ತಂದೆ ಗೆದ್ದದ್ದು ಆಯ್ತು ಈಗ ಮಗನ ಸರದಿ- ಸಿಎಂಗೆ ಬಾರಿ ಮುಖಭಂಗ

ತಂದೆ ಗೆದ್ದದ್ದು ಆಯ್ತು ಈಗ ಮಗನ ಸರದಿ- ಸಿಎಂಗೆ ಬಾರಿ ಮುಖಭಂಗ

0

ಬಿ ಎಸ್ ಯಡಿಯೂರಪ್ಪ ನವರಿಗೆ ರಾಜಕೀಯದಲ್ಲಿ ಗೆಲುವು ಹೊಸದೇನಲ್ಲ, ಕೇವಲ ಚುನಾವಣೆಗಳಲ್ಲಿ ಅಲ್ಲದೆ ಬಹಳಷ್ಟು ಆರೋಪಗಳನ್ನು ಎದುರಿಸಿರುವ  ಯಡಿಯೂರಪ್ಪನವರು ಪ್ರತಿಬಾರಿಯೂ ಆರೋಪ ಮಾಡಿದವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಾ ಬಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಡಿನೋಟಿಪಿಕೇಷನ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಯಡಿಯೂರಪ್ಪನವರು ಮತ್ತೊಮ್ಮೆ ತಮ್ಮ ಮೇಲೆ ಹೊರಿಸಿದ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತು ಪಡಿಸಿದ್ದರು. ಆದರೆ ಈಗ ಯಡಿಯೂರಪ್ಪನವರ ಸರದಿ ಯಲ್ಲ, ಬದಲಾಗಿ ರಾಜ್ಯರಾಜಕಾರಣದಲ್ಲಿ ಯುವ ರಾಜಕೀಯ ನಾಯಕರಾಗಿ ಮಿಂಚುತ್ತಿರುವ ಯಡಿಯೂರಪ್ಪನವರ ಪುತ್ರ ರಾದ ವಿಜಯೇಂದ್ರ ರವರದ್ದು.

ಅಷ್ಟಕ್ಕೂ ವಿಷಯದ ಮೂಲವೇನು?

ರಾಜಕಾರಣದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಸಹಜ, ಆದರೆ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಅಲೆಯನ್ನು ಸೃಷ್ಟಿಸಲು ಹೊರಟಿರುವ ವಿಜಯೇಂದ್ರ ರವರ ಮೇಲೆ ಯಾರು ಊಹಿಸದ  ರೀತಿಯಲ್ಲಿ  ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಐ ಟಿ  ರೈಡ್ ಎಂಬ ಹಣೆಪಟ್ಟಿ ಕಟ್ಟಿ ವಿಜಯೇಂದ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಆದರೆ ಇದಕ್ಕೆ ಉತ್ತರ ನೀಡಿರುವ ತೆರಿಗೆ ಅಧಿಕಾರಿಗಳು ನಾವು ವಿಜಯೇಂದ್ರ ರವರ ಜೊತೆ ಸಂಪರ್ಕದಲ್ಲಿ ಇಲ್ಲ ಅವರ ಮೇಲೆ ಯಾವುದೇ ದಾಳಿಯು ಸಹ ಅವಶ್ಯಕತೆ ಬಂದಿಲ್ಲ ಎಂದು ಉತ್ತರ ನೀಡಿದ್ದರಿಂದ  ಕುಮಾರಸ್ವಾಮಿ ರವರಿಗೆ ಬಹುದೊಡ್ಡ ಮುಖಭಂಗವಾಗಿದೆ. ಇದಕ್ಕೆ ವಿಜಯೇಂದ್ರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ರವರು ಯುವ ನಾಯಕರ ಮೇಲೆ ಈ ರೀತಿ ಆರೋಪಗಳನ್ನು ಮಾಡುವುದು ತಪ್ಪು ಎಂದು ಬಿಜೆಪಿ ಪಕ್ಷದ ಬೆಂಬಲಿಗರು ಕುಮಾರಸ್ವಾಮಿ ರವರು ಕ್ಷಮೆ ಕೇಳದೆ ಕೇಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ.