ತೈಲ ಬೆಲೆ ಏರಿಕೆ- ಮೋದಿ ರವರನ್ನು ದೂಷಿಸುವ ಬದಲು ಒಮ್ಮೆ ಸತ್ಯ ತಿಳಿದುಕೊಳ್ಳಿ

ತೈಲ ಬೆಲೆ ಏರಿಕೆ- ಮೋದಿ ರವರನ್ನು ದೂಷಿಸುವ ಬದಲು ಒಮ್ಮೆ ಸತ್ಯ ತಿಳಿದುಕೊಳ್ಳಿ

0

ದೇಶಾದ್ಯಂತ ಈಗ ತೈಲ ಬೆಲೆ ಏರಿಕೆಯದ್ದೇ ಮಾತು. ನಿನ್ನೆಯಷ್ಟೇ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಭಾರತ ಬಂದ್ ಮಾಡಿ ಹಲವಾರು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಯಾವ ಒಬ್ಬ ಬಂದ್ ಗೆ ಬೆಂಬಲ ನೀಡುವವರು ಸಹ ಕೈ ಬೆಲೆ ಏರಿಕೆಯಾಗಲು ಕಾರಣವೇನೆಂಬುದನ್ನು ಒಂದು ಕ್ಷಣವೂ ಸಹಾ ಯೋಚಿಸಿಲ್ಲ.  ಬದಲಾಗಿ ದೇಶದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ನೀಡುವಂತಹ ಭಾರತ ಬಂದ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ ನಾನು ನೋಡಿದ ಪ್ರತಿಯೊಂದು ಮಾಧ್ಯಮದಲ್ಲೂ (ಟಿವಿ ಚಾನಲ್ ಗಳಲ್ಲಿ) ರಾಜ್ಯ ಸರ್ಕಾರ ಎಷ್ಟು ಟ್ಯಾಕ್ಸ್, ಕೇಂದ್ರ ಸರ್ಕಾರ ಎಷ್ಟು ಟ್ಯಾಕ್ಸ್ ಎಲ್ಲರೂ ಪ್ರೋಗ್ರಾಮ್ ಗಳ ಮೇಲೆ ಪ್ರೋಗ್ರಾಮ್ ಗಳನ್ನು ಮಾಡಿದ್ರು. ಆದರೆ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತರು.  ಮೊದಲಿನಿಂದಲೂ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆರಿಗೆಯನ್ನು ವಿಧಿಸುತ್ತಲೇ ಬಂದಿವೆ. ಆದರೆ ತೈಲ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಲು ಕಾರಣವೇನು ಎಂಬುದನ್ನು ಯಾರೊಬ್ಬರೂ ಹೇಳಲಿಲ್ಲ.

ಇದನ್ನೇ ಬಂಡವಾಳ ನ್ನಾಗಿ ಮಾಡಿಕೊಂಡ ವಿರೋಧ ಪಕ್ಷಗಳು ಮೋದಿರವರನ್ನು ದೂರಲು ಭಾರತ್ ಬಂದ್ ಮಾಡಿ, ಜನಸಾಮಾನ್ಯರ ಕಣ್ಣಿಗೆ ಮಣ್ಣು ಎರಚಿದ್ದಾರೆ. ಅಸಲಿಗೆ ತೈಲಬೆಲೆ ಆಗಲು ಕಾರಣವೇನು? ತಿಳಿಯಲು ಒಮ್ಮೆ ಓದಿ.

ನಾವು ವಿದೇಶಗಳೊಂದಿಗೆ ಮಾಡುವ ಪ್ರತಿಯೊಂದು ವ್ಯಾಪಾರವು ರೂಪಾಯಿಗಳ ಲೆಕ್ಕದಲ್ಲಿ ಅಲ್ಲದೆ ಡಾಲರ್ ಗಳ ಲೆಕ್ಕದಲ್ಲಿ ಇರುತ್ತದೆ. ಅಮೇರಿಕಾದ ಅಧ್ಯಕ್ಷರ ಕೆಲವು ಆರ್ಥಿಕ ದಿಗ್ಬಂಧನ ಮತ್ತು ಕಠಿಣ ನಿರ್ಧಾರಗಳಿಂದ  ಅಮೇರಿಕಾದ ಕರೆನ್ಸಿ ಯಾದ ಡಾಲರ್ ಬಲಿಷ್ಠವಾಗುತ್ತ ಸಾಗುತ್ತಿದೆ.  ಇದರಿಂದ  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಹ ಏರಿಕೆಯಾಗಿದೆ. ಚೀನಾ ಭಾರತ ಹೀಗೆ ವಿಶ್ವದ ಹಲವು ದೊಡ್ಡ ರಾಷ್ಟ್ರಗಳ ಕರೆನ್ಸಿಗಳ ಮುಂದೆ ಡಾಲರ್ ಬಲಿಷ್ಠವಾಗುತ್ತ ಸಾಗುತ್ತಿದೆ.

ಟರ್ಕಿ ದೇಶದ ಆರ್ಥಿಕ ಸಂಕಷ್ಟ ಮತ್ತು ಅಮೇರಿಕಾದ ಕೆಲವು ಕಠಿಣ ನೀತಿಗಳಿಂದ ಭಾರತಕ್ಕೆ ಸಾಮಾನ್ಯ ದರದಲ್ಲಿ ಬರಬೇಕಿದ್ದ ತೈಲವು ಹೆಚ್ಚಿನ ದರದಲ್ಲಿ ಸಿಗುತ್ತಿದೆ. ಇದರಿಂದ ಕ್ರಮೇಣವಾಗಿ ದಿನದಿಂದ ದಿನಕ್ಕೆ ತನ್ನ ಬೆಲೆ ಏರಿಕೆಯಾಗುತ್ತಿದೆ. ಇದುವರೆಗೂ ಯಾವ ದೇಶದ ಪ್ರಧಾನಿಗೂ ವಿಶ್ವದ ದೊಡ್ಡಣ್ಣನ ಕರೆನ್ಸಿಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ.

ಹೀಗೆ ಇರುವಾಗ ನಾವು ಮೋದಿ ರವರನ್ನು ದೂಷಿಸಿ ಏನು ಪ್ರಯೋಜನ? ಟ್ರಂಪ್ ರವರು ತನ್ನ ದೇಶವನ್ನು  ಮತ್ತಷ್ಟು ದೃಢಗೊಳಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಇದರಿಂದ ಸಾಮಾನ್ಯವಾಗಿಯೇ ಡಾಲರ್ ಬಲಿಷ್ಠ ಗೊಳ್ಳುತ್ತಿದೆ. ಆದರೆ ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿಲ್ಲ, ರುಪಾಯಿ  ತಟಸ್ಥವಾಗಿ ನಿಂತಿದೆ.ಡಾಲರ್  ಏರುಪೇರಿನಿಂದ ನೀವು ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಗಿಂತ ಡಾಲರ್ ಬೆಲೆ ಹೆಚ್ಚಾಗುತ್ತಿದೆ ಎಂಬುದನ್ನು ನೋಡಿರುತ್ತೀರಾ ಆದರೆ ಇದರ ಅರ್ಥ ರೂಪಾಯಿ ಬೆಲೆ ಕಡಿಮೆಯಾಗುತ್ತಿದೆ ಎಂದಲ್ಲ.