ಮೋದಿ ರವರ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ದೇಶದ್ರೋಹ ಪ್ರಕರಣ, ರಮ್ಯಾರವರಿಗೆ ಮತ್ತೊಂದು ಶಾಕ್.

ಮೋದಿ ರವರ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ದೇಶದ್ರೋಹ ಪ್ರಕರಣ, ರಮ್ಯಾರವರಿಗೆ ಮತ್ತೊಂದು ಶಾಕ್.

0

ಮಾಜಿ ಸಂಸದೆಯಾದ ಮತ್ತು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಘಟಕದ ಮುಖ್ಯಸ್ಥರಾಗಿರುವ ರಮ್ಯಾರವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬಿಜಿಯಾಗಿರುತ್ತಾರೆ. ಹಲವಾರು ಬಾರಿ ಮೋದಿ ರವರ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆ ಮಾಡುವ ಇವರು ಇನ್ನು ಮುಂದೆ ಟೀಕೆ ಮಾಡುವ ಮುನ್ನ ಒಂದು ಕ್ಷಣ ಯೋಚಿಸುವಂತೆ ಮಾಡಿದ್ದಾರೆ.

ಉತ್ತರ ಪ್ರದೇಶ ಪೊಲೀಸರು ರಮ್ಯಾ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿದ್ದಾರೆ. ಲಕ್ನೋ ಮೂಲದ ವಕೀಲ ರವರು ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸೆಕ್ಷನ್ 67 ಹಾಗೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 124 ಅನ್ವಯ ಪ್ರಕರಣ ದಾಖಲಾಗಿದ್ದು ರವರಿಗೆ ಮತ್ತೊಂದು ಶಾಕ್ ಆಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಕೆಲವು ದಿನಗಳ ಹಿಂದಷ್ಟೇ ಟ್ವಿಟರ್ ನಲ್ಲಿ ರಮ್ಯಾರವರು ಮೋದಿ ರವರ ವಿರುದ್ಧ ಕಿಡಿ ಕಾರಲು ಮತ್ತು ಟ್ರೋಲ್ ಮಾಡಲು ಬಳಸಿದ ಫೋಟೋವನ್ನು ಫೋಟೋ ಶಾಪ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಇದು ನಕಲಿ ಎಂದು ಬಹಿರಂಗ ಗೊಂಡಿದೆ.

ಈ ಸತ್ಯ ಅನಾವರಣ ಆದ ಕೂಡಲೇ ಲಕ್ನೋ ಮೂಲದ ವಕೀಲರು ದೇಶದ್ರೋಹ ಪ್ರಕರಣವನ್ನು ರಮ್ಯ ರವರ ಮೇಲೆ ದಾಖಲು ಮಾಡಿದ್ದಾರೆ. ಒಂದು ದೇಶದ ಪ್ರಧಾನಿಯ ಮೇಲೆ ನಕಲಿ ಫೋಟೋವನ್ನು ಬಳಸಿ ಆರೋಪ ಮಾಡಲು ಯತ್ನಿಸಿದ್ದ ಲ್ಲಿ ಅದು ದೇಶದ್ರೋಹ ವಾಗುತ್ತದೆ ಎಂಬುದು ಅವರಿಗೆ ಮೊದಲೇ ತಿಳಿದಿರಬೇಕಿತ್ತು ಎಂಬುದು ನಮ್ಮ ಅನಿಸಿಕೆ.