ಇಮ್ರಾನ್ ಖಾನ್ ನ ಒಂದು ಟ್ವೀಟ್ ಇಂದ ಹೆಚ್ಚಾದ ಪಾಕಿಸ್ತಾನದ ಸಮಸ್ಯೆ

ಉಗ್ರರ ನಾಡು ಪಾಕಿಸ್ತಾನ ಒಂದಲ್ಲ ಒಂದು ಕಿತಾಪತಿಗಳಿಂದ ಭಾರತದಿಂದ ಹೊಡೆಸಿಕೊಳ್ಳುವುದು ಹೊಸತೇನಲ್ಲ. ಆ ದೇಶದ ಪ್ರಧಾನಮಂತ್ರಿ ಯಾರೇ ಬರಲಿ ಅದು ತನ್ನ ಕುತಂತ್ರಿ ಬುದ್ದಿ ಎಂದಿಗೂ ಬಿಡುವುದಿಲ್ಲ. ಆದರೆ ಭಾರತ ಬದಲಾಗಿದೆ ಎಂದು ಪಾಕಿಸ್ತಾನ ಮರೆತಂತಿದೆ. ಹಿಂದಿನ ಸರಕಾತ ಇದ್ದಾಗ ಪಾಕಿಸ್ತಾನ ದ ತಾಳಕ್ಕೆ ಕುಣಿಯುತ್ತಿದ್ದ ದೆಹಲಿ ಭಾರತೀಯ ಸೇನೆಯ ಮಾತನ್ನೂ ಮೀರಿ ಪಾಕಿಸ್ತಾನಕ್ಕೆ ಸಹಾಯ ಹಾಗು ಮಾತುಕತೆಗೆ ಮುಂದಾಗುತ್ತಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಸೇನೆಗೆ ಸಂಪೂರ್ಣ ಅಧಿಕಾರ ನೀಡಿ ಹಿಂದಿನ ವರ್ಷಗಳಿಗಿಂತಲೂ ಜಾಸ್ತಿ ಉಗ್ರರನ್ನು ಸದೆ ಬಡೆದಿದೆ. ಸರ್ಜಿಕಲ್ ಸ್ಟ್ರೈಕ್ ಇದಕ್ಕೆ ಉತ್ತಮ ಉದಾಹರಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡುವುದರಲ್ಲಿ ಭಾರತ ಯಶಸ್ವಿಯಾಗಿದೆ. ಅಮೇರಿಕಾದಿಂದ ಬರುವ ಮಿಲಿಯನ್ ಗಟ್ಟಲೆ ಸಹಾಯ ಇಂದು ನಿಂತಿದೆ. ಇದು ಮೋದಿಯವರ ರಾಜಕೀಯ ರಣತಂತ್ರ ಎಂಬುದನ್ನು ಮರೆಯುವಂತಿಲ್ಲ.

ಟ್ವೀಟ್ ಮಾಡಿದ ಇಮ್ರಾನ್ ಖಾನ್.

ಭಾರತ-ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆ ಹಿಂದಿನಿಂದಲೂ ನಡೆದು ಬರುತಿತ್ತು. ಆ ಮಾತುಕತೆ ನಂತರ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧ ವಿರಾಮ ಉಲ್ಲಂಘಿಸಿ ದಾಳಿ ಮಾಡುತ್ತಲೇ ಇತ್ತು. ನರೇಂದ್ರ ಮೋದಿ ಸರಕಾರ ಬಂದ ನಂತರ ಈ ದ್ವಿಪಕ್ಷೀಯ ಮಾತುಕತೆ ಸಂಪೂರ್ಣ ನಿಲ್ಲಿಸಿದ ನಂತರ ಪಾಕಿಸ್ತಾನ ಮೋದಿ ಹಾಗು ಭಾರತದ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ದೂರಲಾರಂಭಿಸಿತು. ಇದಕ್ಕೂ ಭಾರತ ಕ್ಯಾರೇ ಅನ್ನಲಿಲ್ಲ. ಇತ್ತೀಚಿಗೆ ಆಯ್ಕೆಯಾದ ಇಮ್ರಾನ್ ಖಾನ್ ನ್ಯೂಯಾರ್ಕ್ ಅಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತದೊಡನೆ ಮಾತುಕತೆ ನಡೆಸಬೇಕೆಂದು ಕರೆ ಮಾಡಿದ್ದರು. ಭಾರತ ಇದನ್ನು ತಿರಸ್ಕರಿಸಿತ್ತು. ಇದಕ್ಕೆ ಬೇಸರಗೊಂಡ ಇಮ್ರಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಈಗ ಇಂಗು ತಿಂದ ಮಂಗನತ್ತಾಗಿದ್ದಾನೆ.

ಅಷ್ಟಕ್ಕೂ ಆ ಟ್ವೀಟ್ ಏನು ಗೊತ್ತೆ?

ಭಾರತ ಮಾತುಕತೆ ನಿಲ್ಲಿಸಿದ ತಕ್ಷಣವೇ ಪಾಕಿಸ್ತಾನದ ಇಮ್ರಾನ್ ಖಾನ್ ಭಾರತದ ನಿರ್ಧಾರ ನಿರಾಶೆಗೊಳಿಸಿದೆ. ಭಾರತದ ಅಹಂಕಾರದ ನಿರ್ಧಾರ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಭಾರತದ ಬಳಿ ಯಾವುದೇ ದೊಡ್ಡ ದೃಷ್ಟಿಕೋನ ಇಲ್ಲ. ಅವರ ಮನಸ್ಥಿತಿ ಬಹಳ ಸಣ್ಣದಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾನೆ.

ಮಾತುಕತೆ ರದ್ದಾದ ನಂತರ ಮಾತಾಡಿದ ಭಾರತದ ವಿದೇಶಾಂಗ ಮಂತ್ರಾಲಯದ ವಕ್ತಾರ ರವೀಶ್ ಕುಮಾರ್ “ಹೊಸದಾಗಿ ಆಯ್ಕೆಯಾದ ಇಮ್ರಾನ್ ಖಾನ್ ನಿಜವಾದ ಮುಖ ಅಂತರಾಷ್ಟ್ರೀಯ ಮಟ್ಟದಲ್ಲಿ ಬಯಲಾಯಿತು. ಈ ಮಾತುಕತೆ ಹಿಂದಿನ ಇಸ್ಲಮಬಾದನ ಅಜೆಂಡಾ ಕೂಡಾ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಸೇನೆಯಿಂದ ನೇಮಿಸಲ್ಪಟ್ಟ ವ್ಯಕ್ತಿಯಿಂದ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಿದ್ದಾರೆ.

 

Post Author: Ravi Yadav