ಬಾಲಿವುಡ್ ನಟಿ ವಿದ್ಯಾ ಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್
ಬಾಲಿವುಡ್ ನಟಿ ವಿದ್ಯಾ ಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್
ಕೆಜಿಎಫ್ ಚಿತ್ರದ ಬಾರಿ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ರವರು ಇಡೀ ದೇಶದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಬಿಟ್ಟು ಹೊರ ಚಿತ್ರರಂಗದಲ್ಲೂ ನಟ ಯಶ್ ರವರ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಪರಭಾಷಿಗರನ್ನು ಆಕರ್ಷಿಸಿರುವ ಯಶ್ ರವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್ ಗಿರಿಯನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ತೆಲುಗು ಹಿರಿಯ ನಟ ರಾಗಿರುವ ಬಾಲಕೃಷ್ಣ ರವರ ಸಿನಿಮಾ ಕಾರ್ಯಕ್ರಮಕ್ಕೆ ನಟ ಯಶ್ ರವರು ಅತಿಥಿಯಾಗಿ ಹೋಗಿದ್ದರು. ಬಾಲಕೃಷ್ಣರವರು ಅಭಿನಯಿಸಿರುವ ತೆಲುಗು ಹಿರಿಯ ನಟ ದಿವಂಗತ ಎನ್ಟಿಆರ್ ರವರ ಬಯೋಪಿಕ್ ಚಿತ್ರದ ಕಾರ್ಯಕ್ರಮಕ್ಕೆ ಯಶ್ ರವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕನ್ನಡದ ದಿಗ್ಗಜ ನಟರಾಗಿರುವ ಪುನೀತ್ ರಾಜಕುಮಾರ್, ಕೆಜಿಎಫ್ ನಿರ್ಮಾಪಕ ಹಾಗೂ ವಿದ್ಯಾ ಬಾಲನ್ ಅವರು ಸಹ ಭಾಗವಹಿಸಿದ್ದರು. ಇದೇ ವೇಳೆ ಬಾಲಿವುಡ್ ಖ್ಯಾತಿಯ ವಿದ್ಯಾಬಾಲನ್ ರವರ ಬಳಿ ಯಶ್ ರವರು ಮನವಿಯನ್ನು ಮಾಡಿದ್ದಾರೆ,ಆ ಮನವಿಗೆ ಅವರು ಏನು ಉತ್ತರಿಸಿದ್ದಾರೆ ಗೊತ್ತಾ??
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎನ್ಟಿಆರ್ ಅವರ ಚಿತ್ರದಲ್ಲಿ ವಿದ್ಯಾಬಾಲನ್ ರವರು ನಾಯಕಿಯಾಗಿ ನಟಿಸುತ್ತಿದ್ದಾರೆ ಬಾಲಿವುಡ್ ನಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿರುವ ವಿದ್ಯಾ ಬಾಲನ್ ಅವರು ಇದುವರೆಗೂ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ಮಾಡಿದ್ದಾರೆ. ಇಂತಹ ಸ್ಟಾರ್ ನಟಿಯನ್ನು ಯಶ್ ರವರು ಕನ್ನಡಕ್ಕೆ ಆಹ್ವಾನಿಸಿದ್ದಾರೆ. ದಯವಿಟ್ಟು ನಿಮ್ಮ ಬಹಳ ಸಿನಿಮಾಗಳನ್ನು ನಾವು ನೋಡಿದ್ದೇವೆ. ನಿಮ್ಮ ಕೆಲಸಗಳನ್ನು ಸಹ ನೋಡಿದ್ದೇವೆ ,ಮುಂದೆ ನಮ್ಮ ಕನ್ನಡ ಚಿತ್ರರಂಗದಲ್ಲಿಯೂ ಸಹ ಅಭಿನಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಮನವಿಗೆ ಸ್ಪಂದಿಸಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೆ ಬರುವುದಕ್ಕೆ ನನಗೆ ಆಸಕ್ತಿ ಇದೆ, ನಾನು ಬರಲು ಸಿದ್ಧವಿದ್ದೇನೆ ದಯವಿಟ್ಟು ನನಗೆ ಆಫರ್ ನೀಡಿ ಎಂದು ಉತ್ತರಿಸಿದ್ದಾರೆ.
ಸಧ್ಯ ಯಶ್ ಮಾಡಿದ ಮನವಿಗೆ ಆಫರ್ ಕೊಡಿ ಎಂದಿರುವ ವಿದ್ಯಾ ಬಾಲನ್ ಅವರ ಮಾತನ್ನು ಹಲವಾರು ಕನ್ನಡದ ನಿರ್ಮಾಪಕರು ಕೇಳಿಸಿಕೊಂಡು ಇರುತ್ತಾರೆ. ಒಂದು ವೇಳೆ ನಿರ್ಮಾಪಕರು ಆಸಕ್ತಿ ತೋರಿ ವಿದ್ಯಾಬಾಲನ್ ರವರಿಗೆ ಆಫರ್ ನೀಡಿದಲ್ಲಿ ಖಂಡಿತವಾಗಿಯೂ ನಾವು ವಿದ್ಯಾ ಬಾಲನ್ ಅವರನ್ನು ಕನ್ನಡ ಸಿನಿಮಾದಲ್ಲಿ ನೋಡಿ ತೃಪ್ತಿ ಪಟ್ಟಿ ಕೊಳ್ಳಬಹುದು.