ಡಿಕೆ ಶಿವಕುಮಾರ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ ಬಲಗೈ ಬಂಟ

ಡಿಕೆ ಶಿವಕುಮಾರ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ ಬಲಗೈ ಬಂಟ

0

ಲೋಕಸಭಾ ಉಪಚುನಾವಣೆ ಘೋಷಿಸಲಾದ ಕ್ಷಣದಿಂದಲೂ ರಾಮನಗರವು ಅಕ್ಷರಸಹ ರಣರಂಗವಾಗಿ ಮಾರ್ಪಟ್ಟಿದೆ. ಮೈತ್ರಿ ಸರ್ಕಾರವು ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ನಿರ್ಧರಿಸಿದ ಕ್ಷಣ ಎರಡೂ ಪಕ್ಷಗಳಲ್ಲಿ ಭಿನ್ನಮತ ಎದ್ದಿದ್ದವು. ಆದರೂ ದೇವೇಗೌಡರು ತಮ್ಮ ಕುಟುಂಬದವರಾದ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ಘೋಷಿಸಿ ನಾವು ಯಾರಿಗೂ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಸಾರಿದರು.

[do_widget id=et_ads-2]

ಇದರಿಂದ ಇನ್ನೂ ಕುಪಿತಗೊಂಡ ಕಾಂಗ್ರೆಸ್ ನಾಯಕರು ಬರೋಬ್ಬರಿ 25 ಜನ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದರು. ಪಕ್ಷಾಂತರ ಗೊಂಡಿದ್ದ 25 ಕಾಂಗ್ರೆಸ್ ನಾಯಕರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಎಂ ಎಲ್ ಸಿ ಲಿಂಗಪ್ಪನವರ ಮಗ ಚಂದ್ರಶೇಖರ್ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

[do_widget id=et_ads-3]

ಆದರೆ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಬಂಡಾಯವನ್ನು ಹತ್ತಿಕ್ಕುತ್ತೇನೆ ಎಂದು ಆತ್ಮವಿಶ್ವಾಸದಿಂದ ಮುಂದುವರೆದಿದ್ದರು. ಆದರೆ ಡಿಕೆಶಿ ಬಲಗೈಬಂಟ ಎನಿಸಿಕೊಂಡಿದ್ದ mlc ಲಿಂಗಪ್ಪನವರು ಈಗ ಬಂಡಾಯವೆದ್ದು ಮಗನಿಗೆ ಸಾಥ್ ನೀಡಲು ನಿರ್ಧರಿಸಿದ್ದಾರೆ.

[do_widget id=et_ads-4]

ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಲಿಂಗಪ್ಪನವರು ಒಂದು ವೇಳೆ ನನ್ನ ಮಗ ಚಂದ್ರಶೇಖರ್ ರವರು ರಾಮನಗರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಡಿಕೆ ಶಿವಕುಮಾರ್ ಅವರಿಗೆ ಬಹಿರಂಗವಾಗಿ ವಾರ್ನಿಂಗ್ ನೀಡಿದ್ದಾರೆ.

[do_widget id=et_ads-5]

ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷವು ಸಹ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕು ನಾವು ಕ್ಷೇತ್ರ ಬಿಟ್ಟುಕೊಡಲು ತಯಾರಿಲ್ಲ ಎಂದು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು ಡಿಕೆ ಶಿವಕುಮಾರ್ ಅವರಿಗೆ ಹೊಸ ತಲೆನೋವಾಗಿ ಮಾರ್ಪಟ್ಟಿದೆ.

[do_widget id=et_ads-6]