ಮತ್ತೊಮ್ಮೆ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿದ ಸಿಎಂ- ಸಿಎಂಗೆ ಬಹಿರಂಗ ಸವಾಲ್

ಮತ್ತೊಮ್ಮೆ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿದ ಸಿಎಂ- ಸಿಎಂಗೆ ಬಹಿರಂಗ ಸವಾಲ್

0

ಯಾಕೋ ಕುಮಾರಸ್ವಾಮಿ ರವರು ಅಧಿಕಾರದ ಗದ್ದುಗೆ ಏರಿದ ಮೇಲೆ ಅವರ ಲಕ್ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಸದಾ ತಮ್ಮ ನಿರ್ಧಾರಗಳಿಂದ ವಿವಾದಗಳನ್ನು ಸೃಷ್ಟಿಸುತ್ತಿರುವ ಕುಮಾರಸ್ವಾಮಿ ರವರು ಈಗ ಮತ್ತೊಂದು ನಿರ್ಧಾರದ ಮೂಲಕ ಹಿಂದೂಗಳ ಭಾವನೆಗಳನ್ನು ಕೆಣಕಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕೆಲವು ದಿನಗಳ ಹಿಂದಷ್ಟೇ ಗಣೇಶ ಚತುರ್ಥಿಯನ್ನು ಆಚರಿಸುವ ವೇಳೆ ಗಣೇಶನನ್ನು ಕೂರಿಸಿರುವ ಜಾಗಕ್ಕೆ ತೆರಿಗೆ ಕಟ್ಟಬೇಕು ಎಂಬ ನಿರ್ಧಾರದಿಂದ ಹಲವಾರು ಹಿಂದೂಪರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕುಮಾರಸ್ವಾಮಿ ರವರು ಈಗ ಮತ್ತೊಂದು ವಿವಾದ ಸುಳಿಯಲ್ಲಿ ಸಿಲುಕಿದಂತೆ ಕಾಣುತ್ತಿದೆ.

ಆದರೆ ಈ ಬಾರಿ ಜನರು ಕೇವಲ ಆಕ್ರೋಶ ವ್ಯಕ್ತಪಡಿಸಿ ಸುಮ್ಮನಾಗಿಲ್ಲ ಬದಲಾಗಿ ಬಹಿರಂಗ  ಸವಾಲೊಂದನ್ನು  ಕುಮಾರಸ್ವಾಮಿ ರವರಿಗೆ ಎಸೆದಿದ್ದಾರೆ. ವಿಷಯ ತಿಳಿಯಲು ಸಂಪೂರ್ಣ ಓದಿ ಒಂದು ವೇಳೆ ಈ ಸವಾಲು ನಿಮಗೆ ಸರಿ ಅನಿಸಿದರೆ ಶೇರ್ ಮಾಡಿ.

ಅಷ್ಟಕ್ಕೂ ಈಗ ಕುಮಾರಸ್ವಾಮಿ ಅವರು ತೆಗೆದುಕೊಂಡ ನಿರ್ಧಾರ ವಾದರೂ ಏನು?

ಗಣೇಶ ಉತ್ಸವವನ್ನು ಆಚರಿಸುವ ವೇಳೆ ಧ್ವನಿ ವರ್ಧಕಗಳನ್ನು ಪ್ರತಿಯೊಬ್ಬರು ಬಳಸುತ್ತಾರೆ, ಆದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕುಮಾರಸ್ವಾಮಿ ರವರು ಗಣೇಶ ಉತ್ಸವದ ಆಚರಣೆಯ ವೇಳೆ ಧ್ವನಿವರ್ಧಕಗಳನ್ನು  ನಿಷೇಧಿಸಿದ್ದಾರೆ.

ಇದಕ್ಕೆ  ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಕೆಲವರು ವರ್ಷಕ್ಕೆ ಒಂದು ಬಾರಿ ನಡೆಯುವ ಆಚರಣೆಯಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವುದಾದರೆ,  ದಿನಕ್ಕೆ ಐದು ಬಾರಿ ಕೂಗುವ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ನಿಷೇಧಿಸಿ ಎಂದು ಸವಾಲೊಂದನ್ನು ಎಸೆದಿದ್ದಾರೆ.