ರಾಮನಗರದಲ್ಲಿ ಡಿಕೆಶಿ ರವರಿಗೆ ಶಾಕ್: ಕಂಗಾಲಾದ ಮೈತ್ರಿ ಸರ್ಕಾರ

ರಾಮನಗರದಲ್ಲಿ ಡಿಕೆಶಿ ರವರಿಗೆ ಶಾಕ್: ಕಂಗಾಲಾದ ಮೈತ್ರಿ ಸರ್ಕಾರ

0

ರಾಜ್ಯದಲ್ಲಿ 104 ಸೀಟುಗಳನ್ನು ಗೆದ್ದರು ಬಿಜೆಪಿ ಪಕ್ಷಕ್ಕೆ ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆ ಏರುವುದನ್ನು ತಡೆದದ್ದು ಸಚಿವ ಡಿ ಕೆ ಶಿವಕುಮಾರ್ ರವರು ಎಂಬ ಮಾತಿದೆ. ಆದರೆ ಇಂದು ಸ್ವ ಕ್ಷೇತ್ರದಲ್ಲಿಯೇ ಡಿಕೆ ಶಿವಕುಮಾರ್ ಅವರಿಗೆ ಎದುರಾದ ಸಂಕಷ್ಟ ಕೇಳಿದರೆ ಎಲ್ಲರೂ ಶಾಕ್ ಆಗುತ್ತಿದ್ದಾರೆ.

[do_widget id=et_ads-2]

ಕನಕಪುರ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಡಿ ಕೆ ಶಿವಕುಮಾರ್ ಅವರ ವರ್ಚಸ್ಸು ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಮತ್ತು ವಿಧಾನಪರಿಷತ್ ಸದಸ್ಯರಾದ ಸಿ ಎಂ ಲಿಂಗಪ್ಪ ನವರ ಪುತ್ರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

[do_widget id=et_ads-4]

ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ ರುದ್ರೇಶ್ ಮತ್ತು ಮಾಜಿ ಶಾಸಕರಾದ ಸಿ ಪಿ ಯೋಗೇಶ್ವರ್ ರವರು ಲಿಂಗಪ್ಪನವರ ಪುತ್ರ ಚಂದ್ರಶೇಖರ್ ರವರನ್ನು ಬಿಡದಿಯ ಹೋಟೆಲ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದಾರೆ.

[do_widget id=et_ads-5]

ಇವರ ಈ ನಡೆಗಳನ್ನು ನೋಡಿರುವ ಸಚಿವ ಡಿಕೆ ಶಿವಕುಮಾರ್ ರವರು ಒಂದು ಕ್ಷಣ ದಂಗಾಗಿದ್ದು ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಿಂಗಪ್ಪನವರ ಪುತ್ರ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಕಂಡು ಸಿಟ್ಟಾಗಿದ್ದಾರೆ. ಇಷ್ಟೇ ಅಲ್ಲದೆ ಲೋಕಸಭಾ ಉಪಚುನಾವಣೆಯ ಮೇಲೆ ಇದರ ಪರಿಣಾಮ ಬೀರುವುದಂತೂ ಖಂಡಿತ ಎಂದು ಕಂಗಾಲಾಗಿರುವ ಮೈತ್ರಿ ಸರ್ಕಾರವು ರಾಜಕೀಯದಲ್ಲಿ ತಿರುವು ಕಾಣಿಸಬಹುದು ಎಂದು ಚಿಂತೆಗೀಡಾಗಿದೆ.

[do_widget id=et_ads-6]