ಪಾರಿವಾಳ ಜೀವ ಉಳಿಸಲು ರೈಲ್ವೆ ಇಲಾಖೆ ಮಾಡಿದ ಕೆಲಸವೇನು ಗೊತ್ತಾ??

ಪಾರಿವಾಳ ಜೀವ ಉಳಿಸಲು ರೈಲ್ವೆ ಇಲಾಖೆ ಮಾಡಿದ ಕೆಲಸವೇನು ಗೊತ್ತಾ??

ರೈಲ್ವೆ ಇಲಾಖೆಯ ಹಲವಾರು ಕಾರ್ಯಗಳು ಶ್ಲಾಘನೆಗೆ ಒಳಗಾಗುತ್ತಿವೆ. ಭಾರತದ ಇತಿಹಾಸದಲ್ಲಿ ಎಂದೂ ಕೇಳರಿಯದ ಘಟನೆಗಳನ್ನು ರೈಲ್ವೆ ಇಲಾಖೆ ಮಾಡಿ ತೋರಿಸುತ್ತಿದೆ. ಸರ್ಕಾರಿ ಇಲಾಖೆ ಎಂದರೆ ಒಂದು ಬೇಜವಾಬ್ದಾರಿ ಇಲಾಖೆ ಎಂಬ ಕಳಂಕ ಪಟ್ಟಿಯಿಂದ ಹೊರ ಬಂದಿರುವ ರೈಲ್ವೆ ಇಲಾಖೆಯು ಪ್ರತಿಯೊಬ್ಬರ ಮಾತಿಗೆ ಸ್ಪಂದಿಸುತ್ತದೆ ಎಂಬ ಭರವಸೆ ಮೂಡಿಸಿದೆ. ಭಾರತ ದೇಶವು ಬದಲಾಗುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಈಗ ಸಿಕ್ಕಿದೆ.

ಇತ್ತೀಚೆಗಷ್ಟೇ ರೈಲ್ವೆ ಸಚಿವರು ಯುವತಿಯ ಸ್ನೇಹಿತನ ಕೇವಲ ಒಂದು ಟ್ವೀಟ್ ಗೆ ಸ್ಪಂದಿಸಿ ಕೆಲವೇ ಕೆಲವು ಗಂಟೆಗಳಲ್ಲಿ ಯುವತಿಯ ಸಹಾಯಕ್ಕೆ ಬಂದಿದ್ದ ಘಟನೆ ಇನ್ನು ಜನರ ಮನದಲ್ಲಿ ಉಳಿದಿರುವಾಗಲೇ ಈಗ ಮತ್ತೊಂದು ಕೆಲಸ ಇಡೀ ದೇಶದ ಶ್ಲಾಘನೆಗೆ ಒಳಗಾಗಿದೆ, ಅಷ್ಟೇ ಅಲ್ಲದೆ ಮಾನವೀಯತೆಗೆ ಸಮಾಜದಲ್ಲಿ ಜಾಗವಿಲ್ಲ ಎನ್ನುವ ಜನರಿಗೆ ಪಾರಿವಾಳ ರಕ್ಷಿಸಲು ರೈಲ್ವೆ ಇಲಾಖೆಯ ಮಾಡಿದ ಕೆಲಸ ನೋಡಿದರೆ ಶಭಾಷ್ ಎನ್ನುತ್ತೀರಾ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಮುಂಬೈನ ಪಶ್ಚಿಮ ರೈಲ್ವೆ ಅಧಿಕಾರಿಗಳಿಗೆ ಇದ್ದಕ್ಕಿದ್ದ ಹಾಗೆ ಒಂದು ಕರೆ ಬರುತ್ತದೆ. ಗಾಳಿಪಟದ ದಾರ 2 ಪಾರಿವಾಳಗಳ ಕಾಲಿಗೆ ಸುತ್ತಿಕೊಂಡಿರುತ್ತದೆ, ಈ ಪಾರಿವಾಳಗಳು ರೈಲ್ವೇ ಎಲೆಕ್ಟ್ರಿಕ್ ಲೈನ್ ಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದು ಕಂಡು ಬಂದ ಪ್ರಯಾಣಿಕರೊಬ್ಬರು ತಕ್ಷಣವೇ ಮಾನವೀಯತೆ ಮೆರೆದು ರೈಲ್ವೆ ಇಲಾಖೆಗೆ ತಿಳಿಸಿದ್ದಾರೆ.

ಇದಕ್ಕೆ ಕೆಲವೇ ಕೆಲವು ಕ್ಷಣಗಳಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಬಿಸಿ ಗಂಟೆ ಗಳಲ್ಲಿಯೂ ಸಹ ರೈಲನ್ನು ಐದು ನಿಮಿಷಗಳ ಸ್ಥಗಿತಗೊಳಿಸಿ ಸಂಪೂರ್ಣ ರೈಲ್ವೆ ಸಂಚಾರವನ್ನು ತಡೆಹಿಡಿದು ಫೈಯರ್ ಬ್ರಿಗೇಡ್ ಸಿಬ್ಬಂದಿ ನೆರವಿನಿಂದ ಪಾರಿವಾಳಗಳನ್ನು ರಕ್ಷಿಸಿ ಬಂಧಮುಕ್ತ ಗೊಳಿಸುತ್ತಾರೆ.

ತದನಂತರ ರೈಲ್ವೆ ಸಂಚಾರ ಎಂದಿನಂತೆ ಸಾಗಿದೆ ಪಾರಿವಾಳದ ಪುಟ್ಟ ಜೀವವನ್ನು ಕಾಳಜಿಯಿಂದ ರಕ್ಷಿಸಲು ಸಮಯ ಬೀಸಿದ ಪಶ್ಚಿಮ ರೈಲ್ವೆ ಅಧಿಕಾರಿಗಳ ಕಾರ್ಯಕ್ಕೆ ಜನರಿಂದ ಬಾರಿ ಶ್ಲಾಘನೆ ವ್ಯಕ್ತವಾಗಿದೆ ಇಂತಹ ಸಣ್ಣ ಪುಟ್ಟ ಸಂಗತಿಗಳೇ ಮಾನವೀಯತೆ ನಮ್ಮ ಸಮಾಜದಲ್ಲಿ ಇನ್ನು ಬದುಕಿದೆ ಎಂಬುದನ್ನು ತಿಳಿಸಿ ಕೊಡುತ್ತವೆ.ಒಟ್ಟಿನಲ್ಲಿ ರೈಲ್ವೆ ಇಲಾಖೆಯ ಈ ರೀತಿ ಅದ್ಭುತ ಕೆಲಸಗಳು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.