ಅಖಾಡಕ್ಕೆ ಯೋಗಿ, ಮಹಾ ಘಟಬಂಧನ್ಗೆ ಬಲ ಪ್ರದರ್ಶನದ ಬೆನ್ನಲ್ಲೇ ಬಿಗ್ ಶಾಕ್ !

ಅಖಾಡಕ್ಕೆ ಯೋಗಿ, ಮಹಾ ಘಟಬಂಧನ್ಗೆ ಬಲ ಪ್ರದರ್ಶನದ ಬೆನ್ನಲ್ಲೇ ಬಿಗ್ ಶಾಕ್ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ಆ ಒಬ್ಬ ನಾಯಕನನ್ನು ಕಂಡರೆ ಬೆಚ್ಚಿ ಬೀಳುತ್ತದೆ. ಮೊದಲಿನಿಂದಲೂ ಸದಾ ಮೋದಿ ರವರ ವಿರುದ್ಧವಾಗಿ ಮಾತನಾಡುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸಾಮಾನ್ಯವಾಗಿ ಯೋಗಿ ಆದಿತ್ಯನಾಥ ಅವರನ್ನು ಕೆಣಕಲು ಹೋಗುವುದಿಲ್ಲ. ಕಳೆದ ಬಾರಿಯೂ ದಿನೇಶ್ ಗುಂಡೂರಾವ್ ರವರು ಯೋಗಿ ಆದಿತ್ಯನಾಥ್ ರವರನ್ನು ಕೆಣಕಿ ಕ್ಷಮೆ ಕೇಳಿದ್ದರು.

ಇಷ್ಟೇ ಅಲ್ಲದೆ ಇದುವರೆಗೂ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಕೊಟ್ಟಿರುವ ಯೋಗಿ ಆದಿತ್ಯನಾಥ್ ರವರು ಮಹಾ ಘಟಬಂಧನ್ ಗೆ ಮೊದಲ ಶಾಕ್ ನೀಡಲು ಸಿದ್ಧರಾಗುತ್ತಿದ್ದಾರೆ. ಇಡೀ ದೇಶವೇ ಕಾಣುವಂತೆ ಇಂದು ಮಹಾ ಘಟಬಂಧನ್ ಬಲ ಪ್ರದರ್ಶನ ನಡೆದಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.ಈ ಮಹಾ ಘಟಬಂಧನ್ ಸಮಾವೇಶದಲ್ಲಿ ಪ್ರತಿಯೊಬ್ಬರು ಮೋದಿಯವರನ್ನ ಸೋಲಿಸುತ್ತೇವೆ ಎಂದು ಬೀಗುತ್ತಿದ್ದರು.

ಹತ್ತು ಹಲವಾರು ಪಕ್ಷಗಳು ಸೇರಿಕೊಂಡು ಮೋದಿ ಅವರನ್ನು ಸೋಲಿಸಲು ಇನ್ನಿಲ್ಲದ ಪ್ರಯತ್ನ ವನ್ನು ಮಾಡುತ್ತಿರುವಾಗ, ಬಿಜೆಪಿ ಪಕ್ಷಕ್ಕೆ ಯಾವುದೇ ಅಂಜಿಕೆ ಕಾಣಿಸುತ್ತಿಲ್ಲ. ಅಷ್ಟೇ ಅಲ್ಲದೆ ಈಗ ಯೋಗಿ ಆದಿತ್ಯನಾಥ ರವರು ಕಣಕ್ಕಿಳಿದಿರುವುದು ಬಿಜೆಪಿಗೆ ಆನೆಬಲ ಬಂದಂತಾಗಿದೆ. ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಮತಾ ರವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಲೆ ಯನ್ನು ತಡೆಯಲಾರದೆ, ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಅಮಿತ್ ಶಾ ರವರ ರಥಯಾತ್ರೆಗೆ ತಡೆ ನೀಡಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಅಮಿತ್ ಶಾ ರವರು ಪಾದಯಾತ್ರೆ ಮೂಲಕ ಪಶ್ಚಿಮ ಬಂಗಾಳವನ್ನು ವಶಪಡಿಸಿಕೊಳ್ಳಲು ಸಿದ್ಧರಾಗಿದ್ದರು. ಆದರೆ ದುರದೃಷ್ಟವಶಾತ್ ಅಮಿತ್ ಷಾ ರವರು ನಾಳೆಯ ರ್ಯಾಲಿಗೆ ಅನಾರೋಗ್ಯದ ಕಾರಣದಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ಅಮಿತ್ ಶಾ ರವರು ಪಕ್ಷಿಮ ಬಂಗಾಳಕ್ಕೆ ಎಂಟ್ರಿ ಕೊಟ್ಟರೆ ತಮ್ಮ ಪಕ್ಷವೇ ಅಂತ್ಯವಾಗುತ್ತದೆ ಎಂದು ಭಯ ಪಟ್ಟಿದ್ದಾರೆ ಮಮತಾ ರವರು ,ಅಮಿತ್ ಶಾ ರವರ ಅನಾರೋಗ್ಯದ ಸ್ಥಿತಿ ಕೇಳಿ ಖುಷಿ ಪಡುವ ಮುನ್ನವೇ ಮತ್ತೊಂದು ಶಾಕ್ ಎದುರಾಗಿದೆ. ಹಿಂದೂ ಫೈರ್ ಬ್ರಾಂಡ್ ಎನಿಸಿಕೊಂಡಿರುವ ಯೋಗಿ ಆದಿತ್ಯನಾಥ ರವರು ಅಮಿತ್ ಶಾ ಅವರ ಬದಲಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಅಮಿತ್ ಶಾ ರವರ ಮಾತುಗಳನ್ನು ಕೇಳಲು ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿತ್ತು ಆದರೆ ಈಗ ಯೋಗಿ ಆದಿತ್ಯನಾಥ್ ರವರು  ಸಭೆಯಲ್ಲಿ ಪಾಲ್ಗೊಳ್ಳುವ ಕಾರಣವಾಗಿ ಬಿಜೆಪಿಗೆ ಮತ್ತಷ್ಟು ಬಲ ಹೆಚ್ಚಾಗಿದ್ದು ಬಂಗಾಳದಲ್ಲಿ ಬಿಜೆಪಿ ಅಲೆಯು ಸುನಾಮಿಯಂತೆ ಅಪ್ಪಳಿಸುವುದು ಸುಳ್ಳಲ್ಲ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯು ಮತ್ತಷ್ಟು ರಂಗೇರಿದ್ದು, ಇಂದು ಮಹಾ ಘಟಬಂಧನ್ ಬಲ ಪ್ರದರ್ಶನ ಆದರೆ ನಾಳೆ ಮಹಾ ಘಟಬಂಧನ್ಗೆ ಶಾಕ್ ನೀಡಲು  ನೇರವಾಗಿ ಮೋದಿ ರವರ ಸೇನಾನಿ ಯಾಗಿರುವ ಯೋಗಿ ಆದಿತ್ಯನಾಥ್ ರವರು ಕಣಕ್ಕಿಳಿಯಲಿದ್ದಾರೆ. ಪ್ರತಿಕ್ಷಣವೂ ರಂಗೇರಿ ಸುತ್ತಿರುವ ಈ ಚುನಾವಣೆಯು ಮುಂದೆ ಇನ್ನು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.