ನಿಮ್ಮ ದ್ವೇಷ ಯಾರ ಮೇಲೆ? ಸೈನಿಕ? ದೇಶ? ಮೋದಿ? ಉತ್ತರಿಸಿ

ನಿಮ್ಮ ದ್ವೇಷ ಯಾರ ಮೇಲೆ? ಸೈನಿಕ? ದೇಶ? ಮೋದಿ? ಉತ್ತರಿಸಿ

0

ಹೌದು ಹೀಗೊಂದು ಪ್ರಶ್ನೆ ಇಡೀ ದೇಶದ ಜನರಲ್ಲಿ ಮನೆಮಾತಾಗಿದೆ ವಿರೋಧ ಪಕ್ಷಗಳು ವಿರೋಧಿಸುತ್ತಿರುವುದು ದೇಶವನ್ನಾ ಅಥವಾ ಮೋದಿ ಅವರನ್ನಾ ಅಥವಾ ದೇಶದ ಗಡಿಕಾಯುತ್ತೀರುವ ಸೈನಿಕರನ್ನಾ ಎಂಬ ಪ್ರಶ್ನೆಗಳು ಮೂಡುತ್ತವೆ.

ಸಾಮಾನ್ಯವಾಗಿ ರಾಜಕೀಯದ ವಿಷಯ ಬಂದಾಗ ಒಬ್ಬರನ್ನು ಒಬ್ಬರು ದೂಷಿಸುವುದು ಸರ್ವೇ ಸಾಮಾನ್ಯ. ರಾಜಕೀಯ ಪಕ್ಷದವರು ವಿರೋಧ ಪಕ್ಷಗಳ ಮೇಲೆ ಆರೋಪಗಳ ಪಟ್ಟಿಗಳನ್ನು ಸಿದ್ಧ ಮಾಡುತ್ತಾರೆ ಆದರೆ ಈ ಬಾರಿ ವಿರೋಧ ಪಕ್ಷಗಳು ಯಾವ ಕೀಳು ಮಟ್ಟಕ್ಕೆ ಇಳಿದಿದೆ ಎಂದರೆ ಅವರ ವಿರೋಧಿಗಳು ಮೋದಿ ರವರ ಅಥವಾ ಗಡಿಕಾಯುತ್ತೀರುವ ಸೈನಿಕರ ಅಥವಾ ದೇಶವಾ ಎಂಬ ಪ್ರಶ್ನೆ ಮೂಡುತ್ತಿದೆ.

ಈ ಲೇಖನ ಓದಿದ ನಂತರ ನಿಮ್ಮಲ್ಲೂ ಈ ಪ್ರಶ್ನೆ ಮೂಡುತ್ತದೆ ಅದಕ್ಕೆ ನೀವೇ ಉತ್ತರಿಸಿ ಅಥವಾ ವಿರೋಧಿಗಳ ಬಳಿ ಉತ್ತರ ಕೇಳಿ.

ಭಾರತದ ಹೆಮ್ಮೆಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಅನ್ನು ನಡೆಸಿಕೊಂಡು ಬಂದರು ಆಗ ವಿರೋಧ ಪಕ್ಷದವರು ಸೈನಿಕರು ಸುಳ್ಳು ಹೇಳುತ್ತಿದ್ದಾರೆ ಎಂಬ ಮಾತುಗಳನ್ನು ಆಡಿದರು.ಸೈನಿಕರ ಮೇಲೆ ಅನುಮಾನ ಪಟ್ಟರು, ಮೋದಿ ರವರನ್ನು ದೂರಿದರು.ಇಷ್ಟಕ್ಕೇ ಸುಮ್ಮನಾಗಲಿಲ್ಲ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ರಿಲೀಸ್ ಮಾಡಿದ ನಂತರ ಕೂಡ ಸುಳ್ಳು ವಿಡಿಯೋ ಇದು ಅಂದರು.

ಮೋದಿ ರವರು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಆದರೆ ಕರ್ನಾಟಕದ ರಾಜ್ಯ ಸರ್ಕಾರವು ಮತ್ತು ಇತರ ರಾಜ್ಯದ ಕೆಲವು ಸರ್ಕಾರಗಳು ಆ ಯೋಜನೆಗಳನ್ನು ರಾಜ್ಯಗಳಲ್ಲಿ ಜಾರಿ ಮಾಡಲು ಬಿಡುತ್ತಿಲ್ಲ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮೋದಿ ಹೆಲ್ತ್ ಕೇರ್.ಅಲ್ಲ ಸ್ವಾಮಿ, ನೀವಂತು ಕೊಡುತ್ತಿಲ್ಲ ಕೊಟ್ಟರು ಮೋದಿ ರವರಷ್ಟು ಅನುದಾನ ಜನರನ್ನು ತಲುಪುತ್ತಿಲ್ಲ. ಮೋದಿ ಕೊಡಲು ಬಂದರೆ ನೀವು ಯಾಕೆ ತಡೆಯುತ್ತಿದ್ದಿರಿ?

ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ ರಾಹುಲ್ ಗಾಂಧಿ ರವರು ದೇಶದ ಯುವಕರನ್ನು ಉದ್ದೇಶಿಸಿ ಉದ್ಯೋಗ ಸಿಕ್ಕಿಲ್ಲ ಆದ್ದರಿಂದ ಐಸಿಸ್ ಸೇರುತ್ತಿದ್ದಾರೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ ಇಷ್ಟೇ ಅಲ್ಲದೆ ಭಾರತವು ಹೆಣ್ಣುಮಕ್ಕಳಿಗೆ ಸಂರಕ್ಷಣೆಯಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳಿಗೆ ಹೋಗಿ ದೇಶವನ್ನು ದೂಷಿಸುತ್ತಿರುವ ಇವರು ಯಾರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇವರು ಮೋದಿ ರವರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಅಥವಾ ದೇಶದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

ಹೀಗೆ ಹೇಳುತ್ತಾ ಹೋದರೆ ಸಾವಿರಾರು ಸಂದರ್ಭಗಳನ್ನು ನಾವು ಹೇಳಬಹುದು ಆದರೆ ಎಲ್ಲ ಸಂದರ್ಭಗಳನ್ನು ವಿವರಿಸಿದರು ನಮಗೆ ಮೂಡುವ ಏಕೈಕ ಪ್ರಶ್ನೆ ಎಂದರೆ ಇವರು ದ್ವೇಷಿಸುತ್ತಿರುವುದು ಯಾರನ್ನು??