ಮತ್ತೊಮ್ಮೆ ಮೋದಿಯೇ ನಂಬರ್ 1 , ಅಧಿಕಾರದ ಗದ್ದುಗೆ ಖಚಿತ??

ಮತ್ತೊಮ್ಮೆ ಮೋದಿಯೇ ನಂಬರ್ 1 , ಅಧಿಕಾರದ ಗದ್ದುಗೆ ಖಚಿತ??

ಮುಂದಿನ 2019ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತಿಯೊಂದು ಸಮೀಕ್ಷೆಯು ಇನ್ನಿಲ್ಲದ ಕುತೂಹಲವನ್ನು ಕೆರಳಿಸುತ್ತದೆ. ಹಲವಾರು ಸಮೀಕ್ಷೆಗಳು ಇತ್ತಿಚಿಗೆ ಹೊರಬಂದಿದೆ, ಎಲ್ಲಾ ಸಮೀಕ್ಷೆಯಲ್ಲಿಯೂ ಬಿಜೆಪಿ ಪಕ್ಷವೇ ಮೇಲುಗೈ ಪಡೆಯಲಿದೆ ಎಂಬ ಅಂಶ ಬಯಲಾಗುತ್ತಿದ್ದು, ಕೆಲವು ಸಮೀಕ್ಷೆಗಳು ಮಾತ್ರ ಬಹುಮತ ಬರುವುದಿಲ್ಲ ಎಂಬ ಮಾತುಗಳನ್ನು ಹೇಳುತ್ತೇವೆ ಆದರೆ ಈ ಎಲ್ಲ ಲೆಕ್ಕಾಚಾರಗಳನ್ನು ಮೋದಿ ರವರ ನಾಯಕತ್ವ ಉಲ್ಟಾ ಮಾಡಲಿದೆ ಎಂಬುದು ಮತ್ತೊಂದು ಸಮೀಕ್ಷೆಯಿಂದ ಹೊರಬಿದ್ದಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದ ನ್ಯಾಷನಲ್ ಟ್ರಸ್ಟ್ ‘2019ರ ಚುನಾವಣೆಯಲ್ಲಿ ನಾಗರಿಕರು ಪ್ರಧಾನಿ ಮೋದಿ ಬಗ್ಗೆ ನಂಬಿಕೆ, ವಿಶ್ವಾಸ ವ್ಯಕ್ತಪಡಿಸುವರೇ ಅಥವಾ ಬೇರೆಯವರನ್ನು ಆಯ್ಕೆ ಮಾಡುವುರೇ’ ಎಂಬ ವಿಷಯದ ಮೇಲೆ ಈ ಸಮೀಕ್ಷೆ ನಡೆಸಲಾಗಿತ್ತು.  ಮುಂಬೈ ನೆಟ್ವರ್ಕ್ 18 ಹಾಗೂ ಪ್ರತಿಷ್ಠಿತ ಫಸ್ಟ್ ಪೋಸ್ಟ್ ಪತ್ರಿಕೆ ನಡೆಸಿರುವ ಈ ಸಮೀಕ್ಷೆಯಲ್ಲಿ ವಿರೋಧ ಪಕ್ಷಗಳಿಗೆ ಶಾಕ್ ನೀಡುವಂತಹ ಫಲಿತಾಂಶ ಹೊರಬಿದ್ದಿದ್ದು ಯಾರು ಏನೇ ಆರೋಪ ಮಾಡಿದರು ಮೋದಿ ಅವರ ವರ್ಚಸ್ಸು ಮಾತ್ರ ಕಡಿಮೆಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹೌದು ಶೇಕಡ 53ರಷ್ಟು ಜನ ನರೇಂದ್ರ ಮೋದಿ ಅವರು ವಿಶ್ವಾಸಾರ್ಹ ರಾಜಕೀಯ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಳಿದಂತೆ ರಾಹುಲ್ ಗಾಂಧಿ ಅವರಿಗೆ ಕೇವಲ 26.9 ರಷ್ಟು ಜನ ವಿಶ್ವಾಸಾರ್ಹ ನಾಯಕ ಎಂದು ನಂಬಬಹುದು ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದಂತೆ ಮಮತಾ ಬ್ಯಾನರ್ಜಿ ಹಾಗೂ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ರವರು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.

ಇನ್ನು ಪ್ರಿಯಾಂಕ ಗಾಂಧಿ ರಾಜಕೀಯ ಎಂಟ್ರಿ ನಂತರ ದೇಶದ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು ಆದರೆ ಪ್ರಿಯಾಂಕಾ ರವರು ಶೇಕಡಾ ಒಂದಕ್ಕಿಂತಲೂ ಕಡಿಮೆ ಮತವನ್ನು ಪಡೆದಿದ್ದಾರೆ. ಕೇವಲ ಆಂಧ್ರಪ್ರದೇಶ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅವರು ಜನಪ್ರಿಯ ನಾಯಕರಾಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು ಉಳಿದ ಯಾವ ರಾಜ್ಯದಲ್ಲಿಯೂ ಸಹ ಮೋದಿ ರವರ ಅಲೆಯ ಮುಂದೆ ರಾಹುಲ್ ಗಾಂಧಿ ರವರ ಜನಪ್ರಿಯತೆ ಕೊಚ್ಚಿಕೊಂಡು ಹೋಗಿದೆ.