ಹೇಳಿ ವಿಷ ಕುಡಿಯಬೇಕಾ? ಸಿಡಿದೆದ್ದ ಮಂಡ್ಯ ಜನ…ಸಚಿವರ ತಲೆದಂಡ?

ಹೇಳಿ ವಿಷ ಕುಡಿಯಬೇಕಾ? ಸಿಡಿದೆದ್ದ ಮಂಡ್ಯ ಜನ…ಸಚಿವರ ತಲೆದಂಡ?

0

ಕಳೆದ ಎರಡು ದಿನಗಳ ಹಿಂದಷ್ಟೇ ಮಂಡ್ಯದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ತೋಟಗಾರಿಕಾ ಸಚಿವರಾದ ಎಂ ಸಿ ಮನಗೋಳಿ ರವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಜನರ ಆಕ್ರೋಶವನ್ನು ಕೆದಕಿದ್ದಾರೆ.

ರೈತರ ಕುಟುಂಬ ಎರಡು ಬಾರಿ ಆತ್ಮಹತ್ಯೆಗೂ ಮುನ್ನ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು ಆದರೆ ಸಿಎಂ ಕುಮಾರಸ್ವಾಮಿ ಅವರು ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ ಇದರಿಂದ ಮನನೊಂದು ತಮ್ಮ ಡೆತ್ ನೋಟ್ ನಲ್ಲಿ ಪ್ರತಿಯೊಂದನ್ನು ವಿವರಿಸಿ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತು.

ಇಂತಹ ಸಮಯದಲ್ಲಿ ಸಚಿವರ ಈ ಹೇಳಿಕೆ ಜನರಲ್ಲಿ ಆಕ್ರೋಶವನ್ನು ಕೆದಕಿದೆ. ಅಷ್ಟಕ್ಕೂ ಏನೆಂದು ಹೇಳಿದ್ದಾರೆ ಗೊತ್ತಾ?

ಮಂಡ್ಯದಲ್ಲಿ ಸಾಲಬಾಧೆ ಕುಟುಂಬದ ನಾಲ್ವರು ಮೃತಪಟ್ಟ ವಿಚಾರಕ್ಕೆ ಮಾಧ್ಯಮದವರು ಮನಗೋಳಿ ರವರನ್ನು ಪ್ರಶ್ನಿಸಿದಾಗ ರೈತರು ಗೊತ್ತಿಲ್ಲದಂತೆ ವಿಷ ಕುಡಿದರೆ ಮುಖ್ಯಮಂತ್ರಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದರ ಅರ್ಥ ಯಾರಾದರೂ ವಿಷ ಕುಡಿಯುವ ಮುನ್ನ ಕುಮಾರಸ್ವಾಮಿ ಅವರಿಗೆ ತಿಳಿಸಿ ಕುಡಿಯಬಹುದೇ?? ಸಾಲ ಮನ್ನಾ ಮಾಡಲು ಸಾಧ್ಯವಾಗದೇ ಇದ್ದ ಮೇಲೆ ಸಾಲ ಮನ್ನಾ ಎಂದು ಘೋಷಿಸಬಾರದು. ಇತ್ತ ನಿಮ್ಮನ್ನು ನಂಬಿಕೊಂಡು ರಾಜ್ಯದ ಹಲವು ರೈತರು ಸಾಲ ಮನ್ನ ವಾಗಿದೆ ಎಂದು ಕನಸು ಕಾಣುತ್ತಿದ್ದಾರೆ ದಯವಿಟ್ಟು ಯಾವೊಬ್ಬ ರೈತರ ಸಾಲ ಮನ್ನಾವಾಗಿಲ್ಲ ಎಂದು ಅಧಿಕೃತವಾಗಿ ಘೋಷಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಈ ಹೇಳಿಕೆಯಿಂದ ಮಂಡ್ಯದಲ್ಲಿ ಜನಾಕ್ರೋಶ ಹೆಚ್ಚಾಗಿದ್ದು ಸಚಿವರ ತಲೆದಂಡಕ್ಕೆ ಜನರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ತನ್ನ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟ ಮಂಡ್ಯದ ಜನರು ಈಗ ಕುಮಾರಸ್ವಾಮಿ ಅವರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು ಕುಮಾರಸ್ವಾಮಿ ರವರಲ್ಲಿ ಆತಂಕವನ್ನು ಉಂಟು ಮಾಡಿರುವುದು ಸತ್ಯ.