ಮೋದಿ ಅವರನ್ನು ಗೆಲ್ಲಿಸಲು ಖುದ್ದು ಅಖಾಡಕ್ಕಿಳಿದ ಶಿವರಾಜ್ : ಮಾಸ್ಟರ್ ಪ್ಲಾನ್ ಏನು ಗೊತ್ತಾ??

ಮೋದಿ ಅವರನ್ನು ಗೆಲ್ಲಿಸಲು ಖುದ್ದು ಅಖಾಡಕ್ಕಿಳಿದ ಶಿವರಾಜ್ : ಮಾಸ್ಟರ್ ಪ್ಲಾನ್ ಏನು ಗೊತ್ತಾ??

ಪಂಚ ರಾಜ್ಯ ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಪಕ್ಷವು ಎಚ್ಚೆತ್ತುಕೊಂಡಿದೆ. ಆಡಳಿತವಿರೋಧಿ ಅಲೆಯಲ್ಲಿ ಸೋತಿ ದ್ದರೂ ಸಹ ಬಿಜೆಪಿ ಪಕ್ಷಕ್ಕೆ ಮುಂದಿನ ಲೋಕಸಭಾ ಚುನಾವಣೆ ಚುನಾವಣೆಯ ಸಮಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ಬಿಜೆಪಿ ತನ್ನದೇ ಆದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ನಿರತವಾಗಿದೆ.   ಪ್ರತಿಯೊಂದು ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಇನ್ನಿಲ್ಲದ  ಕಸರತ್ತುಗಳನ್ನು ನಡೆಸುತ್ತಿದೆ.

ನರೇಂದ್ರ ಮೋದಿರವರ ಅಲೆಗೆ ಯಾವುದೇ ಧಕ್ಕೆ ಇಲ್ಲ ಎಂಬ ಅಂಶ ಬಿಜೆಪಿ ಪಕ್ಷಕ್ಕೆ ತಿಳಿದಿದ್ದರು, ಕೇವಲ ಬಹುಮತ ಸಾಧಿಸುವುದು ಬಿಜೆಪಿ ಪಕ್ಷದ ಗುರಿ ಯಾಗಿಲ್ಲ, ಯಾಕೆಂದರೆ ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಬಿಜೆಪಿ ಪಕ್ಷವು ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಯನ್ನು ನಡೆಸಿದೆ. ಇದಕ್ಕೆ ಇನ್ನೂ ಸಾಕಷ್ಟು ಶ್ರಮ ಅವಶ್ಯಕತೆ ಇದೆ ಎಂಬುದು ಬಿಜೆಪಿ ಪಕ್ಷಕ್ಕೆ ತಿಳಿದಿದೆ.

ಆದ ಕಾರಣದಿಂದಲೇ ತನ್ನ ಬಳಿ ಇರುವ ಎಲ್ಲ ಅಸ್ತ್ರಗಳನ್ನು ಲೋಕಸಭಾ ಚುನಾವಣೆಯಲ್ಲಿ ಪ್ರಯೋಗಿಸಲು ಬಿಜೆಪಿ ಪಕ್ಷವು ಸಜ್ಜಾಗಿದೆ. ಈತನ್ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ  ಮಧ್ಯಪ್ರದೇಶದಲ್ಲಿ ಮತ್ತೊಂದು ದೊಡ್ಡ ಸವಾಲು ಎದುರಾಗಿದ್ದು ಹಗರಣಗಳ ಸರಮಾಲೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತನ್ನ ಕೊರಳಿಗೆ ಸುತ್ತಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ನಡೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆದರೆ ಇದೇ ಸಮಯದಲ್ಲಿ ಪಂಚರಾಜ್ಯ ಚುನಾವಣೆಯ ಸೋಲು ಬಿಜೆಪಿ ಪಕ್ಷಕ್ಕೆ ಹೊಡೆತ ನೀಡಲಿದೆ ಎಂದು ಉಳಿದ ಪಕ್ಷಗಳು ಯೋಚಿಸುತ್ತಿರುವಾಗ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಕ್ಷಮಿಸಿ ಸಾಮಾನ್ಯ ನಾಗರಿಕರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಮೋದಿ ಅವರನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ.

ಹೌದು ಬಿಜೆಪಿ ಪಕ್ಷವು ಶೇಕಡವಾರು ಮತಗಳಲ್ಲಿ ಮುಂದಿದ್ದರೂ ಅಧಿಕಾರ ಪಡೆಯುವಲ್ಲಿ ಮಧ್ಯಪ್ರದೇಶದಲ್ಲಿ ವಿಫಲವಾಯಿತು ಆದರೆ ಇಷ್ಟಕ್ಕೆ ಸುಮ್ಮನೆ ಕೂರದ ಮಧ್ಯಪ್ರದೇಶ ಬಿಜೆಪಿಯ ಸಾರಥಿಯಾದ ಶಿವರಾಜ್ ಸಿಂಗ್ ಚೌಹಾನ್ ರವರು ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ಈಗಿನಿಂದಲೇ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಮಧ್ಯಪ್ರದೇಶದಿಂದ ಹೆಚ್ಚು ಲೋಕಸಭಾ ಸೀಟುಗಳನ್ನು ಗೆಲ್ಲಿಸಿ ಕೊಡಲು ಇಡೀ ಮಧ್ಯಪ್ರದೇಶ ಉದ್ದಕ್ಕೂ ಸಮಾವೇಶಗಳನ್ನು ನಡೆಸಿ ಬಿಜೆಪಿ ರಥ ಯಾತ್ರೆಯ ಅಂಗವಾಗಿ ಜನರನ್ನು ಉದ್ದೇಶಿಸಿ ಮಾತನಾಡಿ ಜನರ ಸಮಸ್ಯೆಗಳನ್ನು ಆಲಿಸಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಪಣತೊಟ್ಟಿದ್ದಾರೆ.

ಈ ನಡೆಗೆ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿಸಿದ್ದ ಸಾಮಾನ್ಯರಲ್ಲಿ ಸಾಮಾನ್ಯವಾಗಿರುವ ಶಿವರಾಜ್ ಸಿಂಗ್ ಚೌಹಾಣ್ ರವರ ವರ್ಚಸ್ಸು ಏನು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ ಆದ ಕಾರಣದಿಂದ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.