ಮತ್ತೊಮ್ಮೆ ಕುತಂತ್ರಗಳಿಗೆ ಬಲಿಯಾಗುವರೆ ವಿಜಯೇಂದ್ರ- ನೆಲಕಚ್ಚಲಿದೆಯೇ ಬಿಜೆಪಿ?

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಲು ಬಿಜೆಪಿ ಪಕ್ಷವು ಹೊರಟಿದೆ ಎಂದು ಅನಿಸುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಯುವ ಬಿಜೆಪಿ ಕಾರ್ಯಕರ್ತರು ಚುನಾವಣೆಗೂ  ಮುಂಚೆ ಎಲ್ಲಿಲ್ಲದ ಉತ್ಸಾಹವನ್ನು ತೋರಿಸುತ್ತಿದ್ದರು, ಆದರೆ ಕೊನೇ ಕ್ಷಣದಲ್ಲಿ ವಿಜಯೇಂದ್ರ ರವರಿಗೆ ಟಿಕೆಟ್ ಕೈತಪ್ಪಿತು. ಇದರಿಂದ ಮನನೊಂದ ಹಲವಾರು ಬಿಜೆಪಿ ಯುವ ಕಾರ್ಯಕರ್ತರು ಪ್ರಚಾರ ಕಾರ್ಯಕ್ರಮದಲ್ಲಿ ತೊಡಗದೆ ಬಿಜೆಪಿ ಪಕ್ಷಕ್ಕೆ ಬಹುಮತ ಗಳಿಸಲು ಸಾಧ್ಯವಾಗಿರಲಿಲ್ಲ.

ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುವ ನಾಯಕರಾದ ರಾಜ್ಯದಲ್ಲಿ ಮನೆಮಾತಾಗಿರುವ ವಿಜಯೇಂದ್ರ ರವರು ತಮ್ಮ ತಂದೆಯವರ ಕ್ಷೇತ್ರವಾದ ಶಿವಮೊಗ್ಗದಿಂದ ಸ್ಪರ್ಧಿಸುತ್ತಾರೆ ಎಂದು ಅಭಿಮಾನಿಗಳು ಬಾರಿ ಆಸೆಯನ್ನು ಇಟ್ಟುಕೊಂಡಿದ್ದರು. ಇದನ್ನು ತಿಳಿದಿರುವ ಯಡಿಯೂರಪ್ಪನವರು   ಪುತ್ರರಿಗೆ ಹೇಗಾದರೂ ಮಾಡಿ ಟಿಕೆಟ್ ನೀಡಬೇಕೆಂದು ಪ್ಲಾನ್ ಮಾಡುತ್ತಿದ್ದರು ಎಂಬುದು ನಿಮಗೆ ತಿಳಿದಿರುವ ವಿಷಯ.

ಆದರೆ ಇದ್ದಕ್ಕಿದ್ದ ಹಾಗೆ ಈಶ್ವರಪ್ಪನವರು ಬಾಂಬ್ ಸಿಡಿಸಿದ್ದಾರೆ,  ಶಿವಮೊಗ್ಗ ಕ್ಷೇತ್ರದಿಂದ ವಿಜಯೇಂದ್ರ ರವರಿಗೆ ಟಿಕೆಟ್ ನೀಡುತ್ತಾರೆ, ಇವರು ಬಿಟ್ಟರೆ ಶಿವಮೊಗ್ಗ ಲೋಕಸಭಾ ಚುನಾವಣೆಯಿಂದ ಸ್ಪರ್ಧಿಸಲು ಯಾರೂ ಮುಂದಾಗುವುದಿಲ್ಲ, ಟಿಕೆಟ್ ಆಕಾಂಕ್ಷಿಗಳು ಇರುವುದಿಲ್ಲ ಎಂದು ಅಂದುಕೊಂಡಿದ್ದ ಬಿಜೆಪಿ ಕಾರ್ಯಕರ್ತರಿಗೆ ಶಾಕ್ ಆಗಿದೆ.

ಪರೋಕ್ಷವಾಗಿ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಈಶ್ವರಪ್ಪನವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬರೋಬ್ಬರಿ ನಾಲ್ಕರಿಂದ ಐದು ಟಿಕೆಟ್ ಆಕಾಂಕ್ಷಿಗಳು ಇದ್ದಾರೆ, ಅದರಲ್ಲಿ ವಿಜಯೇಂದ್ರ ರವರು ಸಹ ಇದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ  ಭಾರಿ ವಿರೋಧ ವ್ಯಕ್ತವಾಗಿದ್ದು ವಿಜಯೇಂದ್ರ ರವರಿಗೆ ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

Post Author: Ravi Yadav