ಬಿಜೆಪಿ ಭರ್ಜರಿ ಗೆಲುವಿಗೆ ಚಾಣಕ್ಯನ ಮೂರು ಸೂತ್ರಗಳು ಸಿದ್ಧ: ಯಾವುವು ಗೊತ್ತಾ??
ಬಿಜೆಪಿ ಭರ್ಜರಿ ಗೆಲುವಿಗೆ ಚಾಣಕ್ಯನ ಮೂರು ಸೂತ್ರಗಳು ಸಿದ್ಧ: ಯಾವುವು ಗೊತ್ತಾ??
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ಬಿಜೆಪಿ ಪಕ್ಷವುದೇಶದ ಹಲವಾರು ರಾಜ್ಯಗಳಲ್ಲಿ ಸ್ವತಂತ್ರವಾಗಿ ಇಲ್ಲವೇ ಮೈತ್ರಿಕೂಟ ದೊಂದಿಗೆ ಸರ್ಕಾರವನ್ನು ರಚಿಸಿ ಅಧಿಕಾರ ನಡೆಸುತ್ತಿದೆ. ಈಗಾಗಲೇ ಹಲವಾರು ಚುನಾವಣೆಗಳನ್ನು ಗೆದ್ದುಬೀಗಿರುವ ಬಿಜೆಪಿ ಪಕ್ಷವು ಒಂದು ಗೆಲುವಿಗಾಗಿ ಹಾತೊರೆಯುತ್ತಿದೆ ಅದುವೇ ಮುಂದಿನ ಲೋಕಸಭಾ ಚುನಾವಣೆ.
ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರವನ್ನು ವಹಿಸಿರುವ ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತರಾಗಿರುವ ಅಮಿತ್ ಶಾ ರವರು 2019ರ ಮಹಾ ಕದನಕ್ಕೆ ಮೂರು ಸೂತ್ರಗಳನ್ನು ಈಗಾಗಲೇ ಸಿದ್ಧ ಮಾಡಿಕೊಂಡಿದ್ದಾರೆ. ಆ ಮೂರು ಸೂತ್ರಗಳನ್ನು ಇಟ್ಟುಕೊಂಡು ಇಲ್ಲಿಯವರೆಗೂ ಭರ್ಜರಿ ಗೆಲುವನ್ನು ದಾಖಲಿಸಿರುವ ಅಮಿತ್ ಶಾ ರವರು ಮುಂದಿನ ಲೋಕಸಭಾ ಚುನಾವಣೆಯನ್ನು ಈ ಮೂರೂ ಸೂತ್ರಗಳಿಂದಲೇ ಗೆಲ್ಲಲಿದ್ದಾರೆ.
ಅಷ್ಟಕ್ಕೂ ಆ ಮೂರು ಸೂತ್ರಗಳು ಯಾವುವು ಗೊತ್ತಾ??
1. ಪ್ರಚಾರ ಕಾರ್ಯ ( ಕ್ಯಾಂಪೇನ್)
ಚುನಾವಣೆಯಲ್ಲಿ ಪ್ರಚಾರ ಕಾರ್ಯ ಬಹಳ ಮುಖ್ಯವಾಗಿರುತ್ತದೆ. ಪ್ರಚಾರ ಮಾಡುವಾಗ ಇಲ್ಲಸಲ್ಲದ ವಿಷಯಗಳನ್ನು ತೆಗೆದುಕೊಳ್ಳಬಾರದು, ಯಾವ ಸಮಯದಲ್ಲಿ ಪ್ರಚಾರಕ್ಕೆ ಯಾವ ವಿಷಯವನ್ನು ಬಳಸಬೇಕು ಹಾಗೂ ಯಾವ ವಿಚಾರವನ್ನು ಹರಿ ಬಿಡಬೇಕು ಎಂಬುದು ಬಹಳ ಮುಖ್ಯವಾಗಿರುತ್ತದೆ. ಇಷ್ಟೇ ಅಲ್ಲದೆ ಪ್ರಚಾರ ಮಾಡುವ ಭರದಲ್ಲಿ ಎಲ್ಲರೂ ಸಿಕ್ಕಿ ಸಿಕ್ಕಿದ ಮಾತುಗಳನ್ನು ಹೇಳಬಾರದು. ಬದಲಾಗಿ ಯಾರ ಮೂಲಕ ಯಾವ ಮಾತುಗಳನ್ನು ಹೇಳಬೇಕು ಅಷ್ಟೇ ಅಲ್ಲದೆ ಯಾವ ನಾಯಕರಿಗೆ ಒತ್ತು ನೀಡಿ ಮಾತನಾಡಬೇಕು ಎಂಬುದು ಬಹಳ ಮುಖ್ಯವಾಗಿರುತ್ತದೆ. ಖುದ್ದು ಅಮಿತ್ ಶಾ ಹಾಗೂ ಅಮಿತ್ ಶಾ ರವರ ತಂಡವೇ ವಸ್ತುನಿಷ್ಟವಾಗಿ ಅಧ್ಯಯನ ನಡೆಸಿ ಪ್ರಚಾರ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
2. ಕಾರ್ಯಕರ್ತರು
ಯಾವುದೇ ಒಂದು ಪಕ್ಷಕ್ಕೆ ಪ್ರತಿಯೊಂದು ಮತಗಳು ಸಹ ಬಹಳ ಮುಖ್ಯವಾಗಿರುತ್ತದೆ ಅದರಲ್ಲಿಯೂ ತೃತೀಯರಂಗ ಹಾಗೂ ಇತರ ಮೈತ್ರಿಕೂಟ ಗಳಿಂದ ಬಾರಿ ಸವಾಲನ್ನು ಎದುರಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಪ್ರತಿಯೊಂದು ಮತ ಸಹ ಬಹಳ ಮುಖ್ಯ. ಹೀಗೆ ಪ್ರತಿಯೊಂದು ಮತವನ್ನು ಪಡೆದು ಕೊಳ್ಳಲು ಪಕ್ಷವನ್ನು ಬೂತ್ ಮಟ್ಟದಿಂದ ಬಲವರ್ಧನೆಗೆ ಗೊಳಿಸಬೇಕಾಗುತ್ತದೆ.
ಬೂತ್ ಮಟ್ಟದಿಂದ ಪಕ್ಷವನ್ನು ಬಲಗೊಳಿಸಲು ಸ್ವತಹ ಅಮಿತ್ ಶಾ ರವರು ಕಣಕ್ಕಿಳಿಯುತ್ತಾರೆ. ಮತದಾರರ ಪಟ್ಟಿಯ ಪ್ರತಿ ಪುಟಕ್ಕೂ ಒಬ್ಬ ಪ್ರಮುಖರನ್ನು ನೇಮಿಸಲಾಗುತ್ತದೆ. ಆ ಪುಟದ ಮೇಲಷ್ಟೇ ಆ ಕಾರ್ಯಕರ್ತ ಗಮನಹರಿಸಬೇಕು ಇದರಿಂದ ಹೆಚ್ಚಿನ ಮತ ಪಡೆಯಲು ಅನುಕೂಲವಾಗುತ್ತದೆ. ಮೇಲ್ನೋಟಕ್ಕೆ ಕೆಲಸ ಅತ್ಯಂತ ಸುಲಭವಾಗಿರಬಹುದು ಹಾಗೂ ಎಲ್ಲಾ ಪಕ್ಷಗಳು ಮಾಡುತ್ತೇವೆ ಎಂದು ನೀವು ಅಂದುಕೊಳ್ಳಬಹುದು ಆದರೆ ಬೃಹತ್ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತ ಕಾರ್ಯಕರ್ತನನ್ನು ಹೊಂದಿರುವ ಬಿಜೆಪಿ ಪಕ್ಷಕ್ಕೆ ಈ ತಂತ್ರ ಬಹಳ ಸುಲಭವಾಗಿ ಸಾಧ್ಯವಾಗುತ್ತದೆ.
3. ನರೇಂದ್ರ ಮೋದಿ
ಇಲ್ಲಿಯವರೆಗೂ ಬಿಜೆಪಿ ಪಕ್ಷವು 2014ರ ಚುನಾವಣೆಯಿಂದ ಹಿಡಿದು ಉಳಿದೆಲ್ಲಾ ಚುನಾವಣೆಗಳನ್ನು ನರೇಂದ್ರ ಮೋದಿ ರವರ ನೇತೃತ್ವದಲ್ಲಿ ನಡೆಸಿದೆ. ನರೇಂದ್ರ ಮೋದಿ ರವರಿಗೆ ಇರುವ ವರ್ಚಸ್ಸನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ಪಕ್ಷವು ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿಯೂ ಸಹ ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ಹಾಗೂ ಚುನಾವಣೆಯ ಪ್ರಮುಖ ಸಂದರ್ಭದಲ್ಲಿ ಮೋದಿ ಅವರನ್ನು ಕರೆಸಿ ಭಾಷಣ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಮೋದಿ ರವರ ಹೆಸರನ್ನು ಪುನಹ ಪುನಹ ಬಳಸಿಕೊಂಡು ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಮೂಲಕ ನರೇಂದ್ರ ಮೋದಿ ಅವರು ತಮಗಾಗಿ ಇದ್ದಾರೆ ಎಂಬ ಆತ್ಮಸ್ಥೈರ್ಯವನ್ನು ಜನರಲ್ಲಿ ತುಂಬಲು ಅಮಿತ್ ಶಾ ತಂಡ ಸಿದ್ಧವಾಗಿದೆ. ಬಹಳ ಸೂಕ್ಷ್ಮವಾಗಿ ಪ್ರತಿಯೊಂದು ಅಂಶವನ್ನು ಗಮನಕ್ಕೆ ತೆಗೆದುಕೊಂಡು ನರೇಂದ್ರ ಮೋದಿರವರ ಸಮಯವನ್ನು ಬಳಸಿಕೊಳ್ಳಲಾಗುತ್ತದೆ.
ಒಟ್ಟಿನಲ್ಲಿ ಈಗಾಗಲೇ ಹಲವಾರು ರಾಜ್ಯಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಬಿಜೆಪಿ ಪಕ್ಷವು ಈ ಮೇಲಿನ ಮೂರು ಸೂತ್ರಗಳಿಂದ ಭರ್ಜರಿ ಗೆಲುವನ್ನು ದಾಖಲಿಸುತ್ತಾ ಸಾಗಿದೆ. ಒಂದು ವೇಳೆ ಈ ಮೂರು ಸೂತ್ರಗಳು ಲೋಕಸಭಾ ಚುನಾವಣೆಯಲ್ಲಿಯೂ ಸಹ ಯಶಸ್ವಿಯಾದಲ್ಲಿ ಬಿಜೆಪಿ ಪಕ್ಷ ಭರ್ಜರಿ ಗೆಲುವು ದಾಖಲಿಸುವುದು ಖಚಿತ.