ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ದಿಗ್ವಿಜಯ ಯಾತ್ರೆ.

ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ದಿಗ್ವಿಜಯ ಯಾತ್ರೆ.

0

ಹೌದು ಹಿಂದೆಂಗಿಂತಲೂ ಮಹಾನಗರ ಪಾಲಿಕೆ ಚುನಾವಣೆಗಳು ಬಾರೀ ಮಹತ್ವ ಪಡೆದು ಕೊಂಡು ಬಂದಿದ್ದವು,ಅದಕ್ಕೆಲ್ಲ ಕಾರಣಗಳು ಒಂದೇ, ಈ ಚುನಾವಣೆಯನ್ನು ಮುಂದಿನ ಲೋಖಾಸಭಾ ಚುನಾವಣೆಯ ಕನ್ನಡಿ ಎಂದು ಪಕ್ಷಗಳು ನಂಬಿದ್ದವು.ಪ್ರತಿ ಪಕ್ಷವು ಈ ಚುನಾವಣೆಯನ್ನು ಪ್ರತಿಷ್ಠೆಯ ಕಣಗಳನ್ನಾಗಿ ತೆಗೆದುಕೊಂಡಿದ್ದವು.

ಪ್ರತಿಯೊಂದು ಮಹಾನಗರ ಚುನಾವಣೆಯಲ್ಲಿಯೂ ಬಿ ಜೆ ಪಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರಿವುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದೇ ವೇಳೇ ಇಂದು 2661 ವಾರ್ಡ್​ಗಳ ಫಲಿತಾಂಶವೂ ಹೊರಬಿದ್ದು, 982 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್​ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಬಿಜೆಪಿ 929 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದೆ. ಇನ್ನು ಜೆಡಿಎಸ್​ 375 ಸ್ಥಾನಗಳಲ್ಲಿ ಜಯಗಳಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು. 328 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದಾರೆ.

ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಕೆಳಗಿನಂತಿದೆ:

ನಿರೀಕ್ಷೆಯಂತೆ ಬಿ ಸ್ ವೈ ರವರ ತವರು ಜಿಲ್ಲೆಯಾದ ಶಿವಮೊಗ್ಗ ದಲ್ಲಿ ಬಿ ಜೆ ಪಿ ಪಕ್ಷವೂ ಸ್ಪಷ್ಟ ಗೆಲುವನ್ನು ಸಾಧಿಸಿದ್ದು, ಬಿ ಸ್ ವೈ ರವರ ವರ್ಚಸ್ಸು ಇನ್ನು ಹಾಗೆ ಉಇಳಿದಿದೆ ಎಂಬುದು ಸಾಭೀತಾಗಿದೆ. ಉಳಿದ ಎರಡು ಮಹಾನಗರ ಪಾಲಿಕೆಗಳಲ್ಲಿ ಅತ್ತಂತ್ರ ಪರಿಸ್ಥಿತಿ ಎದುರಾಗಿದ್ದರು ಬಿ ಜೆ ಪಿ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ತುಮಕೂರಿನಲ್ಲಿ ಒಟ್ಟು 35 ಸೀಟುಗಳಲ್ಲಿ 12 ಬಿ ಜೆ ಪಿ, 10 ಕಾಂಗ್ರೆಸ್, 10 ಜೆ ಡಿ ಸ್ ಇತರರೌ 3 ಆದರೆ, ಮೈಸೂರಿನಲ್ಲಿ 65 ಸೇಟುಗಳಲ್ಲಿ ನಡೆದ ಚುನಾವಣೆಗೆ 22 ಬಿ ಜೆ ಪಿ, 19 ಕಾಂಗ್ರೆಸ್, 18 ಜೆ ಡಿ ಸ್ ಇತರರು ೫ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಮಹಾನಗರ ಪಾಲಿಕೆಗಳ ಜನರು ಬಿ ಜೆ ಪಿ ಕಡೆ ಮುಖ ಮಾಡಿದಂತೆ ಕಾಣುತ್ತದೆ.