ಧಾರಾವಾಹಿಗೆ ಅಚಿಂತ್ಯ ಎಂಟ್ರಿ, ಮತ್ತೊಮ್ಮೆ ಮಿಂಚು ಹರಿಸಲು ಬಂದ ಪುಟ್ಟ ಬಾಲಕ

ಧಾರಾವಾಹಿಗೆ ಅಚಿಂತ್ಯ ಎಂಟ್ರಿ, ಮತ್ತೊಮ್ಮೆ ಮಿಂಚು ಹರಿಸಲು ಬಂದ ಪುಟ್ಟ ಬಾಲಕ

ನಿಮಗೆಲ್ಲರಿಗೂ ಅಚಿಂತ್ಯ ಎಂಬ ಹೆಸರು ಚಿರಪರಿಚಿತ ವಾಗಿರುತ್ತದೆ, ಯಾಕೆಂದರೆ ಇಡೀ ಕರ್ನಾಟಕದ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಪುಟ್ಟ ಬಾಲಕ. ಅಚಿಂತ್ಯ ಜೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದ.

ಈ ಪುಟ್ಟ ಹುಡುಗನ ನಟನೆಗೆ ಇಡೀ ಕರ್ನಾಟಕವೇ ಶಹಭಾಷ್ ಎಂದಿತ್ತು. ಕೆಲವರಂತೂ ಡ್ರಾಮಾ ಜೂನಿಯರ್ಸ್ ಶೂ ಅನ್ನು ಕೇವಲ ಅಚಿಂತ್ಯ ನಿಗಾಗಿ ನೋಡುತ್ತಿದ್ದರು. ಅಷ್ಟರಮಟ್ಟಿಗೆ ಎಲ್ಲರ ಹೃದಯ ಗೆಲ್ಲುವಲ್ಲಿ ಈ ಪುಟ್ಟ ಬಾಲಕ ಯಶಸ್ವಿಯಾಗಿದ್ದ.

ಈಗ ಮತ್ತೊಮ್ಮೆ ಅಚಿಂತ್ಯ ರವರು ಧಾರವಾಹಿ ಗೆ ಎಂಟ್ರಿ ಕೊಟ್ಟಿದ್ದಾರೆ ಈ ಮೂಲಕ ಮತ್ತೊಮ್ಮೆ ತಮ್ಮ ನಟನೆಯ ಮೂಲಕ ಇಡೀ ಕರ್ನಾಟಕದ ನಿದ್ದೆಗೆಡಿಸಲು ತಯಾರಾಗಿದ್ದಾರೆ. ಅಷ್ಟಕ್ಕೂ ಯಾವ ಪಾತ್ರದಲ್ಲಿ ಮತ್ತು ಯಾವ ಧಾರವಾಹಿಯಲ್ಲಿ ಅಚಿಂತ್ಯ ರವರು ಕಾಣಿಸಿಕೊಳ್ಳುತ್ತಿದ್ದಾರೆ ಗೊತ್ತಾ?.

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಶ್ರೀ ವಿಷ್ಣು ದಶಾವತಾರ ಧಾರವಾಹಿ ಈಗ ಮನೆ ಮಾತಾಗಿದೆ. ಪುರಾಣ ಕಥೆಯ ಆಧಾರವನ್ನು ಹೊಂದಿರುವ ಈ ಧಾರವಾಹಿ ಬಹಳ ವೇಗವಾಗಿ ಬೇರೆ ಧಾರಾವಾಹಿಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ವಿಷ್ಣುವಿನ ದಶಾವತಾರದಲ್ಲಿ ಇಂದಿನಿಂದ ನರಸಿಂಹ ಅವತಾರ ಪ್ರಾರಂಭವಾಗಲಿದ್ದು, ರಾಕ್ಷಸ ಹಿರಣ್ಯಕಶಿಪು ರವರ ಅಂತ್ಯಕ್ಕಾಗಿ ಆರಂಭಗೊಂಡ ಈ ಅವತಾರದಲ್ಲಿ ಹಿರಣ್ಯಕಶಿಪು ರವರ ಮಗನಾಗಿರುವ ಪ್ರಹ್ಲಾದನ ಪಾತ್ರದಲ್ಲಿ ನಿಮ್ಮೆಲ್ಲರ ನೆಚ್ಚಿನ ಅಚಿಂತ್ಯ ರವರು ನಟಿಸಲಿದ್ದಾರೆ.

ಈಗಾಗಲೇ ಭಾರೀ ಹೆಸರು ಮಾಡಿರುವ ಈ ಧಾರಾವಾಹಿಯೂ ಈಗ ಅಚಿಂತ್ಯ ರವರ ಎಂಟ್ರಿಯಿಂದ ಮತ್ತಷ್ಟು ವೀಕ್ಷಕರನ್ನು ಸೆಳೆಯಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.