ತೈಲ ಬೆಲೆ ಇಳಿಕೆಗೆ ಮುಂದಾದ ಬಿಜೆಪಿ ಮುಖ್ಯಮಂತ್ರಿ: ಕುಮಾರಸ್ವಾಮಿ ರವರೇ ನೀವ್ಯಾಕೆ ಹೀಗೆ ಮಾಡಬಾರದು?

ದೇಶದೆಲ್ಲೆಡೆ ತೈಲ ಬೆಲೆ ಏರಿಕೆಯು ಭಾರೀ ಸಂಚಲವನ್ನು ಉಂಟುಮಾಡಿದೆ. ಇದಕ್ಕೆ ಯಾವುದೇ ಕೇಂದ್ರ ಸರ್ಕಾರದ ಯೋಜನೆಗಳು ಕಾರಣ ವಲ್ಲದಿದ್ದರೂ ವಿರೋಧ ಪಕ್ಷಗಳು ಜನಸಾಮಾನ್ಯರಿಗೆ ಇವೆಲ್ಲಾ ಕೇಂದ್ರ ಸರ್ಕಾರದ ತಪ್ಪಿನಿಂದ ಆಗುತ್ತಿದೆ ಎಂದು ಬಿಂಬಿಸಲು ಭಾರತ ಬಂದ್ ಗೆ ಕರೆ ನೀಡಿದೆ.

ಆದರೆ ವಾಸ್ತವವನ್ನು ಕೆಲವು ಜನರು ಅರ್ಥಮಾಡಿಕೊಂಡು ಬಂದ್ ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ . ಇಂತಹ ಸಮಯದಲ್ಲಿ ಕೇವಲ ಕೇಂದ್ರ ಸರ್ಕಾರದಿಂದ ತೈಲ ಬೆಲೆ ಇಳಿಕೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ತಿಳಿದಿರುವ ವಿಷಯ. ಯಾಕೆಂದರೆ ಕೇಂದ್ರ ಸರ್ಕಾರವು ಹಲವು ಬಾರಿ ತೆರಿಗೆ ಇಳಿಕೆಯನ್ನು ಮಾಡಿದೆ ಇನ್ನು ಮಾಡಿದರೆ ಸರ್ಕಾರದ ಬೊಕ್ಕಸದಿಂದ ಹಣ ನೀಡಬೇಕಾಗುತ್ತದೆ.

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿರುವ ಜನಸಾಮಾನ್ಯರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಫಡ್ನಾವಿಸ್ ರವರು ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ. ತೈಲದ ಮೇಲೆ ಎಲ್ಲಾ ರಾಜ್ಯಗಳು ತೆರಿಗೆಯನ್ನು ಹೆಚ್ಚಿಸುತ್ತಿದ್ದರೆ ಮಹಾರಾಷ್ಟ್ರ ಸರ್ಕಾರ ಮಾತ್ರ ಜನ ಸಾಮಾನ್ಯರ ಮೇಲೆ ಆಗಿರುವ ಹೊರೆಯನ್ನು ತಗ್ಗಿಸಲು ತೈಲದ ಮೇಲೆ ಇರುವ ತೆರಿಗೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ.

ಇದರಿಂದ ಜನಸಾಮಾನ್ಯರಿಗೆ ಸ್ವಲ್ಪ ಹೊರೆ ತಗಲಿದ್ದು, ತೈಲವನ್ನು gst ವ್ಯಾಪ್ತಿಗೆ ತರಲು ನಮ್ಮ ಸರ್ಕಾರ ಬದ್ಧವಿದೆ ಈ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿರುವ ಇವರು ಜನರಿಗೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಪರ ರಾಜ್ಯ ಗಳು ಇಂತಹ ನಿರ್ದಾರಗಳನ್ನು ಕೈಗೊಳ್ಳುವಾಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಯಾಕೆ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಮೂಡುತ್ತಿದೆ.?

Post Author: Ravi Yadav