ಹೆಮ್ಮಯ ವಿಷಯ: ಕೆನಡಾದಲ್ಲಿ ಹಿಂದೂ ಪರಂಪರೆ ತಿಂಗಳು ಆಚರಣೆಗೆ ನಿರ್ಧಾರ

ಹೆಮ್ಮಯ ವಿಷಯ: ಕೆನಡಾದಲ್ಲಿ ಹಿಂದೂ ಪರಂಪರೆ ತಿಂಗಳು ಆಚರಣೆಗೆ ನಿರ್ಧಾರ

0

ವಿಶ್ವದೆಲ್ಲೆಡೆ ಹಿಂದೂ ಧರ್ಮವು ಒಂದು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಿಂದೂ ಧರ್ಮ ಜನಿಸಿದ ಭಾರತದಲ್ಲಿ ಹಲವಾರು ಹಿಂದೂ ಧರ್ಮದ ವಿರುದ್ಧ ಧ್ವನಿ ಎತ್ತಿದ್ದಾರೆ ಮತ್ತು ಟೀಕೆಗಳನ್ನು ಮಾಡುತ್ತಿದ್ದಾರೆ ಎಂಬುದು ವಿಷಾದನೀಯ ಸಂಗತಿ.

[do_widget id=et_ads-2]

ಆದರೆ ಈ ವಿಷಯ ಕೇಳಿದರೆ ಹಿಂದೂ ಧರ್ಮದ ವಿರೋಧಿಗಳಿಗೆ ಬರ್ನಾಲ್ ಭಾಗ್ಯ ದೊರಕಲಿದೆ. ದಯವಿಟ್ಟು ಆ ರೀತಿ ಯಾರಾದರೂ ಇದ್ದರೆ ತಮ್ಮ ವಿಳಾಸವನ್ನು ಕಳುಹಿಸಿ ನಾವೇ ಬರ್ನಾಲ್ ಅನ್ನು ಉಚಿತವಾಗಿ ಕಳುಹಿಸುತ್ತೇವೆ.

[do_widget id=et_ads-3]

ನಿನ್ನೆ ಕೆನಡಾ ಸಂಸತ್ತಿನಲ್ಲಿ ಭಾರತ-ಕೆನಡಿಯನ್ ಸಂಸದರಾದ ದೀಪಕ್ ರವರು ಅಕ್ಟೋಬರ್ ತಿಂಗಳಿನಲ್ಲಿ ಕೆನಡಾದಲ್ಲಿ ಹಿಂದೂ ಪರಂಪರೆ ತಿಂಗಳು ಎಂದು ಹೆಸರಿಡುವ ಮಸೂದೆಯನ್ನು ಮಂಡಿಸಿದ್ದಾರೆ. ಈ ಮಸೂದೆಯನ್ನು ಮಂಡಿಸಲು ಅವಕಾಶ ನೀಡಿದ್ದಕ್ಕಾಗಿ ಪ್ರತಿಯೊಬ್ಬ ಹಿಂದೂ ಕೆನಡಿಯನ್ ಮತ್ತು ಸರ್ಕಾರಕ್ಕೆ ನಮನ ಸಲ್ಲಿಸಿದ್ದಾರೆ.

[do_widget id=et_ads-4]

”ನಮ್ಮ ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಹಿಂದೂ ಕೆನಡಿಯನ್ನರು ವಹಿಸಿದ ಮಹತ್ವದ ಪಾತ್ರವನ್ನು ಮಾನ್ಯ ಮಾಡಿ ಈ ಮಸೂದೆಯನ್ನು ಮಂಡಿಸುವ ಗೌರವ ನನಗೆ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ” ಎಂದು ಭಾರತ-ಕೆನಡಿಯನ್ ಸಂಸದ ದೀಪಕ್ ಒಭ್ರಾಯ್ ಹೇಳಿದರು.

”ಕೆನಡದ ಖ್ಯಾತ ಬಹುಸಂಸ್ಕೃತಿಯ ನೆಲದಲ್ಲಿ ಹಿಂದೂ ಕೆನಡಿಯನ್ನರು ಮಹತ್ವದ ಕೊಂಡಿಯಾಗಿದ್ದಾರೆ. ದೇಶದ ಯಶೋಗಾಥೆಯಲ್ಲಿ ಅವರು ಪಾಲು ಹೊಂದಿದ್ದಾರೆ. ಜಗತ್ತಿನ ಶ್ರೇಷ್ಠ ದೇಶಗಳಲ್ಲಿ ಕೆನಡ ಒಂದಾಗಿರುವುದರಲ್ಲಿ ಅವರ ಪಾಲೂ ಇದೆ.ನೆನಪಿಸಲು, ಆಚರಿಸಲು ಹಾಗೂ ಗೊತ್ತಿಲ್ಲದವರಿಗೆ ಹೇಳಿಕೊಡಲು ಅದೊಂದು ಉತ್ತಮ ಅವಕಾಶ” ಎಂದು ಆಲ್ಬರ್ಟ ರಾಜ್ಯದ ಕ್ಯಾಲ್ಗರಿ ಫಾರೆಸ್ಟ್ ಲಾನ್ ಪ್ರತಿನಿಧಿಸುವ ದೀಪಕ್ ಹೇಳಿದರು.

[do_widget id=et_ads-5]