ಮತ್ತೊಮ್ಮೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಮೋದಿ: ಬ್ರಿಟಿಷರ ಪದ್ದತಿಗೆ ಬ್ರೇಕ್

ಕೇವಲ ಕೆಲವೇ ಕೆಲವು ವರ್ಷಗಳ ಹಿಂದೆ ಭಾರತವು ತನ್ನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುವಂತಹ ಪರಿಸ್ಥಿತಿ ಬರುವ ಮುನ್ಸೂಚನೆಗಳು ಕಾಣಸಿಗುತ್ತಿದ್ದವು ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಭಾರತದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ ಅದರಂತೆಯೇ ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಆರಂಭಿಸಿದ್ದ ಪದ್ಧತಿಯು ಭಾರತದಲ್ಲಿ ಇಂದು ಕೊನೆಗೊಂಡಿದೆ. 70 ವರ್ಷಗಳಿಂದ ಯಾವ ಸರ್ಕಾರವೂ ಮಾಡದ ಸಾಧನೆಯನ್ನು ಮೋದಿ ಅವರು ಗಣ ರಾಜ್ಯೋತ್ಸವದ ದಿನದಂದು ನೆರವೇರಿಸಿದ್ದಾರೆ.

ಭಾರತಕ್ಕೆ ಸ್ವತಂತ್ರ ಬಂದು ಹಲವಾರು ವರ್ಷಗಳು ಕಳೆದರೂ ಹಲವಾರು ಬ್ರಿಟಿಷ್ ಕಾಲದ ಪದ್ಧತಿಗಳು ಹಾಗೇ ಉಳಿದುಕೊಂಡು ಬಂದಿವೆ. ಇದರಿಂದ ಸಾಮಾನ್ಯವಾಗಿ ಭಾರತದ ಸಂಸ್ಕೃತಿ ಅಂತ್ಯವಾಗಲಿದೆ ಹಾಗೂ ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳ ಪದ್ಧತಿಗಳನ್ನು ಅಳವಡಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಎಲ್ಲಾ ಮಾತುಗಳಿಗೂ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಉತ್ತರ ನೀಡುತ್ತಾ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತ ಬಂದಿದ್ದಾರೆ.

ಈ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಹಲವಾರು ವಿಷಯಗಳು ಪ್ರಪ್ರಥಮವಾಗಿ ಕಾಣಸಿಗುತ್ತವೆ. ಮೊಟ್ಟ ಮೊದಲ ಬಾರಿಗೆ ನೇತಾಜಿ ಸೇನೆಯ ಹಲವಾರು ಸೈನಿಕರು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ ಈಗ ಮತ್ತೊಂದು ಅಂಶ ಹೊರಬಿದ್ದಿದೆ ಹಲವಾರು ಬದಲಾವಣೆಗೆ ಗಣರಾಜ್ಯೋತ್ಸವ ಸಾಕ್ಷಿಯಾಗಿದೆ ಹಾಗೂ ಭಾರತ ಬದಲಾಗುತ್ತಿದೆ, ಕ್ಷಮಿಸಿ ಅಲ್ಲ ಭಾರತ ತನ್ನ ಸಂಸ್ಕೃತಿಯನ್ನು ಮತ್ತೆ ಅಳವಡಿಸಿಕೊಳ್ಳುತ್ತಿದೆ ಎಂಬ ಆಶಾಭಾವನೆ ಎಲ್ಲರಲ್ಲೂ ಮೂಡಿದೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಪ್ರತಿಬಾರಿಯೂ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಬ್ರಿಟಿಷರು ಅಳವಡಿಸಿಕೊಂಡು ಬಂದಿದ್ದ ಮಾರ್ಷಿಯಲ್ ಟ್ಯೂನ್ ಅನ್ನು ಅಳವಡಿಸಿಕೊಂಡು ಸೇನೆಯು ಪರೆಡ್ ನಡೆಸುತ್ತಿತ್ತು. ಆದರೆ ಇದೇ ಮೊಟ್ಟಮೊದಲ ಬಾರಿಗೆ ಭಾರತದ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಶಂಖನಾದವನ್ನು ಬಳಸಿ ಶಸ್ತ್ರಾಸ್ತ್ರ ಪಡೆಗಳಿಗಾಗಿ ಪ್ರತ್ಯೇಕ ಮಾರ್ಷಿಯಲ್ ಟ್ಯೂನನ್ನು ಭಾರತದ ಡಾಕ್ಟರ್ ತನುಜ ರವರು ವಿವೇಕ್ ಸೋಲ್ ರವರ ಕವಿತೆಯನ್ನು ಆದರಿಸಿ ರಚಿಸಲಾಗಿದ್ದ ಶಂಖನಾದವನ್ನು, ಗಣರಾಜ್ಯೋತ್ಸವದ ಪರೇಡ್ ನಲ್ಲಿ ಬಳಸಲಾಯಿತು.

ಭಾರತದ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಶಂಖನಾದವನ್ನು ಭಾರತೀಯ ಸೈನಿಕರು ತಮ್ಮ ಪೆರೇಡ್ ಗಳಲ್ಲಿ ಬಳಸಿರುವುದು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದಂತಾಗಿದೆ ಹಾಗೂ ಭಾರತೀಯ ರಚಿಸಿರುವ ಮಾರ್ಷಿಯಲ್ ಟ್ಯೂನನ್ನು ಇನ್ನು ಮುಂದೆ ನಮ್ಮ ದೇಶದ ಹೆಮ್ಮೆಯ ಸೈನಿಕರು ತಮ್ಮ ಪೆರೇಡ್ ಗಳಲ್ಲಿ ಅಳವಡಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Post Author: Ravi Yadav