ಫರ್ನಾಂಡಿಸ್ ರವರ ಬಗ್ಗೆ ನಿಮಗೆ ತಿಳಿದಿರದ 10 ಅಚ್ಚರಿಯ ಸಂಗತಿಗಳು

ಫರ್ನಾಂಡಿಸ್ ರವರ ಬಗ್ಗೆ ನಿಮಗೆ ತಿಳಿದಿರದ 10 ಅಚ್ಚರಿಯ ಸಂಗತಿಗಳು

ಹುಟ್ಟಿನಿಂದಲೂ ಹೋರಾಟಗಾರರ ಸ್ವಭಾವವನ್ನು ಹೊಂದಿದ ಜಾರ್ಜ್ ಫರ್ನಾಂಡಿಸ್ ಅವರು ತಮ್ಮ ಸಂಪೂರ್ಣ ಬದುಕನ್ನು ಸಾಮಾಜಿಕ ಸಮಾನತೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವ ಸಾಮಾನ್ಯ ಜನರಿಗಾಗಿ ಮುಡುಪಾಗಿಟ್ಟಿದ್ದರು ದೇಶದ ಆದರ್ಶ ರಾಜಕಾರಣಿಗಳ ಸಾಲಿನಲ್ಲಿ ಸಾಲಿನಲ್ಲಿ ಇವರು ಕೂಡ ನಿಲ್ಲುತ್ತಾರೆ. ಪ್ರವಾಹಕ್ಕೆ ವಿರುದ್ಧ ದಿಕ್ಕಿನಲ್ಲಿ ಈಜಿ ದಡ ಸೇರುವವರ ಮನೋಬಲವನ್ನು ಹೊಂದಿದ್ದ ಜಾರ್ಜ್ ರವರು ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಹಲವು ವರ್ಷಗಳಿಂದ ಅಲ್ಜಮೈರ್ ಕಾಯಿಲೆಗೆ ತುತ್ತಾಗಿ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಅವರು ಇಂದಿಲ್ಲ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಫರ್ನಾಂಡಿಸ್ ಅವರು ಕೇವಲ ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಇನ್ ನಮ್ಮನ್ನು ಅನಾಥರನ್ನಾಗಿ ಮಾಡಿ ವಿಧಿವಶರಾಗಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುತ್ತಾ ಇವರ ಬಗ್ಗೆ ಹತ್ತು ಅಚ್ಚರಿಯ ಸಂಗತಿಗಳನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತಿದ್ದೇವೆ.

1. ಮನೆಯ ಹಿರಿಮಗನಾಗಿ ಜನಿಸಿದ್ದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ರವರು ಶಾಲೆಯನ್ನು ಅರ್ಧಕ್ಕೆ ಬಿಟ್ಟು ಕ್ರೈಸ್ತ ಗುರು ಆಗುತ್ತೇನೆ ಎಂದು ಮನೆ ಬಿಟ್ಟಿದ್ದರು.

2. 1967 ರಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಎಸ್ ಕೆ ಪಾಟೀಲ್  ಅವರನ್ನು  ‘ಜೈಂಟ್ ಕಿಲ್ಲರ್’ಸೋಲಿಸಿ ಎಂಬ ಬಿರುದನ್ನೂ ಪಡೆದಿದ್ದರು.

3. 1974 ರಲ್ಲಿ 20 ದಿನಗಳ ಕಾಲ ರೈಲ್ವೆ ಮುಷ್ಕರವನ್ನು ಮುಂಚೂಣಿಯಲ್ಲಿ ನಡೆಸಿ ಇಡೀ ದೇಶವನ್ನು ನಡುಗಿಸಿದ್ದರು.

4. 1975-1977 ರವರಿಗೆ ಸಿಖ್ ವ್ಯಕ್ತಿಯಂತೆ ಘಟ್ಟ ಬೆಳೆಸಿಕೊಂಡು ಪೇಟ ಧರಿಸಿ ಮಾರುವೇಶದಲ್ಲಿ ಬಂಧನವಾಗುತ್ತೇನೆ ಎಂಬ ಭಯದಲ್ಲಿ ಕಾಲ ಕಳೆದಿದ್ದರು, ಯಾಕೆಂದರೆ ಒಂದು ವೇಳೆ ನಾನು ಬಂಧನವಾದರೆ ಎಷ್ಟೋ ಜನರಿಗೆ ನ್ಯಾಯ ಸಿಗುವುದಿಲ್ಲ ನನ್ನ ಹೋರಾಟ ಮುಂದುವರೆಯಬೇಕು ಎಂಬ ಉದ್ದೇಶದಿಂದ ಸಿಖ್ ವ್ಯಕ್ತಿಯಂತೆ ಜೀವನ ನಡೆಸಿದ್ದರು.

5. ಇಂದಿರಾಗಾಂಧಿ ರವರು ಭಾಷಣ ಮಾಡುತ್ತಿದ್ದ ಜಾಗಗಳಲ್ಲಿ ಸುತ್ತಮುತ್ತ ಡೈನಾಮೈಟ್ ಳನ್ನು ಕದ್ದು ಸ್ಪೋಟಿಸಿ ತಮ್ಮ ಲಾಭಕ್ಕಾಗಿ ಜನರ ಮೇಲೆ ಏರಿದ್ದ ತುರ್ತುಪರಿಸ್ಥಿತಿಯನ್ನು ವಾಪಸ್ಸು ಪಡೆಯುವಂತೆ ಹೋರಾಡುತ್ತಿದ್ದರು. ಈ ಘಟನೆಗಳಿಂದ ಹಲವಾರು ಬಾರಿ ಜೈಲುವಾಸವನ್ನು ಸಹ ಅನುಭವಿಸಿದ್ದರು.

6. 1977 ರಲ್ಲಿ ಬಿಹಾರದ ಮುಜಾಫರ್ ನಗರ ದಿಂದ ತಾವು ಬಂಧನದಲ್ಲಿದ್ದರೂ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದು ಬೀಗಿದ್ದರು.

7. ಕೋಕೋ ಕೋಲಾ, ಐಬಿಎಂ ಸೇರಿದಂತೆ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಭಾರತ ವಿಧಿಸಿದ್ದ ಕೆಲವು ನಿಯಮಗಳನ್ನು ಪಾಲಿಸದೇ ಇದ್ದಾಗ ಎಲ್ಲಾ ಕಂಪನಿಗಳ ವಿರುದ್ಧ ಹೋರಾಡಿ ಬಿಸಿ ಮುಟ್ಟಿಸಿದರು.

8. ಮಂಗಳೂರಿನಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲ್ವೆ ಯೋಜನೆಗೆ ನಾಂದಿ ಹಾಡಿದ್ದರು.

9. 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ತಾವೇ ಸ್ವತಹ ಸೈನಿಕರನ್ನು ಹುರಿದುಂಬಿಸಿ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಭಾರತ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

10. ಕೇಂದ್ರ ಸಚಿವರಾದ ಮೇಲೆ ತಮ್ಮ ದಿನನಿತ್ಯದ ಕೆಲಸಗಳಾದ ಬಟ್ಟೆ ತೊಳೆಯುವುದು ಹಾಗೂ ಅಡುಗೆ ಮಾಡಿಕೊಳ್ಳುವುದು ಹೀಗೆ ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು ಇದರ ಮೂಲಕ ಸರಳತೆಗೆ ಮತ್ತೊಂದು ಹೆಸರಾಗಿದ್ದರು.

ಹೀಗೆ ಹೇಳುತ್ತಾ ಹೋದರೆ ಇನ್ನೂ ಹತ್ತು ಹಲವಾರು ಅಚ್ಚರಿಯ ಸಂಗತಿಗಳನ್ನು ನಮಗೆ ಕೇಳಿಬರುತ್ತವೆ. ಕೇವಲ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ವೈಭೋಗದ ಜೀವನವನ್ನು ನಡೆಸುತ್ತಿರುವ ಈ ಕಾಲದಲ್ಲಿ ಕೇಂದ್ರ ರಕ್ಷಣಾ ಸಚಿವರು ಈ ರೀತಿಯ ಸಾಮಾನ್ಯ ಸರಳತೆಯ ಜೀವನವನ್ನು  ನಡೆಸುವುದನ್ನು ನಾವು ನೋಡುವುದು ಬಹಳ ವಿರಳ. ಇಂತಹ ಸಚಿವರನ್ನು ಪಡೆದ ನಾವೇ ಧನ್ಯ. ಮತ್ತೆ ಜಾರ್ಜ್ ಫರ್ನಾಂಡಿಸ್ ಅವರು ಹುಟ್ಟಿ ಬರಲಿ ಹಾಗೂ ಮತ್ತೊಮ್ಮೆ ಅನ್ಯಾಯದ ವಿರುದ್ಧ ಸಿಡಿದೇಳಲಿ ಎಂದು ಆಶಿಸುತ್ತೇವೆ.