ದಾಖಲೆಗಳನ್ನು ಉಡೀಸ್ ಮಾಡಿ ನಂಬರ್ 1 ಪಟ್ಟಕ್ಕೆ ಏರಿದ ಧಾರವಾಹಿ ಯಾವುದು ಗೊತ್ತಾ??

ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ಧಾರವಾಹಿಗಳದ್ದೇ ಹವಾ. ಇತ್ತೀಚೆಗಂತೂ ಒಂದರಮೇಲೊಂದು ಧಾರವಾಹಿಗಳು ಜನರನ್ನು ಆಕರ್ಷಿಸುತ್ತಿವ. ಹಾಗೂ ಟಿ ಆರ್ ಪಿ ಗಾಗಿ ಕಾದಾಡುತ್ತವೆ. ಜನರನ್ನು ಆಕರ್ಷಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಒಂದು ಸಿನಿಮಾ ನಿರ್ಮಾಣ ಕ್ಕಿಂತಲೂ ಹೆಚ್ಚು ಹಣವನ್ನು ಧಾರವಾಹಿ ಮೇಲೆ ಖರ್ಚು ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

ಇಂತಹ ಸ್ಪರ್ಧಾ ಯುಗದಲ್ಲಿ ನಂಬರ್ ಒನ್ ಪಟ್ಟಕ್ಕೆ ಏರಲು ಪ್ರತಿಯೊಂದು ಧಾರವಾಹಿ ನಿಲ್ಲದ ಸಾಹಸವನ್ನು ಮಾಡುತ್ತದೆ. ಅದರಲ್ಲಿಯೂ ಕಲರ್ಸ್ ಕನ್ನಡದ  ಕೆಲವು  ಧಾರವಾಹಿಗಳ ಸನ್ನಿವೇಶಗಳನ್ನು ನೀವು ನೋಡಿದರೆ, ಯಾವ ಚಿತ್ರದ ಮೇಕಿಂಗ್ ಕಡಿಮೆ ಇಲ್ಲ ಎಂಬಂತೆ ಭಾಸವಾಗುತ್ತಿತ್ತು. ಆದ ಕಾರಣದಿಂದಲೇ ಕಳೆದ ವರ್ಷ  ಕಲರ್ಸ್ ಕನ್ನಡ ವಾಹಿನಿಯು ನಂಬರ್ ಒನ್ ಪಟ್ಟದಲ್ಲಿ ಬೀಗುತ್ತಿತ್ತು.

ಹೌದು, ಕಳೆದ ಸಂಪೂರ್ಣ ವರ್ಷ ಕಲರ್ಸ್ ಕನ್ನಡದ ಧಾರವಾಹಿಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಕಲರ್ಸ್ ಕನ್ನಡದ ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ, ರಾಧಾ ರಮಣ, ಪದ್ಮಾವತಿ ಸೇರಿದಂತೆ ಹಲವಾರು ಧಾರವಾಹಿಗಳು ಉಳಿದ ಚಾನೆಲ್ ಗಳ ಧಾರವಾಹಿಗಳನ್ನು ಮೀರಿಸಿ‌, ಎದುರಾಳಿಗೆ ಇಲ್ಲದಂತೆ ಮುನ್ನುಗ್ಗುತ್ತಿದವು.

ಇಂತಹ ಸಮಯದಲ್ಲಿ ಕಲರ್ಸ್ ಕನ್ನಡ ಚಾನಲ್ ಗೆ 2019 ವರ್ಷದ ಮೊದಲಲ್ಲಿ ಶಾಕ್ ಎದುರಾಗಿದೆ.  ಜೀ ವಾಹಿನಿಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭವಾದ ಧಾರವಾಹಿಯು ಎಲ್ಲಾ ಕಲರ್ಸ್ ಕನ್ನಡದ  ಧಾರವಾಹಿಗಳನ್ನು  ಮೀರಿಸಿ ನಂಬರ್ ಒನ್ ಪಟ್ಟಕ್ಕೆ ಏರಿದೆ.

ಅಷ್ಟಕ್ಕೂ ಆ ಧಾರವಾಹಿ ಯಾವುದು ಗೊತ್ತಾ? ಅಷ್ಟೇ ಅಲ್ಲದೆ ನಂಬರ್ ಒನ್ ಚಾನೆಲ್ ಯಾವುದು ಗೊತ್ತಾ??

ಮೊದಲಿನಿಂದಲೂ ಕಲರ್ಸ್ ಕನ್ನಡ ಧಾರವಾಹಿಗಳು ಅಧಿಪತ್ಯವನ್ನು ಸ್ಥಾಪಿಸಿದ್ದವು. ಆದರೆ ಕೆಲವೇ ಕೆಲವು ದಿನಗಳ ಹಿಂದೆ ತೆರೆಕಂಡ ಜೀ ಕನ್ನಡದಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ ನೋಡುಗರ ಮನ ಗೆದ್ದು ಉಳಿದ ಎಲ್ಲ ಧಾರವಾಹಿಗಳನ್ನು ಮೀರಿಸಿ ಟಿಆರ್ ಪಿ ರೇಟಿಂಗ್ ನಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಇದರಿಂದ ಸಾಮಾನ್ಯವಾಗಿಯೇ ಕಲರ್ಸ್ ಕನ್ನಡದಲ್ಲಿ ಆತಂಕ ಎದುರಾಗಿದ್ದು ಮುಂದೇನು ಎಂಬ ಚಿಂತೆ ಕಾಡಿದೆ. ಯಾಕೆಂದರೆ ಕಮಲಿ ಧಾರವಾಹಿ, ಸರಿಗಮಪ ರಿಯಾಲಿಟಿ ಶೋ ಮತ್ತಷ್ಟು ನೋಡುಗರನ್ನು ಆಕರ್ಷಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಇನ್ನೂ ಕೆಳಗೆ ಹೋಗುವ ಆತಂಕ ಕಲರ್ಸ್ ಕನ್ನಡಕ್ಕೆ ಎದುರಾಗಿದೆ.

ಮೊದಲಿನಿಂದಲೂ ಆಧಿಪತ್ಯ ಸ್ಥಾಪಿಸಿದ ಕಲರ್ಸ್ ಕನ್ನಡದ ಟಿಆರ್ ಪಿ ರೇಟಿಂಗ್ ಅನ್ನು ಮೀರಿ ಇಂದು ಜೀ ವಾಹಿನಿ ಒನ್ ನಂಬರ್ ಒನ್ ಚಾನೆಲ್ ಆಗಿ ಹೊರಹೊಮ್ಮಿದ್ದು, ಇದೇ ಗೆಲುವನ್ನು ಇಡೀ ವರ್ಷ ಮುಂದುವರಿಸುವುದು ಜಿ ಚಾನೆಲ್ ನ ಗುರಿಯಾಗಿದೆ ಎನ್ನಲಾಗಿದೆ. ಆದರೆ ಈ ಎಲ್ಲದರ ನಡುವೆ ಕಮಲಿ ಧಾರವಾಹಿ ಯೂ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿ ನಂಬರ್ ಒನ್ ಧಾರಾವಾಹಿಯಾಗಿ ಹೊರಹೊಮ್ಮಿದೆ.

Post Author: Ravi Yadav