ಬಿತ್ತು 2ನೇ ವಿಕೆಟ್- ಮೋದಿಗೆ ಜೈ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೈ ನೀಡಿದ ಹಿರಿಯ ನಾಯಕ

ಬಿತ್ತು 2ನೇ ವಿಕೆಟ್- ಮೋದಿಗೆ ಜೈ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೈ ನೀಡಿದ ಹಿರಿಯ ನಾಯಕ

0

ನಾಳೆ ದೇಶದೆಲ್ಲೆಡೆ ಅರ್ಥಪೂರ್ಣ ವಿಲ್ಲದ ಬಂದ್ ನಡೆಯುತ್ತಿದೆ, ಇದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕೆಲವು ಗಂಟೆಗಳ ಹಿಂದಷ್ಟೇ ಗೋವಾ ಕಾಂಗ್ರೆಸಿಗರು ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುಖಭಂಗವನ್ನುಂಟು ಮಾಡಿತ್ತು.ಈಗ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

ಇದರಿಂದ ನರೇಂದ್ರ ಮೋದಿ ಭಕ್ತರು ಎಲ್ಲಿಲ್ಲದ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಿರ್ಧಾರಗಳನ್ನು ಕಾಂಗ್ರೆಸ್ ನಾಯಕರೇ ವಿರೋಧಿಸುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಹುಲ್ ಗಾಂಧಿರವರಿಗೆ ಎಲ್ಲಿಲ್ಲದ ಮುಜುಗರವನ್ನು ತಂದಿದೆ. ಅಲ್ಲದೆ ಮೋದಿ ರವರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಜೈ ಎಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದಿದೆ.

ಅಷ್ಟಕ್ಕೂ ಯಾರು ಏನು ಮಾತನಾಡಿದ್ದಾರೆ ಗೊತ್ತಾ?

ಕಾಂಗ್ರೆಸ್ ನ ಹಿರಿಯ ರಾಜಕಾರಣಿಯಾದ ಜನಾರ್ಧನ ಪೂಜಾರಿ ರವರು ನಾಳೆ ನಡೆಯುವ ಬಂದು ಕುರಿತು  ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.  ನಾಳೆ ತೈಲ ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ಬಂದಿಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿರುವ ಜನಾರ್ಧನ ಪೂಜಾರಿ ರವರು, ಈ ಬಂದ್  ಒಂದು ಅರ್ಥಪೂರ್ಣ ವಿಲ್ಲದ ಬಂದ್ ತೈಲ ಬೆಲೆ ಏರಿಕೆಗೆ ಮೋದಿ ಕಾರಣವಲ್ಲ.

ಸುಮ್ಮನೆ ಬಂದ್ ಮಾಡಿದರೆ ಯಾವುದೇ ಪ್ರಯೋಜನವಿಲ್ಲ, ಅದರ ನಷ್ಟವನ್ನು ಯಾರು ಭರಿಸುತ್ತಾರೆ, ಬಂದ್  ಮಾಡುವವರೇ ಭರಿಸಿದರೆ ಬಂದ್ ಮಾಡಿಕೊಳ್ಳಲಿ. ಬಂದ್ ಮಾಡುವ ಬದಲು ತೈಲ ಬೆಲೆ ಏರಿಕೆಯನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಯೋಚನೆ ಮಾಡಿದರೆ ಒಳಿತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.