ಬುಡಕಟ್ಟು ಮಕ್ಕಳಿಗೆ ಪಾಠವನ್ನು ಕಲಿಸಲು ಕಾಡಿನಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುವ ಶಿಕ್ಷಕಿಯ ಕಥೆ.

ಬುಡಕಟ್ಟು ಮಕ್ಕಳಿಗೆ ಪಾಠವನ್ನು ಕಲಿಸಲು ಕಾಡಿನಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುವ ಶಿಕ್ಷಕಿಯ ಕಥೆ.

ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಜೀವನವನ್ನು ರೂಪಿಸಲು ತಾಯಿಯೇ ಮೊದಲ ಗುರು ಎಂದು ಹೇಳುತ್ತಾರೆ. ತದನಂತರ ಜೀವನವನ್ನು ಮುನ್ನಡೆಸಲು ಅಮ್ಮನ ರೂಪದಲ್ಲಿ ಗುರುಗಳು ಬರುತ್ತಾರೆ ಎಂದು ಜನರು ಭಾವಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಪ್ರತಿಯೊಬ್ಬ ಗುರುಗಳು ತಂದೆ ತಾಯಿಯರಂತೆ ಮಕ್ಕಳ ಜೀವನವನ್ನು ರೂಪಿಸಲು ಶ್ರಮಿಸುತ್ತಾರೆ ಇನ್ನೂ ಕೆಲವರು ತಮ್ಮ ವೃತ್ತಿಯನ್ನು ಮೀರಿ ಮಕ್ಕಳಿಗೆ ದಾರಿದೀಪವಾಗಿ ನಿಲ್ಲುತ್ತಾರೆ ಈಗ ಅದೇ ರೀತಿಯ ವ್ಯಕ್ತಿತ್ವವುಳ್ಳ ಕೇರಳದ ಶಿಕ್ಷಕಿಯೊಬ್ಬರ ಬಗ್ಗೆ ತಿಳಿಸುತ್ತೇವೆ ಒಮ್ಮೆ ಓದಿ. ಈ ಕಥೆಯಲ್ಲಿ ಶಿಕ್ಷಕಿಯು ಕೇವಲ ಶಿಕ್ಷಕಿಯಾಗಿ ಉಳಿದಿಲ್ಲ ಬದಲಾಗಿ ತಮ್ಮ ಹಣದಿಂದ ಬುಡಕಟ್ಟು ಜನಾಂಗದವರಿಗೆ ಮಾಡಿರುವ ಸಹಾಯವು ನೋಡಿದರೆ ಶಹಬಾಸ್ ಎನ್ನುತ್ತೀರಾ.

ಕೇರಳ ಸರ್ಕಾರವು 1999 ರಲ್ಲಿ ತಿರುವನಂತಪುರಂ ನಲ್ಲಿ ಬುಡಕಟ್ಟು ಜನಾಂಗದವರಿಗೆ ಶಿಕ್ಷಣವನ್ನು ನೀಡಲು ಒಬ್ಬರು ಶಿಕ್ಷಕ ಎಂಬ ತತ್ವದ ಅಡಿಯಲ್ಲಿ ಇಡೀ ಶಾಲೆಗೆ ಒಬ್ಬರು ಶಿಕ್ಷಕರನ್ನು ನೇಮಿಸಿ ಶಾಲೆಯನ್ನು ಆರಂಭಿಸುತ್ತದೆ. ಆದರೆ ಕೆಲವೇ ವರ್ಷಗಳ ನಂತರ ಅಲ್ಲಿದ್ದ ಶಿಕ್ಷಕರು ಶಾಲೆಯನ್ನು ತಲುಪಲಾಗದೆ ಕೆಲಸ ಬಿಡುತ್ತಾರೆ ತದನಂತರ ಶಿಕ್ಷಕರಿಗೆ ಮಾದರಿಯಾಗಿರುವ ಉಷಾ ಕುಮಾರಿ ರವರು ಶಿಕ್ಷಕಿಯಾಗಿ ಆ ಶಾಲೆಗೆ ಆಯ್ಕೆ ಆಗುತ್ತಾರೆ.

ಕೇರಳದ ತಿರುವಂತಪುರಂ ಜಿಲ್ಲೆಯ ಅಂಬೋಲಿ ಗ್ರಾಮದ ನಿವಾಸಿಯಾಗಿರುವ ಉಷಾ ಕುಮಾರಿ ರವರು ಶಿಕ್ಷಕಿಯಾಗಿ ಬರೋಬ್ಬರಿ 16 ವರ್ಷಗಳಿಂದ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಈ ಶಾಲೆಯು ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳುತ್ತದೆ. ಅಗಸ್ತ್ಯ ಕೂಡದ ಪ್ರದೇಶಗಳ ಬೆಟ್ಟಗಳ ಮೇಲೆ 6129 ಅಡಿ ಎತ್ತರದಲ್ಲಿರುವ ಕೇರಳದ ವನ್ಯಜೀವಿ ಅಭಯಾರಣ್ಯ ದಲ್ಲಿ ಈ ಶಾಲೆ ನೆಲೆಯೂರಿದೆ.

ಬೆಳಿಗ್ಗೆ 7.30 ಕ್ಕೆ ಆರಂಭವಾಗುವ ಉಷಾ ಕುಮಾರಿ ರವರ ದಿನನಿತ್ಯದ ಪ್ರಯಾಣ ಕುಂಬಿಕಲ್ ಎಂಬ ಪ್ರದೇಶದವರೆಗೂ ಸ್ಕೂಟಿ ಯಲ್ಲಿ ನಡೆಯುತ್ತದೆ ತದನಂತರ ಚಿಕ್ಕ ದೋಣಿಯನ್ನು ಬಳಸಿಕೊಂಡು ನದಿಯನ್ನು ದಾಟಿ ಕೈಯಲ್ಲಿ ಕೋಲು ಹಿಡಿದುಕೊಂಡು ಅರಣ್ಯ ಪ್ರದೇಶದಲ್ಲಿ ತಮ್ಮ ಕಾಲ್ನಡಿಗೆ ಅನ್ನು ಪ್ರಾರಂಭಿಸುತ್ತಾರೆ.

ದಟ್ಟ ಅರಣ್ಯದಲ್ಲಿ ಆನೆಗಳು ಹಾಗೂ ಚಿರತೆಗಳು ವಾಸವಾಗಿವೆ. ಇಷ್ಟಾದರೂ ಯಾವುದಕ್ಕೂ ದೃತಿಗೆಡದೆ ಮಕ್ಕಳಿಗೆ ಕಲಿಸಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಯಾರ ಭಯವೂ ಇಲ್ಲದೆ ಕಡ್ಡಿ ಹಿಡಿದುಕೊಂಡು ನೇರವಾಗಿ ಎರಡು ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಿ ಶಾಲೆ ತಲುಪುತ್ತಾರೆ.ಇಷ್ಟೆಲ್ಲಾ ಕಷ್ಟ ಪಟ್ಟುಕೊಂಡು ತಮ್ಮ ಪ್ರಯಾಣವನ್ನು ನಡೆಸುವ ಇವರು ಇದುವರೆಗೆ ಒಮ್ಮೆಯೂ ಸಹ ಶಾಲೆಗೆ ತಡವಾಗಿ ಬಂದಿಲ್ಲ ಎಂಬುದು ಗಮನಿಸಬೇಕಾದ ವಿಷಯ ಅಷ್ಟೇ ಅಲ್ಲದೆ ಇದು ಅವರ ಕಾರ್ಯ ವೈಖರಿಯನ್ನು ತೋರಿಸುತ್ತದೆ.

ಇಡೀ ಶಾಲೆಗೆ ಇವರುಒಬ್ಬರೇ ಶಿಕ್ಷಕರಾಗಿರುವುದರಿಂದ ಭೌತಶಾಸ್ತ್ರ, ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ಹೀಗೆ ಎಲ್ಲಾ ವಿಷಯಗಳನ್ನು ತರಗತಿ 1 ರಿಂದ 4ನೇ ತರಗತಿಯವರೆಗೆ ಒಟ್ಟು 14 ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧಿಸುತ್ತಾರೆ. ತದನಂತರ ನಾಲ್ಕು ಗಂಟೆಗೆ ಹೊರಟು ಮತ್ತೆ ನಡೆದು ಬಂದ ಹಾದಿಯಲ್ಲಿ ಮನೆಗೆ ವಾಪಸ್ಸಾಗುತ್ತಾರೆ.

ಇಷ್ಟೇ ಅಲ್ಲದೆ ಇವರು ಕೇವಲ ಶಿಕ್ಷಕರಾಗಿ ಉಳಿದಿಲ್ಲ, ಶಾಲೆ ಹಾಗೂ ಅದರ ವಿದ್ಯಾರ್ಥಿಗಳ ಎಲ್ಲಾ ಅಗತ್ಯ ವಸ್ತುಗಳನ್ನು ಸರ್ಕಾರ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಆದ ಕಾರಣದಿಂದ ತಮ್ಮ ಸಂಬಳದೊಂದಿಗೆ ಇಡೀ ಶಾಲೆಯ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಮೊಟ್ಟೆ ಹಾಲು ಸೇರಿದಂತೆ ಪೌಷ್ಠಿಕ ಆಹಾರವನ್ನು ಸಹ ನೀಡುತ್ತಾರೆ. ಇಷ್ಟೇ ಅಲ್ಲದೆ ಒಂದು ವೇಳೆ ತಾನು ಶಾಲೆಗೆ ಕಾರಣಾಂತರಗಳಿಂದ ತಲುಪದಿದ್ದಲ್ಲಿ ತಮ್ಮ ಒಬ್ಬ ಉಸ್ತುವಾರಿಯನ್ನು ನೇಮಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಸ್ತುವಾರಿ ಒಬ್ಬರು ಮಕ್ಕಳಿಗೆ ಪಾಠ ಬೋಧಿಸುತ್ತಾರೆ.

14 ಮಕ್ಕಳಿಗೆ ಪಾಠ ಕಲಿಸಲು ಇಷ್ಟೆಲ್ಲಾ ಸವಾಲುಗಳನ್ನು ಎದುರಿಸುವ ಈ ಶಿಕ್ಷಕಿ ಯು ಹಲವಾರು ತಿಂಗಳುಗಳಾದರೂ ಸಂಬಳವನ್ನು ಪಡೆಯುವುದಿಲ್ಲ ಎಂಬ ಶಾಕಿಂಗ್ ಅಂಶವೂ ಸಹ ಹೊರಬಿದ್ದಿದೆ ಕೆಲವೊಮ್ಮೆ ಸರ್ಕಾರದಿಂದ ಸಂಬಳ ಬರದೇ ಇದ್ದಲ್ಲಿ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಶಾಲಾ ಕಟ್ಟಡವನ್ನು ತಾವೇ ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಾಣ ಕ್ಕಿಂತಲೂ ಮೊದಲು ಹಲವಾರು ವಿದ್ಯಾರ್ಥಿಗಳು ಮರದ ಕೆಳಗೆ ಪಾಠವನ್ನು ಕಲಿಯುತ್ತಿದ್ದರು ಈ ಕಷ್ಟವನ್ನು ನೋಡಲಾಗದೆ ಶಿಕ್ಷಕಿಯು ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ.

ತನ್ನ ಆದರ್ಶಪ್ರಾಯ ಕೆಲಸ ಮತ್ತು ಬದ್ಧತೆಗಾಗಿ, ಉಶಾಕುಮಾರಿ ಕಾನ್ಫೆಡ್ (ಕೇರಳ ಅಸೋಸಿಯೇಷನ್ ​​ಫಾರ್ ನಾನ್ಫಾರ್ಮಲ್ ಎಜುಕೇಶನ್ ಅಂಡ್ ಡೆವಲಪ್ಮೆಂಟ್) ಯಿಂದ ಸಕರಾಥಾ ಪುರಸ್ಕಾರಂ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ, ಆದರೆ ತನ್ನ ವಿದ್ಯಾರ್ಥಿಗಳು ಹಾರುವ ಬಣ್ಣಗಳೊಂದಿಗೆ ಪದವೀಧರರಾದ   ಹಾಕು ತಮ್ಮ ಜೀವನಗಳಲ್ಲಿ ಬದಲಾವಣೆಗಳನ್ನು  ತಂದುಕೊಂಡಾಗ ತನಗೆ ನಿಜವಾದ ಸಂತೋಷವಾಗುತ್ತದೆ ಅಲ್ಲಿಯವರೆಗೂ  ಸಹ ತಮ್ಮ ಈ ಕಾಡಿನ ಪ್ರಯಾಣ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಇಂತಹ ಶಿಕ್ಷಕಿಯರು ಸಿಗುವುದು ಬಹಳ ಕಡಿಮೆ. ಬಹುಶಹ ಇಂತಹ ಶಿಕ್ಷಕಿಯರನ್ನು ನೋಡಿಯೇ ಗುರು ಬ್ರಹ್ಮ ಗುರು ವಿಷ್ಣು  ಎಂಬ ಗೀತೆಯನ್ನು ರಚಿಸಿದ್ದಾರೆ.ಇಂತಹ ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಎಲ್ಲರಿಗೂ ಸುದ್ದಿಯನ್ನು ತಲುಪಿಸಿ. ಧನ್ಯವಾದಗಳು