ವಿಶೇಷ ಅಂಕಣ: ದೇಶದ ಮಾನ ಹರಾಜು ಹಾಕುವ ಮುನ್ನ, ಉತ್ತರಿಸಿ ರಮ್ಯಾಕ್ಕ

ವಿಶೇಷ ಅಂಕಣ: ದೇಶದ ಮಾನ ಹರಾಜು ಹಾಕುವ ಮುನ್ನ, ಉತ್ತರಿಸಿ ರಮ್ಯಾಕ್ಕ

0

ನಮಸ್ಕಾರ ರಮ್ಯಾರವರೆ, ನೀವು ರಾಜಕೀಯಕ್ಕೆ ಬರುವ ಮೊದಲು ನಿಮಗೆ ಸಾವಿರಾರು ಅಭಿಮಾನಿಗಳು ಸ್ಯಾಂಡಲ್ವುಡ್ ನಲ್ಲಿ ಇದ್ದರು. ಅದರಲ್ಲಿಯೂ ನಿಮ್ಮ ಚಿತ್ರಗಳನ್ನು ವಿದೇಶದಲ್ಲಿರುವ ಕನ್ನಡಿಗರು ಸಹ ಹೆಚ್ಚು ನೋಡುತ್ತಿದ್ದರು. ನೀವು ಸ್ಯಾಂಡಲ್ ವುಡ್ ನಲ್ಲಿ ಮೋಹಕ ತಾರೆ ಯಾಗಿ ಮೆರೆದಾಗ ನಿಮಗೆ ಸಾವಿರಾರು ಅಭಿಮಾನಿಗಳು ಮತ್ತು ಫಾಲೋವರ್ಸ್ ಇರುತ್ತಾರೆ.

ಈ ಅಭಿಮಾನಿಗಳನ್ನು ನಂಬಿಕೊಂಡು ನೀವು ರಾಜಕೀಯಕ್ಕೆ ಬಂದಿದ್ದೀರಿ, ಮೊದ ಮೊದಲು ನೀವು ರಾಜಕೀಯಕ್ಕೆ ಬಂದಿದ್ದು ದೇಶಕ್ಕೆ ಹೊಳಿತು ಮಾಡಲು ಎಂದು ನಮಗನ್ನೀಸಿತ್ತು. ಆದರೆ ತದನಂತರ ನಿಮ್ಮ ಕೆಲವು ಕಾರ್ಯವೈಕರಿ ಗಳನ್ನು ನೋಡಿದರೆ ನೀವು ಕೇವಲ ರಾಜಕೀಯ ಮಾಡುತ್ತಿದ್ದಿರೇ ಹೊರತು ದೇಶದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದು ನನಗೆ ತಿಳಿಯುತ್ತಿದೆ.

ನಿಮ್ಮನ್ನು ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ನಾನು ಸಹ ಫಾಲೋ ಮಾಡುತ್ತೇನೆ ನೀವು ತಿಳಿದವರು ನಿಮ್ಮ ಕನ್ನಡ ಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿದೆ ಕನ್ನಡ ಬರುವುದಿಲ್ಲ ಎಂಬಂತೆ ಇಂಗ್ಲಿಷ್ ನಲ್ಲಿ ಠಸ್ ಪುಸ್ ಎಂದು ಮಾತನಾಡುವ ನೀವು ಯಾವುದೇ ಒಂದು ವಿಷಯವನ್ನು ಪೋಸ್ಟ್ ಮಾಡುವ ಮುನ್ನ ಅದರ ಹಿಂದಿನ ಸತ್ಯವನ್ನು ಅರಿತು ಕೊಳ್ಳುವ ಪ್ರಯತ್ನ ಕೂಡ ಮಾಡುವುದಿಲ್ಲ ಎಂಬುದು ವಿಷಾದಕರ ಸಂಗತಿ.

ನಿಮ್ಮ ಹಲವಾರು ಪೋಸ್ಟ್ಗಳನ್ನು ನಾನು ನೋಡಿದ್ದೇನೆ ಅದರಲ್ಲಿ ಇತ್ತೀಚೆಗೆ ನಿಮ್ಮ ಆಸಕ್ತಿ ಕ್ರಿಕೆಟ್ ತಂಡದ ಕಡೆಗೆ ಸಾಗಿದಂತೆ ಕಾಣುತ್ತದೆ ಪ್ರತಿ ಬಾರಿಯೂ ನಮ್ಮ ದೇಶದ ಕ್ರಿಕೆಟಿಗರು ಬ್ಯಾಟಿಂಗ್ ಅಥವಾ ಬೌಲಿಂಗ್ ನಲ್ಲಿ ಮಿಂಚಿದಾಗ ಅದನ್ನು ದೇಶದ ಕೆಲವು ಸಂಗತಿಗಳ ಬಗ್ಗೆ ಹೋಲಿಸುವ ನೀವು ದಯವಿಟ್ಟು ಮೊದಲು ಅದರ ಹಿಂದಿನ ಸತ್ಯವನ್ನು ಅರಿತುಕೊಳ್ಳುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ.

ಅದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗಷ್ಟೇ ಪೆಟ್ರೋಲ್ ಬೆಲೆ ಮತ್ತು ಡಾಲರ್ ಏರಿಕೆಯ ಬಗ್ಗೆ ನೀವು ಪೋಸ್ಟ್ ಮಾಡುತ್ತಿರುವ ಪೋಸ್ಟ್ಗಳನ್ನು ನೋಡುತ್ತಿದ್ದೇನೆ ಇದರಲ್ಲಿ ಕೇದಾರ್ ಜಾಧವ್ ರವರ ಬಗ್ಗೆ ಮಾತನಾಡಿರುವ ನೀವು ಕೇದಾರ್ ಜಾಧವ್ ರವರ ಬೌಲಿಂಗ್ ಕೆಳ ಮಟ್ಟದಲ್ಲಿ ಇರುತ್ತದೆ (low) ಆದರೆ ರೂಪಾಯಿಗಿಂತ ಕೆಳಮಟ್ಟದಲ್ಲಿ ಇಲ್ಲ ಎಂಬ ಪೋಸ್ಟನ್ನು ಹಾಕಿದ್ದೀರಿ. ನೀವು ಅನಾಗರಿಕರಲ್ಲ, ಸಾಕಷ್ಟು ವಿಷಯಗಳನ್ನು ಓದಿ ತಿಳಿದುಕೊಂಡಿದ್ದೀರಾ ಈ ಪೋಸ್ಟ್ ಹಾಕುವ ಮುನ್ನ ಎರಡು ನಿಮಿಷ ನೀವು ಗೂಗಲ್ ನಲ್ಲಿ ಡಾಲರ್ ಬೆಲೆ ಏರಿಕೆಯಾಗಲು ಕಾರಣವೇನು ಎಂಬುದನ್ನು ಸರ್ಚ್ ಮಾಡಿದರೆ ಖಂಡಿತ ನೀವು ಈ ಪೋಸ್ಟನ್ನು ಹಾಕುತ್ತಿರಲಿಲ್ಲ.

ಟ್ರಂಪ್ ರವರ ದ್ವಂದ ರೀತಿಯ ಕಾರಣಗಳಿಂದ ಡಾಲರ್ ದರ ಏರಿಕೆಯಾಗುತ್ತಿದೆಯೇ ಹೊರತು ಭಾರತೀಯ ರೂಪಾಯಿ ಮಟ್ಟ ಕೆಳಗೆ ಹೋಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನಿಮಗೆ ಯಾಕೆ ಈ ಕಾರಣ ತಿಳಿದಿಲ್ಲ ಎಂಬುದು ನನಗೆ ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಆದರೂ ನೀವು ಚಿಂತಿಸಬೇಡಿ ಜನಸಾಮಾನ್ಯರಿಗೆ ಇರುವ ಸಾಮಾನ್ಯ ಜ್ಞಾನ ನಿಮಗೂ ನೀಡಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ.

ಇಂತಿ ನೀವು ಸ್ಯಾಂಡಲ್ವುಡ್ ನಲ್ಲಿ ಇದ್ದಾಗ ನಿಮ್ಮ ಅಭಿಮಾನಿ.