ಅರ್ಥವಿಲ್ಲದ ಬಂದ್ ನಿಂದ ಈ ಅಜ್ಜಿ ಪಟ್ಟ ಕಷ್ಟ ಕೇಳಿ ಕಣ್ಣೀರು ಬರುತ್ತದೆ ! ಮೂರ್ಖ ನಾಯಕರೇ ಇತ್ತ ಗಮನಹರಿಸಿ
ಅರ್ಥವಿಲ್ಲದ ಬಂದ್ ನಿಂದ ಈ ಅಜ್ಜಿ ಪಟ್ಟ ಕಷ್ಟ ಕೇಳಿ ಕಣ್ಣೀರು ಬರುತ್ತದೆ ! ಮೂರ್ಖ ನಾಯಕರೇ ಇತ್ತ ಗಮನಹರಿಸಿ
ಭಾರತ ದೇಶದಲ್ಲಿ ಯಾರು ಬೇಕಾದರೂ ಯಾವಾಗ ಬೇಕಾದರೂ ಬಂದ್ ಗೆ ಕರೆ ನೀಡಬಹುದು. ನೀವು ಸಹ ಮನಸ್ಸು ಮಾಡಿದರೆ, ಮಾಧ್ಯಮಗಳಿಗೆ ಕೊಂಚ ಹಣ ನೀಡಿ, ಕೆಲವೇ ಕೆಲವು ಗೂಂಡಾಗಳನ್ನು ಬೆನ್ನಿಗೆ ಹಾಕಿಕೊಂಡು, ಒಂದೆರಡು ಕಡೆ ಟೈರ್ ಗಳಿಗೆ ಬೆಂಕಿ ಹಚ್ಚಿ, ಯಾವುದಾದರೂ ಒಂದು ಪಕ್ಷದ ವಿರುದ್ಧ ಮಾತನಾಡಿದಲ್ಲಿ ಉಳಿದ ಪಕ್ಷಗಳು ನಿಮ್ಮ ಬೆಂಬಲಕ್ಕೆ ಬಂದು ಇಡೀ ಭಾರತ ದೇಶವನ್ನು ಬಂದ್ ಮಾಡುತ್ತೇವೆ ಎಂದು ಬೀಗುತ್ತಾರೆ.
ಆದರೆ ಪ್ರತಿ ಬಾರಿಯೂ ಬಂದ್ ನಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಸಹ ಸಾಮಾನ್ಯ ಜನರು ಬಂದ್ ಗೆ ಬಲಿಯಾಗಿದ್ದಾರೆ. ಪ್ರತಿದಿನವೂ ದುಡಿದು, ಅಂದಿನ ಹೊಟ್ಟೆ ತುಂಬಿಸಿಕೊಳ್ಳುವ ಅದೆಷ್ಟೋ ಜನ ಇಂದಿನ ಬಂದ ನಿಂದ ಉಪವಾಸ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ. ಅದೇ ರೀತಿ ಕಥೆ ತುಮಕೂರಿನ ಮಾರ್ಕೆಟ್ನಲ್ಲಿ ನಡೆದಿದ್ದು ಎಲ್ಲರ ಕಣ್ಣೀರಿಗೆ ಕಾರಣ ವಾಗಿದೆ.
ಪ್ರತಿದಿನವೂ ತಮ್ಮ ಹೊಟ್ಟೆಪಾಡಿಗಾಗಿ ತುಮಕೂರಿನ ಮಾರ್ಕೆಟ್ ನಲ್ಲಿ ಭಾಗ್ಯಮ್ಮ ಎಂಬ ವೃದ್ದೆ ತುಮಕೂರು ಬಸ್ ನಿಲ್ದಾಣದಲ್ಲಿ ಎಂದಿನಂತೆ 200 ರಿಂದ 300 ರೂಪಾಯಿಗಳನ್ನು ಒಟ್ಟುಗೂಡಿಸಿ ಹೂವ ಕೊಂಡುಕೊಂಡು ಮಾರಲು ಕುಳಿತಿದ್ದರು.
ಇದೇ ವೇಳೆಯಲ್ಲಿ ಯಾಕೋ ಬಸ್ ಸ್ಟಾಂಡ್ ನಲ್ಲಿ ಜನರೇ ಇಲ್ಲ ಎಂದು ಭಾವಿಸಿದವರು ಯಾಕೆ ಬಸ್ ಗಳು ಸರಿಯಾಗಿ ಬರುತ್ತಿಲ್ಲ ಎಂದು ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಸಾರ್ವಜನಿಕರು ಇಂದು ಹಾಗೂ ನಾಳೆ ಬಂದ್ ಇದೆ ಎಂದು ಉತ್ತರಿಸಿದ್ದಾರೆ.
ಆಗ ಬಾಗ್ಯಮ್ಮ ರವರು ಮನೆಯಲ್ಲಿ ಟಿವಿ ಇಲ್ಲದ ಕಾರಣದಿಂದ ಗೊತ್ತಿಲ್ಲದೆ ಬಂಡವಾಳ ಹಾಕಿದ್ದೇನೆ. ಹೊಟ್ಟೆಪಾಡಿಗಾಗಿ 200 300 ಇಟ್ಟುಕೊಂಡಿದ್ದೆ, ಈಗ ಅದು ಸಹ ನನ್ನ ಬಳಿ ಇಲ್ಲ ಈ ಬಂದ್ ನಿಂದ ಮುನ್ನೂರು ರೂಪಾಯಿ ನಷ್ಟವಾಗಿದೆ ಹೀಗಾದರೆ ಏನು ಮಾಡಬೇಕು. ಜಗಳ ವಿದ್ದರೆ ಜನರು ಹಾಗೂ ಸಚಿವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅವರು ಮಾಡಿದ ತಪ್ಪಿನಿಂದ ನಮ್ಮಂಥವರಿಗೆ ತೊಂದರೆ ಎಂದು ದುಃಖ ಪಡುತ್ತಾ ವಾಪಸ್ಸು ಮನೆಗೆ ತೆರಳಿದ್ದಾರೆ.