ಮತ್ತೊಬ್ಬ ಕಾಂಗ್ರೆಸ್ ಶಾಸಕ ನಾಪತ್ತೆ, ಮೈತ್ರಿ ಗೆ ಮತ್ತೊಂದು ತಲೆನೋವು

ಹಲವಾರು ದಿನಗಳಿಂದಲೂ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂಬ ಸುದ್ದಿ ಖಚಿತಗೊಂಡರು ಸಹ ಬಿಜೆಪಿ ಪಕ್ಷದ ನಾಯಕರು ಆಹ್ವಾನಿಸದೇ ಇದ್ದರು ಕೆಲವು ಅತೃಪ್ತ ಮೈತ್ರಿ ಸರ್ಕಾರದ ಶಾಸಕರು ಬಿಜೆಪಿ ಸೇರುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ.

ಮೊದಲಿನಿಂದಲೂ ಆಪರೇಷನ್ ಕಮಲಕ್ಕೆ ಕೈ ಹಾಕದೆ, ತನ್ನ ಪಾಡಿಗೆ ತಾನು ವಿರೋಧ ಪಕ್ಷದಲ್ಲಿ ಕೂತುಕೊಂಡು ತಮಾಷೆಯ ನೋಡುತ್ತಿರುವ ಬಿಜೆಪಿ ಪಕ್ಷವು ಯಾವುದಾದರೂ ಶಾಸಕರು ಸಂಪೂರ್ಣ ಮನಸ್ಸಿನಿಂದ ಬಿಜೆಪಿ ಪಕ್ಷಕ್ಕೆ ಸೇರಿ ಕೊಳ್ಳುವುದಾದರೆ ಅದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಖಚಿತ ಪಡಿಸಿದೆ.

ಆದರೆ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷಗಳು ಆಪರೇಷನ್ ಕಮಲ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ಈತನ್ಮಧ್ಯೆ ಪ್ರತಿಬಾರಿಯೂ ಕಾಂಗ್ರೆಸ್ ನಾಯಕರಿಗೆ ಶಾಸಕರು ಕಣ್ಮರೆಯಾಗುತ್ತಿರುವುದು ಬಹಳ ಚಿಂತೆಗೀಡುಮಾಡಿದೆ ಈಗಾಗಲೇ ಕಾಂಗ್ರೆಸ್ ನಾಯಕರ ಕೈಗೆ ಹಲವಾರು ಶಾಸಕರು ಸಿಗುತ್ತಿಲ್ಲ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದಾರೆ.

ಈಗ ಮತ್ತೊಂದು ಸವಾಲು ಎದುರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಹೊಸ ತಲೆನೋವು ಆರಂಭವಾಗಿದೆ. ಬಿಜೆಪಿ ಸೇರುತ್ತಾರೆ ಎಂಬ ವದಂತಿ ಕೇಳಿ ಬರುತ್ತಿದ್ದ ಅಥಣಿ ಶಾಸಕರಾಗಿರುವ ಮಹೇಶ್ ಅವರು ದಿಢೀರ್ ನಾಪತ್ತೆಯಾಗಿ ದ್ದಾರೆ. ಮೊದಲಿನಿಂದಲೂ ರಮೇಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು ಕೇವಲ ನಾಲ್ಕು ದಿನಗಳಲ್ಲಿ ಮತ್ತೆ ಕಣ್ಮರೆಯಾಗಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Post Author: Ravi Yadav