ಸಿಎಂ ರಾಜಿನಾಮೆ?: ಈಗಲ್ಟನ್ ನಲ್ಲಿ ಭಿನ್ನಮತ ಸ್ಪೋಟ

ಸಿಎಂ ರಾಜಿನಾಮೆ?: ಈಗಲ್ಟನ್ ನಲ್ಲಿ ಭಿನ್ನಮತ ಸ್ಪೋಟ

ರಾಜ್ಯ ರಾಜಕಾರಣವೂ ಪ್ರತಿ ನಿಮಿಷಕ್ಕೆ ಒಂದು ಹೊಸ ತಿರುವನ್ನು ಪಡೆದುಕೊಳ್ಳುತ್ತಾ ಸಾಗಿದೆ. ಈ ಸುದ್ದಿ ಇನ್ನೇನು ಖಚಿತವಾಯಿತು ಎನ್ನುವಷ್ಟರಲ್ಲಿ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ, ಈ ಎಲ್ಲಾ ವಿದ್ಯಮಾನಗಳು ಜನರನ್ನು ಬಾರಿ ಚಿಂತೆಗೀಡು ಮಾಡಿದೆ. ಶಾಸಕರು ಅಭಿವೃದ್ಧಿಯ ಹಾದಿಯನ್ನು ಬಿಟ್ಟು ಅಧಿಕಾರಕ್ಕಾಗಿ ನಡೆಸುತ್ತಿರುವ ಲಾಬಿಗಳನ್ನು ನೋಡಿದರೆ, ಇವರಿಗೆ ನಾವ್ಯಾಕೆ ಮತ ನೀಡಿದ್ದೇವೆ ಎಂಬ ಪ್ರಶ್ನೆಯನ್ನು ಅವರನ್ನು ಅವರೇ ಕೇಳಿ ಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.  ಹಲವಾರು ಏಳುಬೀಳುಗಳನ್ನು ಕಂಡಿರುವ ಮೈತ್ರಿ ಸರ್ಕಾರಕ್ಕೆ ಈಗ ಮತ್ತೊಂದು ಕಂಟಕ ಎದುರಾಗಿದ್ದು ಕುಮಾರಸ್ವಾಮಿ ರವರ ತಲೆದಂಡ ವಾಗಲೇ ಬೇಕು ಎಂಬ ಪಟ್ಟು ಕೇಳಿ ಬಂದಿದೆ.

ಒಂದು ಕಡೆ ಬಿಜೆಪಿ ಪಕ್ಷವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಖಚಿತಪಡಿಸಿದರು ಭಿನ್ನಾಭಿಪ್ರಾಯಗಳನ್ನು ತಮ್ಮ ಪಕ್ಷದಲ್ಲಿಯೇ ಇಟ್ಟುಕೊಂಡು ಬಿಜೆಪಿ ಪಕ್ಷದ ಮೇಲೆ ಗೂಬೆ ಕೂರಿಸಿ ತನ್ನ ಪಕ್ಷದ ಎಲ್ಲಾ ಶಾಸಕರನ್ನು ಈಗಲ್ಟನ್ ರೆಸಾರ್ಟ್ ನಲ್ಲಿ ಬಂಧಿಸಿರುವ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣಾ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಮೈತ್ರಿ ಸರ್ಕಾರದಲ್ಲಿ ಹಲವಾರು ಗೊಂದಲಗಳು ಶಾಸಕರನ್ನು ಕಾಡುತ್ತಿವೆ ಕೆಲವು ಶಾಸಕರು ತಮಗೆ ಅನುದಾನ ನೀಡಿಲ್ಲ ಎಂದು ಬಂಡಾಯವೆದ್ದಿದ್ದರೆ ಇನ್ನು ಕೆಲವರು ತಮಗೆ ಅಧಿಕಾರ ನೀಡಿಲ್ಲ ಎಂದು ಬಂಡಾಯ ಎದ್ದಿದ್ದಾರೆ. ಈ ಎಲ್ಲದರ ನಡುವೆ ರೆಸಾರ್ಟ್ ರಾಜಕೀಯ ಮತ್ತಷ್ಟು ರಂಗೇರಿದೆ. ಕೆಲವೇ ಕೆಲವು ಗಂಟೆಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದ ಜನ ಕರ್ನಾಟಕದ ರಾಜಕೀಯ ಪರಿಸ್ಥಿತಿ ಅತ್ಯಂತ ದಾರುಣ ಘಟ್ಟಕ್ಕೆ ತಲುಪಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ತಡರಾತ್ರಿ ಪಾರ್ಟಿಯಲ್ಲಿ ಕೈ ಶಾಸಕರು ಒಬ್ಬರನ್ನು ಒಬ್ಬರು ಬಡಿದಾಡಿಕೊಂಡು ಬಾಟಲ್ ಗಳಲ್ಲಿ ತಲೆಗಳಿಗೆ ಹೊಡೆದಾಡಿ ಕೊಂಡಿದ್ದಾರೆ ಎನ್ನುವ ಅಂಶವೂ ಹೊರಬಿದ್ದ ಬೆನ್ನಲ್ಲೇ   ಕುಮಾರಸ್ವಾಮಿ ಅವರ ವಿರುದ್ಧ ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಸಿಡಿದೆದ್ದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಮಾಹಿತಿಯು ಕುಮಾರಸ್ವಾಮಿ ರವರಿಗೆ ಹೊಸ ತಲೆನೋವು ತಂದೊಡ್ಡಿದೆ

ಮೊದಲಿನಿಂದಲೂ ಕಾಂಗ್ರೆಸ್ ನ ಹಲವು ಶಾಸಕರಿಗೆ ಕುಮಾರಸ್ವಾಮಿ ಅವರು ಸಿಎಂ ಆಗಿ ಮುಂದುವರಿಯುವುದು ಇಷ್ಟವಿರಲಿಲ್ಲ. ಆದರೆ ಹೈಕಮಾಂಡ್ ಆದೇಶದ ಮೇರೆಗೆ ಸುಮ್ಮನೆ ಕುಳಿತಿದ್ದರು ಈಗ ಮತ್ತಷ್ಟು ರೊಚ್ಚಿಗೆದ್ದಿರುವ ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ರವರ ವಿರುದ್ಧ ಬಂಡಾಯವೆದ್ದಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಅವರು ರಾಜಿನಾಮೆ ನೀಡಲೇಬೇಕು ಎಂದು ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾಹಿತಿಯು ಈಗಷ್ಟೇ ಮಾಧ್ಯಮಗಳಲ್ಲಿ ಪ್ರಕಟನೆ ಗೊಳ್ಳುತ್ತಿದೆ. ಕಾಂಗ್ರೆಸ್ ಶಾಸಕರ ಈ ನಡೆಯಿಂದ ರಾಜ್ಯ ರಾಜಕಾರಣವು ಇನ್ನೂ ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅದೇ ನಡೆದಲ್ಲಿ ಕುಮಾರಸ್ವಾಮಿ ರವರ ಮುಂದಿನ ನಡೆ ಏನಾಗಬಹುದು ಎಂಬುದು ಸಹ ತರ್ಕಕ್ಕೆ ನಿಲ್ಲುತ್ತಿಲ್ಲ.

ಒಟ್ಟಿನಲ್ಲಿ ಈ ಎಲ್ಲಾ ಶಾಸಕರು ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಾಜ್ಯದ ಅಭಿವೃದ್ಧಿಯ ಕಡೆ ಯಾವಾಗ ಗಮನಹರಿಸುತ್ತಾರೆ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಪಕ್ಷದಲ್ಲಿ ಕಚ್ಚಾಟಗಳು ಇನ್ನೂ ಮುಗಿದಿಲ್ಲ. ಈ ಎಲ್ಲದರ ನಡುವೆ ಮತ ನೀಡಿ ದವರು ತಲೆ ಚಚ್ಚಿಕೊಳ್ಳುವ ಅಂತಹ ಪರಿಸ್ಥಿತಿ ಎದುರಾಗಿದೆ.