ಯೋಗಿ ಕೊಟ್ಟ ಏಟಿಗೆ ತಿಂಗಳುಗಳ ಕಾಲ ಮರೆಯಾದ ಓವೈಸಿ

ಯೋಗಿ ಕೊಟ್ಟ ಏಟಿಗೆ ತಿಂಗಳುಗಳ ಕಾಲ ಮರೆಯಾದ ಓವೈಸಿ

ಹಿಂದುತ್ವದ ಫೈರ್ ಬ್ರಾಂಡ್ ಎನಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಯೋಗಿ ಆದಿತ್ಯನಾಥ್ ರವರು ವಿರೋಧಿಗಳಿಗೆ ತಕ್ಕ ಉತ್ತರ ನೀಡುವಲ್ಲಿ ಪ್ರಸಿದ್ಧರು. ಈಗ ಅಂತದ್ದೇ ಏಟನ್ನು ಯೋಗಿ ಆದಿತ್ಯನಾಥ್ ರವರು ಹೈದರಾಬಾದಿನ ಓವೈಸಿ ರವರಿಗೆ ನೀಡಿದ್ದು ತಿಂಗಳುಗಳ ಕಾಲ ಮರೆಯಾಗಿದ್ದಾರೆ ಓವೈಸಿ.

ಅಷ್ಟಕ್ಕೂ ವಿಷಯದ ಮೂಲವೇನು??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕೇವಲ ಒಂದೇ ಒಂದು ಸೀಟನ್ನು ಗೆದ್ದುಕೊಂಡಿದೆ. ಇಡೀ ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಪಕ್ಷವು ಕೇವಲ ಒಂದು ಕ್ಷೇತ್ರವನ್ನು ಗೆದ್ದಿದ್ದು ರಾಜಾ ಸಿಂಗ್ ಎಂಬ ಹಿಂದುತ್ವದ ಫೈರ್ ಬ್ರಾಂಡ್ ರವರ ಕ್ಷೇತ್ರ. ಸತತ ಎರಡನೇ ಬಾರಿ ಶಾಸಕರಾಗಿರುವ ರಾಜ ಸಿಂಗ್ ರವರು ಹಿಂದುತ್ವದ ಫೈರ್ ಬ್ರಾಂಡ್ ಎಂದು ಖ್ಯಾತಿ ಪಡೆದಿದ್ದಾರೆ.

ಕಳೆದ 2013 ಚುನಾವಣೆಯಲ್ಲಿ ರಾಜ ಸಿಂಗ್ ರವರಿಗೆ  ಹೇಳಿಕೊಳ್ಳುವಂತಹ ಪ್ರತಿಸ್ಪರ್ಧಿ ಯಾರು ಇರಲಿಲ್ಲ. ಓವೈಸಿ ರವರ ಭದ್ರಕೋಟೆಯಾದ ಹೈದರಾಬಾದ್ ಕ್ಷೇತ್ರವನ್ನು ರಾಜಾ ಸಿಂಗ್ ರವರು 2013 ರಲ್ಲಿ ವಶಪಡಿಸಿಕೊಂಡಿದ್ದರು. ಓವೈಸಿ ರವರ ಭದ್ರಕೋಟೆಯಾಗಿದ್ದ ಹೈದರಾಬಾದ್ ನಲ್ಲಿ ಬಿಜೆಪಿ ಧ್ವಜ ಹಾರಾಡಿತ್ತು ಯಾಕೆಂದರೆ ಆದರೆ ಓವೈಸಿ ಅವರು ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಹಾಗೂ ತಮ್ಮ ಅಭ್ಯರ್ಥಿಗೆ ಸಹ ಅಷ್ಟಾಗಿ ಬೆಂಬಲ ನೀಡಿರಲಿಲ್ಲ.

ಆದ ಕಾರಣದಿಂದಲೇ ರಾಜಾ ಸಿಂಗ್ ರವರು ಜಯಿಸಿದ್ದರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು ಅಷ್ಟೇ ಅಲ್ಲದೆ ಓವೈಸಿ ರವರು ಸಹ ನಾನು ಒಮ್ಮೆ ಪ್ರಚಾರ ಮಾಡಿದರೆ ಹೈದರಾಬಾದಿನಲ್ಲಿ ಉಳಿದ ಯಾವುದೇ ಪಕ್ಷಗಳು ಎದುರುಗೆ ನಿಲ್ಲುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.ಆದರೆ ಇವರ ಬಡಾಯಿಗೆ ಇದ್ದ ಕಾರಣವೇ ಬೇರೆಯಾಗಿತ್ತು ಯಾಕೆಂದರೆ ಹೈದರಾಬಾದಿನಲ್ಲಿ ಬಹುತೇಕ ಮುಸ್ಲಿಂ ಜನಸಂಖ್ಯೆ ಇತ್ತು ಆದ ಕಾರಣದಿಂದಲೇ ಒಂದು ವೇಳೆ ಓವೈಸಿ ರವರು ಪ್ರಚಾರ ಮಾಡಿದಲ್ಲಿ ಹೈದರಾಬಾದ್ ಕ್ಷೇತ್ರವು ಅವರ ವಶವಾಗುವುದರಲ್ಲಿ ಅನುಮಾನವೇ ಇರಲಿಲ್ಲ.

2013ರ ತಪ್ಪನ್ನು ಈ ಬಾರಿ ಮಾಡಬಾರದು ಎಂಬುದನ್ನು ಅರಿತುಕೊಂಡ ಓವೈಸಿ ರವರು ಹೈದರಾಬಾದಿಗೆ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಘೋಷಿಸುತ್ತಾರೆ. ಸಾಮಾನ್ಯವಾಗಿ ಇದು ರಾಜ ಸಿಂಗ್ ರವರ ನಿದ್ದೆಗೆಡಿಸುತ್ತದೆ. ಮೊದಲಿನಿಂದಲೂ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ರಾಜ ಸಿಂಗ್ ರವರು ಧರ್ಮದ ಆಧಾರದ ಮೇಲೆ ಜನ ಮತ ನೀಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂಬುದನ್ನು ಅರಿತಿದ್ದರು ಆದ ಕಾರಣ ಕ್ಕಾಗಿಯೇ ನೇರವಾಗಿ ಯೋಗಿ ಆದಿತ್ಯನಾಥ ರವರ ಮೊರೆ ಹೋಗಿದ್ದರು.

ಮೊದಲಿನಿಂದಲೂ ಓವೈಸಿ ಎಂದರೆ ಕಿಡಿಕಾರುವ ಯೋಗಿ ಆದಿತ್ಯನಾಥ್ ರವರು ಸೋಲುವ ಭೀತಿಯಲ್ಲಿದೆ ರಾಜ ಸಿಂಗ್ ಅವರ ಬೆಂಬಲಕ್ಕೆ ನಿಂತು ಹೈದರಾಬಾದಿನಲ್ಲಿ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿ ಭಾಷಣ ಮಾಡಿದರು. ಅಷ್ಟೇ ಅಲ್ಲದೇ ರಾಜಾ ಸಿಂಗ್ ಅವರಿಗೆ ಆತ್ಮಸ್ಥೈರ್ಯ ತುಂಬಿ ಜನರನ್ನು ಒಟ್ಟುಗೂಡಿಸಿ ಪ್ರತಿಯೊಂದು ವಿಭಾಗದಲ್ಲೂ ಸಹ ಬಲಗೊಳಿಸಿ ಹೈದರಾಬಾದ್ ನಲ್ಲಿ ಓವೈಸಿ ರವರನ್ನು ಕಿತ್ತೊಗೆದರು.

ಎಲ್ಲಾ ನಾನು ಅಂದುಕೊಂಡಂತೆ ಆಗುತ್ತದೆ ಎಂದು ಬೀಗುತ್ತಿದ್ದ ಓವೈಸಿ ರವರು ಹೈದರಾಬಾದಿನ ಫಲಿತಾಂಶ ಕಂಡು ದಂಗಾಗಿದ್ದರು. ಯಾಕೆಂದರೆ ಎಲ್ಲಾ ಮುಸ್ಲಿಮರು ತನಗೆ ಮತ ನೀಡುತ್ತಾರೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ವಹಿಸಿದವರು ಯೋಗಿ ಆದಿತ್ಯನಾಥ್ ರವರ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮತ್ತೊಮ್ಮೆ ರಾಜಾ ಸಿಂಗ್ ರವರು ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಏಟಿನಿಂದ ಎಚ್ಚೆತ್ತುಕೊಳ್ಳದ ಓವೈಸಿ ರವರು ಎಷ್ಟು ದಿನಗಳ ಕಾಲ ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಅಲ್ಲಿ ಇಲ್ಲಿ ಕಾಣಿಸಿಕೊಂಡರು ಮೋದಿ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದ ವಿರುದ್ಧವಾಗಿ ಮಾತ್ರ ಮಾತನಾಡಿದ್ದರು ಮತ್ತು ಇಂದು ಮೋದಿ ರವರ ಮೀಸಲಾತಿ ವಿರುದ್ಧ ಧ್ವನಿ ಎತ್ತಿದ್ದಾರೆ. ‌ಒಟ್ಟಿನಲ್ಲಿ ಬರೋಬ್ಬರಿ ಒಂದು ತಿಂಗಳಿಗೂ ಹೆಚ್ಚು ಕಾಲ ಓವೈಸಿ ರವರು ಕಣ್ಮರೆಯಾಗಿದ್ದರು ಅದಕ್ಕೆ ಯೋಗಿಜೀ ಅವರ ಒಂದು ಏಟು ಕಾರಣ.