ಮಸೀದಿಯ ಧ್ವನಿವರ್ಧಕಗಳಿಗೆ ಶಾಶ್ವತ ಪರಿಹಾರ ಸೂಚಿಸಿದ ನಟಿ ಕಂಗನಾ ರನೌತ್

ಹಲವಾರು ವರ್ಷಗಳಿಂದಲೂ ಭಾರತದಲ್ಲಿ ಮಸೀದಿಯ ಧ್ವನಿವರ್ಧಕಗಳು ಮಸೀದಿ ಅಷ್ಟೇ ಅಲ್ಲದೆ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಸದ್ದು ಮಾಡುತ್ತಿವೆ. ಕೆಲವರು ಅಜಾನ್ ಕೂಗುವ ಸಮಯದಲ್ಲಿ ಶಬ್ದ ಮಾಲಿನ್ಯವಾಗುತ್ತದೆ ಎಂದು ಧ್ವನಿ ಎತ್ತಿದ್ದಾರೆ. ಇನ್ನೂ ಕೆಲವರು ಭಾರತದಲ್ಲಿ ಹಿಂದೂಗಳು ಹಬ್ಬ ಆಚರಿಸುವ ವೇಳೆಯಲ್ಲಿ ಪೊಲೀಸರ ಅನುಮತಿ ಪಡೆದು ದ್ವನಿವರ್ಧಕ ಗಳನ್ನು ಕಡಿಮೆ ಬಳಸಬೇಕು ಆದರೆ ಅಲ್ಪ ಸಂಖ್ಯಾತರಿಗೆ ಯಾವ ಕಾನೂನು ಅನ್ವಯವಾಗುವುದಿಲ್ಲ ಎಂದು ಆರೋಪಿಸುತ್ತಾರೆ.

ಭಾರತದಲ್ಲಿ ಧ್ವನಿವರ್ಧಕಗಳ ಪರ ವಿರೋಧದ ಚರ್ಚೆ ಯು ಹೆಚ್ಚಾಗಿ ನಡೆಯುತ್ತಿದೆ, ಕೆಲವರು ನಮಗಿಲ್ಲದ ಸೌಲಭ್ಯಗಳು ಇತರರಿಗೆ ಯಾಕೆ ಎಂದು ಆರೋಪಿಸುತ್ತಿದ್ದಾರೆ ಇನ್ನು ಕೆಲವರು ನಮ್ಮ ಸೌಲಭ್ಯಗಳು ನಮಗೆ ಎಂದು ಧ್ವನಿವರ್ಧಕಗಳ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣವು ಈಗ ದೇಶದೆಲ್ಲೆಡೆ ಸದ್ದು ಮಾಡಲು ಆರಂಭಿಸಿದೆ. ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಈ ವಿಷಯ ಇಷ್ಟಕ್ಕೇ ನಿಲ್ಲುವಂತೆ ಕಾಣುತ್ತಿಲ್ಲ.

ಇನ್ನೂ ಕೆಲವರಂತೂ ಧ್ವನಿವರ್ಧಕಗಳನ್ನು ಬ್ಯಾನ್ ಮಾಡಬೇಕು ಎಂದು ಹೋರಾಡುತ್ತಿದ್ದಾರೆ. ಈಗಾಗಲೇ ಈ ಪ್ರಕರಣವು ಕೇಂದ್ರದ ಬಾಗಿಲನ್ನು ಸಹ ತಟ್ಟಿದೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡುವುದು ಮಾತ್ರ ಬಾಕಿ ಇದೆ ಇದರ ಮಧ್ಯೆ ನಟಿ ಕಂಗನಾ ರಾವತ್ ಅವರು ಮಸೀದಿಯ ಧ್ವನಿವರ್ಧಕ ಗಳಿಕೆ ಶಾಶ್ವತ ಪರಿಹಾರವನ್ನು ಸೂಚಿಸಿದ್ದಾರೆ.

ಇದರ ಬಗ್ಗೆ ಮಾತನಾಡಿರುವ ಕಂಗನಾ ರಾವತ್ ರವರು ಒಂದು ವೇಳೆ ನೀವು ಮಸೀದಿಯ ಧ್ವನಿವರ್ಧಕಗಳಿಂದ ತೊಂದರೆಗೆ ಒಳಗಾಗಿದ್ದರೆ, ಪ್ರತಿಯೊಬ್ಬ ಹಿಂದೂ ಬಾಂಧವರು ತಮ್ಮ ಮನೆಯ ಛಾವಣಿಯ ಮೇಲೆ ಧ್ವನಿವರ್ಧಕಗಳನ್ನು ಅಳವಡಿಸಿ,  ಅಜಾನ್ ಕೂಗುವ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಹಾಕಿ ಆಮೇಲೆ ಇದರ ಕೂಗು ಸಂಸತ್ತಿನಲ್ಲಿ ಕೇಳಿಸುತ್ತದೆ.

ಈ ರೀತಿ ಮಾಡದೆ ಇದ್ದಲ್ಲಿ ಖಂಡಿತವಾಗಿಯೂ ಮಸೀದಿಯ ಧ್ವನಿವರ್ಧಕಗಳು ಎಂದಿಗೂ ನಿಲ್ಲುವುದಿಲ್ಲ, ಒಂದು ವೇಳೆ ನೀವು ಈ ಕೆಲಸ ಮಾಡಿದ್ದಲ್ಲಿ ಖಂಡಿತವಾಗಿಯೂ ಸಂಸತ್ತಿನಲ್ಲಿ ಇದರ ಧ್ವನಿ ಕೇಳಿಸುತ್ತದೆ ಆಗ ಸಂಸತ್ತಿನಲ್ಲಿ ಉಂಟಾಗುವ ಕೋಲಾಹಲವನ್ನು ನೀವೇ ಗಮನಿಸಿ  ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತೆ ಎಂದು ಹೇಳಿದ್ದಾರೆ.