ಕೇಜ್ರಿವಾಲ್ ಗೆ ಬಿಗ್ ಶಾಕ್: ನರೇಂದ್ರ ಮೋದಿರವರ ಅಧಿಕಾರಕ್ಕೆ ಮನಸೋತ ಶಾಸಕ ಮಾಡಿದ್ದೇನು ಗೊತ್ತಾ?

ಕೇಜ್ರಿವಾಲ್ ಗೆ ಬಿಗ್ ಶಾಕ್: ನರೇಂದ್ರ ಮೋದಿರವರ ಅಧಿಕಾರಕ್ಕೆ ಮನಸೋತ ಶಾಸಕ ಮಾಡಿದ್ದೇನು ಗೊತ್ತಾ?

0

ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ರವರು ಮೊದಲಿನಿಂದಲೂ ಮೋದಿ ಅವರ ವಿರುದ್ಧ ಟೀಕಾ ಪ್ರಹಾರಗಳನ್ನು ಮಾಡುತ್ತಾ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಟೀಕಾ ಪ್ರಹಾರಗಳು ಮಾಡುತ್ತಾರೆ ಎಂದರೆ ನರೇಂದ್ರ ಮೋದಿ ಅವರು ಯಾವುದೇ ಕೆಲಸ ಮಾಡಿದರು ಮೊದಲು ಅಡ್ಡಗಾಲು ಹಾಕುವುದು ಕೇಜ್ರಿವಾಲ್ ಎಂದರೆ ತಪ್ಪಾಗಲಾರದು, ಇದುವರೆಗೂ ಯಾವ ಕೆಲಸಕ್ಕೂ ಅಡ್ಡಗಾಲು ಹಾಕಿ ಕೆಲಸವನ್ನು ತಡೆಯಲು ವಿಫಲವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಅರವಿಂದ ಕೇಜ್ರಿವಾಲ್ ರವರಿಗೆ ಮೋದಿ ಅವರು ಬಹುದೊಡ್ಡ ತಲೆನೋವಾಗಿ ಇರುವುದು ಕಂಡುಬರುತ್ತಿದೆ. ಈಗ ನರೇಂದ್ರ ಮೋದಿ ಅವರು ಅಷ್ಟೇ ಅಲ್ಲದೆ ತಮ್ಮ ಪಕ್ಷದ ಶಾಸಕರೇ ಅರವಿಂದ ಕೇಜ್ರಿವಾಲ್ ರವರಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ, ಆಮ್ ಆದ್ಮಿ ಪಕ್ಷದ ಶಾಸಕ ಮತ್ತು ಮಾಜಿ ಸಚಿವರಾಗಿದ್ದ ಕಪಿಲ್ ಮಿಶ್ರಾ ಅವರು ಮೋದಿ ರವರ ಅಭಿಯಾನ ಶುರು ಮಾಡಿದ್ದು ಮೋದಿ ರವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಮೋದಿ ಅವರಿಗೆ ಸೆಡ್ಡು ಹೊಡೆಯಲು ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮೇರಾ ಪಿಎಂ ಚೋರ ಹೈ ಎಂಬ ಅಭಿಯಾನವನ್ನು ಅರವಿಂದ ಕೇಜ್ರಿವಾಲ್ ರವರು ಆರಂಭಿಸಿದ್ದರು ಆದರೆ ಇದೀಗ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವರಾಗಿದ್ದ ಕಪಿಲ್ ಮಿಶ್ರಾ ಅವರು ನನ್ನ ಪ್ರಧಾನಿ ನನ್ನ ಹೆಮ್ಮೆ ಎಂಬ ಅಭಿಯಾನವನ್ನು ಪ್ರಾರಂಭಿಸಿ ಅರವಿಂದ ಕೇಜ್ರಿವಾಲ್ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

ಇನ್ನು ಕೆಲವೇ ಕೆಲವು ದಿನಗಳಲ್ಲಿ ನವದೆಹಲಿಯ ಇಂಡಿಯಾ ಗೇಟ್ ಅಭಿಯಾನ ಆರಂಭಿಸುವುದಾಗಿ ತಿಳಿಸಿರುವ ಅವರು ದೇಶದ ಜನತೆಗೆ ಬೆಂಬಲ ಕೋರಿ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಈ ವಿಡಿಯೋಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮೂಡಿಸಿದೆ. ಅಷ್ಟೇ ಅಲ್ಲದೆ ಅರವಿಂದ ಕೇಜ್ರಿವಾಲ್ ರವರಿಗೆ ಶಾಸಕರ ಈ ನಡೆ  ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಭಾರಿ ಮುಖಭಂಗ ಉಂಟಾಗಿದೆ.