್ರದೇಶ ಆಗು ತೆಲಂಗಾಣದಲ್ಲಿ ನರೇಂದ್ರ ಮೋದಿ ರವರಿಗೆ ಆನೆ ಬಲ ಬಂದಂತಾಗಿದೆ ಬಾಹುಬಲಿಯನ್ನು ತಡೆದು ನಿಲ್ಲುವ ಪರ್ಯಾಯ ನಾಯಕ ರಿಗಾಗಿ ವಿರೋಧಪಕ್ಷಗಳು ಹುಡುಕಾಟ ನಡೆಸುತ್ತವೆ.