ಸರ್ಕಾರಿ ಅಧಿಕಾರಿಗಳಿಗೆ ಶಾಕ್, ಜನ ಪರ ಸರ್ಕಾರ.. ಇದು ಯೋಗಿರವರ ಕಾರ್ಯ ವೈಖರಿ

ಸರ್ಕಾರಿ ಅಧಿಕಾರಿಗಳಿಗೆ ಶಾಕ್, ಜನ ಪರ ಸರ್ಕಾರ.. ಇದು ಯೋಗಿರವರ ಕಾರ್ಯ ವೈಖರಿ

0

ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂಡ ನಂತರದಲ್ಲಿ ಉತ್ತರ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜನರ ತೆರಿಗೆ ಹಣ ಉಳಿಸುವ ಉದ್ದೇಶದಿಂದ ಸಾಕಷ್ಟು ಕಾನೂನು ಹಾಗು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದೀಗ ಯೋಗಿ ಸರಕಾರ ತೆಗೆದುಕೊಳ್ಳಲು ಹೊರಟಿರುವ ನಿರ್ಧಾರ ಸರಕಾರಿ ಅಧಿಕಾರಿಗಳಿಗೆ ಬೇಸರ ತರುವಂಥದಾಗಿದೆ.

[do_widget id=et_ads-2]

ಯೋಗಿ ಸರಕಾರ ಅಧಿಕಾರಿಗಳ ಐಷಾರಾಮಿ ಜೀವನದ ಮೇಲೆ ಚಾಟಿ ಬಿಸಲಿದೆ. ಸರಕಾರಿ ಅಧಿಕಾರಿಗಳಿಗೆ ಸಿಗುವ ಐಷಾರಾಮಿ ವಿದೇಶಿ ಪ್ರವಾಸಕ್ಕೆ ಸಿಗುವ ತೆರಿಗೆ ಹಣಕ್ಕೆ ಕಡಿವಾಣ ಹಾಕಿದ್ದಾರೆ ಯೋಗಿ ಸರಕಾರ. ಇದರ ಜೊತೆಗೆ ವಿಮಾನ ಪ್ರಯಾಣದಲ್ಲಿ ಎಕನಾಮಿಕ್ ಕ್ಲಾಸ್ ಹಾಗು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ತಿಂಡಿ ತಿನಿಸುಗಳನ್ನು ಕೂಡ ಕಡಿತಗೊಳಿಸಲಾಗಿದೆ. ಅಧಿಕಾರಿಗಳು ವರ್ಗಾವಣೆಯಾಗುವಾಗ ಪೀಠೋಪಕರಣಗಳ ನವೀಕರಣ ಕೂಡ ಸರಕಾರಕ್ಕೆ ನಷ್ಟ ಇದನ್ನು ಕೂಡ ನಿಲ್ಲಿಸಲು UP ಯಾ ಸೆಕ್ರೆಟರಿ ಆದೇಶಿಸಿದ್ದಾರೆ. ಇದರೊಂದಿಗೆ ೧೮ ಅಂಶಗಳ ಸೂಚನೆಯನ್ನು ರವಾನಿಸಿದೆ.

[do_widget id=et_ads-5]

ಈ ಖರ್ಚು ಕಡಿತಗಳಿಂದ ಉಳಿಸಲಾಗುವ ಹಣ ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಲ್ಪಡುತ್ತದೆ. ಹಳತಾದ ಮತ್ತು ಉಪಯುಕ್ತವಾದ ಯೋಜನೆಗಳನ್ನು ಪರಿಶೀಲಿಸುವ ಕಾರ್ಯಸೂಚಿ ಕೂಡ ಕಾರ್ಯಸೂಚಿಯಲ್ಲಿದೆ  ಪ್ರಯಾಣ, ರಜೆ, ವೈದ್ಯಕೀಯ, ಮನೆ ಬಾಡಿಗೆ ಇತ್ಯಾದಿಗಳಿಗೆ ನಿಗದಿ ಮಾಡಲಾದ ಬೆಲೆಯಲ್ಲಿ ಮಾತ್ರ ಅನುಧಾನ ದೊರೆಯುತ್ತದೆ. ಹೊಸದಾಗಿ ಕಚೇರಿ, ನಿವೇಶನ ನಿರ್ಮಿಸುವುದನ್ನು ನಿಷೇದಿಸಿದ್ದಾರೆ ಯೋಗಿ ಆದಿತ್ಯನಾಥ್.

[do_widget id=et_ads-4]

ಇದು ಮಾತ್ರವಲ್ಲದೆ ಸರಕಾರಿ ಅಧಿಕಾರಿಗಳು ಟ್ಯಾಕ್ಸಿ ಉಪಯೋಗಿಸಬೇಕಾದರು ಹಣಕಾಸು ಇಲಾಖೆ ಇಂದ ಅನುಮತಿ ಪಡೆಯಬೇಕು. ಸ್ಟೇಷನರಿ ಯಾ ಖರ್ಚು ಉಳಿಸಲು ಇನ್ನು ಮೆಂದೆ ಜೆರಾಕ್ಸ್ ಬದಲು ವಿಡಿಯೋ ಕಾನ್ಫೆರನ್ಸೆ ಅಥವಾ ಮೇಲ್ ಬಳಸುವುದರ ಮೂಲಕ ಆದಷ್ಟು ಖರ್ಚು ಕಡಿಮೆ ಮಾಡಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ.

ಇದೊಂದು ಉತ್ತಮ ಬೆಳವಣಿಗೆ ಆಗಿದ್ದು ಪ್ರತಿ ಜಿಲ್ಲೆಯಲ್ಲೂ ಇಂತಹ ಕಾನೂನು ತಂದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಹಾಗು ಜನರ ತೆರಿಗೆ ಹಣ ಕೂಡ ಉಳಿಯುತ್ತದೆ.

[do_widget id=et_ads-3]