ಲೋಕಸಭಾ ಚುನಾವಣೆಗೆ ಮೋದಿ ಕರೆ ತರಲು ಸಿದ್ಧವಾದ ಬಿಎಸ್ ವೈ: ಪ್ಲಾನ್ ಏನು ಗೊತ್ತಾ??

ಲೋಕಸಭಾ ಚುನಾವಣೆಗೆ ಮೋದಿ ಕರೆ ತರಲು ಸಿದ್ಧವಾದ ಬಿಎಸ್ ವೈ: ಪ್ಲಾನ್ ಏನು ಗೊತ್ತಾ??

ನರೇಂದ್ರ ಮೋದಿ ಅವರು ಮುಂದಿನ ಲೋಕಸಭಾ ಚುನಾವಣೆ ಗೆ ಸಾಕಷ್ಟು ಶ್ರಮಿಸಬೇಕಿದೆ. ಹತ್ತು ಬಾರಿ ಒಂದು ಸುಳ್ಳನ್ನು ನಿಜ ನಿಜ ಎಂದು ಹೇಳಿದರೆ ಸುಳ್ಳು ನಿಜವಾಗುವುದಿಲ್ಲ ಆದರೆ ಹತ್ತು ಜನರಲ್ಲಿ ಕೆಲವರು ಆ ಸುಳ್ಳನ್ನು ನಿಜ ಎಂದು ನಂಬುತ್ತಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ನರೇಂದ್ರ ಮೋದಿರವರ ಅಧಿಕಾರವನ್ನು ಕಿತ್ತುಕೊಳ್ಳಲು ಹರ ಸಾಹಸ ಮಾಡುತ್ತಿದ್ದಾರೆ.

ಇದರಿಂದ ಸಾಮಾನ್ಯವಾಗಿ ನರೇಂದ್ರ ಮೋದಿ ರವರಿಗೆ ಗೆಲುವು ಕಷ್ಟ ಸಾಧ್ಯ ಎಂಬುದು ತಿಳಿದುಬಂದಿದೆ. ಆದ್ದರಿಂದ ಸ್ವತಹ ಮೋದಿ ರವರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಕಳೆದ ಬಾರಿಯಂತೆ ಯಾವುದೇ ಕೆಲವು ನಾಯಕರ ವರ್ಚಸ್ಸನ್ನು ನಂಬಿಕೊಂಡು ಸುಮ್ಮನೆ ಕೂರದೆ ಇರಲು ನಿರ್ಧರಿಸಿರುವ ಬಿಜೆಪಿ ಪಕ್ಷವು ಖುದ್ದು ಮೋದಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಅದರಂತೆಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕರ್ನಾಟಕ ರಾಜ್ಯದಲ್ಲಿ ನರೇಂದ್ರ ಮೋದಿ ಅವರು ಬರೋಬ್ಬರಿ 7 ಸಮಾವೇಶಗಳನ್ನು ಆಯೋಜಿಸಲಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಹೆಚ್ಚಿನ ಸಮಾವೇಶಗಳಲ್ಲಿ ಭಾಗವಹಿಸಲು ನಿರ್ಧರಿಸಿರುವ ನರೇಂದ್ರ ಮೋದಿ ಅವರು ಹಲವಾರು ರಾಜ್ಯಗಳಲ್ಲಿ ಸಮಾವೇಶಗಳನ್ನು ನಡೆಸಲಿದ್ದಾರೆ. ಅದರಂತೆಯೇ ರಾಜ್ಯದಲ್ಲಿಯೂ ಸಮಾವೇಶ ನಡೆಸಲು ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ ಎಸ್ ಯಡಿಯೂರಪ್ಪನವರು ನಿರ್ಧರಿಸಲಾಗಿದ್ದು ಇದಕ್ಕೆ ನರೇಂದ್ರ ಮೋದಿ ಅವರು ಅಸ್ಥು ಎಂದಿದ್ದಾರೆ.

ಪ್ರತಿಯೊಂದು ಭಾಗಗಳಲ್ಲಿನ ವಿವಿಧ ಸಮುದಾಯಗಳನ್ನು ಗುರಿಯಾಗಿಸಿಕೊಂಡು, ಸಮಾವೇಶ ನಡೆಸಿ ಕೇಂದ್ರ ಸರ್ಕಾರ ಆ ಸಮುದಾಯದ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳು ಜನರ ಮುಂದೆ ಇಡುವುದು ಪಕ್ಷದ ಗುರಿ ಎನ್ನಲಾಗಿದೆ.