ಅಮ್ಮನ ನೆನೆದು ಕಣ್ಣೀರಿಟ್ಟ ಕಿರುತೆರೆ ಅವನಿ: ರೀಲ್ ಅಲ್ಲ ರಿಯಲ್

ಅಮ್ಮನ ನೆನೆದು ಕಣ್ಣೀರಿಟ್ಟ ಕಿರುತೆರೆ ಅವನಿ: ರೀಲ್ ಅಲ್ಲ ರಿಯಲ್

ಜೊತೆ ಜೊತೆಯಲಿ ಎಂಬ ಧಾರವಾಹಿಯಲ್ಲಿ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡು ಇಡೀ ಕರ್ನಾಟಕದಲ್ಲಿ ಮನೆಮಾತಾಗಿದ್ದ ಕಿರುತೆರೆಯ ನಟಿ ಆಶಿತಾ ಚಂದ್ರಪ್ಪ ರವರು ಇತ್ತೀಚೆಗೆ ರಾಧಾ ರಮಣ ಧಾರವಾಹಿಯಲ್ಲಿ ಅವನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಆಶಿಕಾ ರವರು ಬಿಗ್ ಬಾಸ್ ಸ್ಪರ್ಧೆಯಿಂದ ಸೋತು ಹೊರಬಂದ ನಂತರ ರಾಧಾ ರಮಣ ದಾರವಾಹಿ ಎಲ್ಲಿ ನಕಲಿ ಅವನಿ ಪಾತ್ರದಲ್ಲಿ ನಟಿಸಿ ಮಿಂಚುತ್ತಿದ್ದಾರೆ. ಆದರೆ ಕಳೆದ ಹದಿಮೂರು ದಿನಗಳ ಹಿಂದೆ ಇವರ ಜೀವನದಲ್ಲಿ ನಡೆಯ ಬಾರದ ಘಟನೆ ನಡೆದುಹೋಗಿದೆ.

13 ದಿನಗಳ ಹಿಂದೆ ತಮ್ಮ ತಾಯಿಯನ್ನು ನಟಿ ಆಶಿಕಾ ಚಂದ್ರಪ್ಪನವರು ಕಳೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಮಾತೃ ವಿಯೋಗ ದಿಂದ ಆಶಿಕಾ ರವರು ಬಳಲುತ್ತಿದ್ದಾರೆ ಅಮ್ಮನನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ.

ಇದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಆಶಿಕಾ ಚಂದ್ರಪ್ಪನವರ ಅಮ್ಮ ನೀನು ನಮ್ಮನ್ನು ಬಿಟ್ಟು ಅದು ಮೂರು ದಿನಗಳಲಾಯಿತು, ದಿನೇ ದಿನೇ ಜೀವನವು ಕಷ್ಟ ಎನಿಸುತ್ತಿದೆ. ದಿನವೂ ನಮ್ಮನ್ನು ನೋಡಿ ನೀನು ಕರೆಯುತ್ತಿದ್ದ ರೀತಿ, ಅಳುತ್ತಿದ್ದ ಕೂಗು ಎಲ್ಲವನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿದ್ದೆ ಇಲ್ಲದ ರಾತ್ರಿಯನ್ನು ಕಳೆಯುತ್ತಿದ್ದೇನೆ ನಿನ್ನ ಮಡಿಲಲ್ಲಿ ಬಿಕ್ಕಿಬಿಕ್ಕಿ ಹೇಳಬೇಕೆಂದು ಅನಿಸುತ್ತಿದೆ. ಐ ಲವ್ ಯು ಮಿಸ್ ಯು ಸೋ ಮಚ್ ಎಂದು ಬರೆದುಕೊಂಡು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡಿದ್ದಾರೆ.

ಇವರಿಗೆ ಮತ್ತಷ್ಟು ಆತ್ಮಸ್ಥೈರ್ಯವನ್ನು ದೇವರು ತುಂಬಲಿ ಹಾಗೂ ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇವೆ.