ಮಂಡಿಯೂರಿದ ಮುಖ್ಯಮಂತ್ರಿ…ಇಷ್ಟಕ್ಕೆ ಬಿಡುವರೆ ಯಡಿಯೂರಪ್ಪ

ರಾಜ್ಯ ರಾಜಕಾರಣದಲ್ಲಿ ಅಭಿವೃದ್ದಿ ಬಿಟ್ಟು ಬೇರೆ ಎಲ್ಲ ಕೆಲಸಗಳು ನಡೆಯುತ್ತಿವೆ. ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಕಡೆ ಗಮನ ಕೊಡದೆ ಸರ್ಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ.ಬೆಳಗಾವಿ ರಾಜಕೀಯ ಕಿತ್ತಾಟ ಮುಗಿಯಿತು ಎನ್ನುವಷ್ಟರಲ್ಲಿ ಮುಖ್ಯಮಂತ್ರಿರವರ ಹೇಳಿಕೆ ಈಗ ಬಿಜೆಪಿ ಪಕ್ಷದವನ್ನು ರೊಚ್ಚಿಗೆಬ್ಬಿಸಿದೆ.

ಬಿಜೆಪಿ ವಿರುದ್ಧ ಜನರನ್ನು ಧಂಗೆ ಎಬ್ಬಿಸುತ್ತೇನೆ ಎಂದು ನೀಡಿದ ಹೇಳಿಕೆಗೆ ಬಿಜೆಪಿ ಪಕ್ಷದವರು ಒಬ್ಬರು ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದು ಎಂದು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಇಂತಹ ಸಮಯದಲ್ಲಿ ರಾಷ್ತ್ರ ಪತಿಗೆ ಬೇಕಾದರೂ ದೂರು ನೀಡಲು ಎಂದು ಕುಮಾರಸ್ವಾಮಿ ರವರು ಉದ್ದಟತನ ಮೆರೆದಿದ್ದರು.

ಆದರೆ ಹೇಳಿಕೆ ನೀಡಿದ ನಂತರ ಕುಮಾರಸ್ವಾಮಿ ರವರು ಯೋಚನೆ ಮಾಡಿದಂತೆ ಕಾಣುತ್ತಿದೆ, ಯಾಕೆಂದರೆ ಒಂದು ರಾಜ್ಯದ ಮುಖ್ಯಮಂತ್ರಿ ಜನರ ಶಾಂತಿ ಕೆದಕುವ ಹೇಳಿಕೆಯನ್ನು ನೀಡಿದರೆ ಈ ಪಿ ಸಿ ಸೆಕ್ಷನ್ 153 ಪ್ರಕಾರ ಜಾಮೀನು ರಹಿತ ಅರೆಸ್ಟ್ ವಾರಂಟ್ ನ್ಯಾಯಾಲಯ ಜಾರಿಗೊಳಿಸ ಬಹುದಾಗಿದೆ.

ಇದನ್ನು ಅರಿತುಕೊಂಡ ಕುಮಾರಸ್ವಾಮಿ ರವರು ನಾನು ಬಳಸಿದ ಪದ ಧಂಗೆ ಇರಬಹುದು ಆದರೆ ನನ್ನ ಅರ್ಥ ಧಂಗೆ ಎಂದರೆ ಪ್ರತಿಭಟನೆ ಎಂದರ್ಥ ಎಂದು ಸ್ಪಷ್ಟನೆ ನೀಡಿದ್ದಾರೆ.ನಾನು ಪ್ರತಿಭಟಿಸುತ್ತೇನೆ ಎಂದೇ, ಯಡಿಯೂರಪ್ಪ ನವರು ಎಷ್ಟು ಬಾರಿ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹಾಗಿದ್ದರೂ ಸಿಎಂ ಹೇಳಿಕೆಯಿಂದ ಸಮಾಧಾನಗೊಳ್ಳದ ಬಿಜೆಪಿ ಇಂದು ರಾಜ್ಯಪಾಲರಿಗೆ ದೂರು ಸಲ್ಲಿಸಲು ನಿರ್ಧರಿಸಿದೆ. ಸಿಎಂ ಹೇಳಿಕೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎನ್ನುವುದಕ್ಕೆ ಸಾಕ್ಷಿ. ಹೀಗಾಗಿ ತಕ್ಷಣವೇ ಸರ್ಕಾರ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ.ಒಟ್ಟಿನಲ್ಲಿ ಈಗ ಚೆಂಡು ಬಿ ಸ್ ವೈ ರವರ ಕೈಯಲ್ಲಿ ಇದೆ, ಆದರೆ ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ

Post Author: Ravi Yadav