ಈ ಬಾರಿಯ ಐಪಿಎಲ್ ಎಲ್ಲಿ ಹಾಗೂ ಯಾವಾಗ ನಡೆಯುವುದು ಗೊತ್ತಾ??
ಈ ಬಾರಿಯ ಐಪಿಎಲ್ ಎಲ್ಲಿ ಹಾಗೂ ಯಾವಾಗ ನಡೆಯುವುದು ಗೊತ್ತಾ??
2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆಯುವ ಯಾವುದೇ ಸಾಧ್ಯತೆಗಳು ಕಾಣಿಸುತ್ತಿರಲಿಲ್ಲ. ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳಲು ಸಿದ್ಧವಿಲ್ಲದ ಬಿಸಿಸಿಐ ಹಾಗೂ ಸರ್ಕಾರ ಹೊರದೇಶದಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸಲು ಚಿಂತಿಸಲಾಗುತ್ತಿತ್ತು.
ಆದರೆ ಇದರಿಂದ ಕೋಟ್ಯಾಂತರ ಅಭಿಮಾನಿಗಳು ಐಪಿಎಲ್ ಆಡಳಿತ ಮಂಡಳಿ ಮೇಲೆ ಸಿಟ್ಟಾಗಿದ್ದರು ಯಾಕೆಂದರೆ ಕೋಟ್ಯಂತರ ಜನರು ಪ್ರತಿವರ್ಷ ಐಪಿಎಲ್ ಟೂರ್ನಿಗಾಗಿ ಕಾಯುತ್ತಿರುತ್ತಾರೆ ಹಾಗೂ ಯಾವುದೇ ಪಂದ್ಯವು ನಷ್ಟದಲ್ಲಿ ನಡೆಯುವಂತೆ ನೋಡಿಕೊಳ್ಳುವುದಿಲ್ಲ ನಮ್ಮ ಕ್ರಿಕೆಟ್ ಅಭಿಮಾನಿಗಳು, ಪ್ರತಿಯೊಂದು ಮಾತಿನ ಟಿಕೆಟ್ ಗಾಗಿ ಕಾದು ಅವಕಾಶ ಸಿಕ್ಕಿದ ತಕ್ಷಣ ಬುಕ್ ಮಾಡಿ ಇಲ್ಲವೇ ಕ್ಯೂನಲ್ಲಿ ನಿಂತು ಕೊಂಡು ಕೊಂಡುಕೊಳ್ಳುತ್ತಾರೆ.
ಕ್ರಿಕೆಟ್ ಎಂಬುದನ್ನು ಒಂದು ಧರ್ಮವಾಗಿಸಿಕೊಂಡಿರುವ ಭಾರತದಲ್ಲಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ಐಪಿಎಲ್ ಟೂರ್ನಿ ನಡೆಯುವುದಿಲ್ಲ ಎಂಬ ಮಾತು ಕೇಳಿದ ತಕ್ಷಣ ಹಲವಾರು ಅಭಿಮಾನಿಗಳು ಸಿಟ್ಟಾಗಿದ್ದರು. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಈ ವಿಷಯ ಎಂಟ್ರಿ ಕೊಟ್ಟಿತ್ತು.
ಸುಪ್ರೀಂ ಕೋರ್ಟ್ ಒಂದು ಆಡಳಿತ ಮಂಡಳಿಯನ್ನು ನೇಮಿಸಿ ಐಪಿಎಲ್ ಟೂರ್ನಿ ಯನ್ನು ಎಲ್ಲಿ ನಡೆಸಬೇಕು ಎಂಬುದರ ಕುರಿತು ಸಭೆಯನ್ನು ನಡೆಸಲಾಯಿತು ಅಂತಿಮವಾಗಿ ಸುಪ್ರಿಂಕೋರ್ಟ್ ಆಡಳಿತ ಮಂಡಳಿಯ ಪ್ರಕಾರ ಲೋಕಸಭಾ ಚುನಾವಣೆಯವರೆಗೂ ಅಂದರೆ ಮಾರ್ಚ್ 23 ರಿಂದ ಆರಂಭವಾಗಲಿದ್ದು ಮೇ ಕೊನೆಯವರೆಗೆ ಐಪಿಎಲ್ ಪಂದ್ಯಗಳು ಭಾರತದಲ್ಲಿ ನಡೆಯಲಿದೆ.
ತದನಂತರದ ಪಂದ್ಯಗಳು ಎಲ್ಲಿ ನಡೆಯಲಿವೆ ಎಂಬುದು ಇನ್ನೂ ಪ್ರಕಟವಾಗಿಲ್ಲ ಆದರೆ ಬಹುತೇಕ ಭಾರತದಲ್ಲಿ ಆಯೋಜಿಸುವ ಬಗ್ಗೆ ಎಲ್ಲರೂ ಆಸಕ್ತಿ ಹೊಂದಿದ್ದಾರೆ. ಆಡಳಿತ ಮಂಡಳಿಯ ವರದಿಗಳ ಪ್ರಕಾರ ಚುನಾವಣೆ ದಿನಾಂಕಗಳು ಪ್ರಕಟವಾದ ಬಳಿಕ ಯಾವ ರಾಜ್ಯದಲ್ಲಿ ಯಾವ ದಿನ ಐಪಿಎಲ್ ಕ್ರಿಕೆಟ್ ನಡೆಯುತ್ತದೆ ಎಂಬುದು ಪ್ರಕಟವಾಗಲಿದೆ.
ಪ್ರತಿಯೊಂದು ಅಂಶವನ್ನು ಗಣನೆಗೆ ತೆಗೆದುಕೊಂಡು ಲೋಕಸಭಾ ಚುನಾವಣೆ ಹಾಗೂ ಕ್ರಿಕೆಟ್ ಎರಡು ರಾಜ್ಯ ಸರ್ಕಾರಗಳು ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ ಆದಕಾರಣ ನಿಂದ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಐಪಿಎಲ್ ಹಾಗೂ ಚುನಾವಣೆ ಎರಡಕ್ಕೂ ರಾಜ್ಯ ಸರ್ಕಾರದ ಜೊತೆಗೂಡಿ ಕಲ್ಪಿಸಲಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು ಅಭಿಮಾನಿಗಳಿಗೆ ನಿಟ್ಟುಸಿರು ಬಿಟ್ಟಂತೆ ಆಗಿದೆ.