ರೈತರಿಗೆ ಮತ್ತೊಂದು ಬೃಹತ್ ಸಿಹಿಸುದ್ದಿ ನೀಡಲು ನಿರ್ಧರಿಸಿದ ಮೋದಿ ಸರ್ಕಾರ

ರೈತರಿಗೆ ಮತ್ತೊಂದು ಬೃಹತ್ ಸಿಹಿಸುದ್ದಿ ನೀಡಲು ನಿರ್ಧರಿಸಿದ ಮೋದಿ ಸರ್ಕಾರ

0

ಸದಾ ಒಂದಲ್ಲ ಒಂದು ಯೋಜನೆಗಳಿಂದ ರೈತರ ಸರ್ಕಾರ ಎಂದು ಸಾಬೀತು ಪಡಿಸುತ್ತಿರುವ ಮೋದಿ ಸರ್ಕಾರ ಈಗ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳುವ  ನಿರ್ಧಾರವನ್ನು ಮಾಡಿದಂತೆ ಕಾಣುತ್ತಿದೆ. ಒಂದು ವೇಳೆ ಯೋಜನೆ ಮುಕ್ತಾಯಗೊಂಡ ಲ್ಲಿ ಹಲವಾರು ರೈತರ ಬದುಕು ಬದಲಾಗಲಿದೆ.

ಪ್ರತಿ ಬಾರಿಯೂ ಕರ್ನಾಟಕದ ರೈತರಿಗೆ ಪರರಾಜ್ಯಗಳಿಂದ ಅನ್ಯಾಯವಾಗುತ್ತಲೇ ಬಂದಿದೆ, ಇದಕ್ಕೆ ಕಾರಣ ಪರ ರಾಜ್ಯದ ವಾದ ಒಂದು ಕಡೆ ಕಾರಣವಾದರೆ  ನಮ್ಮಲ್ಲಿ ಉಳಿದಿರುವ ಸಂಪನ್ಮೂಲಗಳನ್ನು ನಾವು ಸಂಪೂರ್ಣ ಬಳಸಿಕೊಳ್ಳಲು ವಿಫಲರಾಗುತ್ತಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಕನ್ನಡಿಗರ ಜೀವಜಲ ವಾದ ಕಾವೇರಿ ನೀರು.

 

ಸಾಮಾನ್ಯವಾಗಿ ಪ್ರತಿ ಬಾರಿಯೂ ನಾವು ತಮಿಳುನಾಡಿಗೆ ನೀರನ್ನು ಹರಿಸಬೇಕಾಗುತ್ತದೆ, ಸುಪ್ರೀಂಕೋರ್ಟ್ ಸಮಯದ ಒತ್ತಡವನ್ನು ಹೇರುವುದರಿಂದ ಆ ಸಮಯದಲ್ಲಿ ನೀರು ಬಿಟ್ಟು ಮತ್ತು ಉಳಿದ ಸಮಯದಲ್ಲಿ  ಅವಶ್ಯಕತೆ ಇಲ್ಲದಿದ್ದರೂ ನೀರು ಸರಾಗವಾಗಿ ಮೇಕೆದಾಟಿನ ಮೂಲಕ ತಮಿಳುನಾಡಿಗೆ ಹರಿಯುತ್ತದೆ. ಒಂದು ವೇಳೆ ಈ ನೀರನ್ನು ಸಮರ್ಪಕವಾಗಿ ನಾವು  ಬಳಸಿಕೊಂಡರೆ ಅದೆಷ್ಟೋ ರೈತರ ಜೀವನ ಸುಧಾರಿಸಲಿದೆ.

ಇದನ್ನು ಅರಿತಿರುವ ಕೇಂದ್ರ ಸರ್ಕಾರವು ಮೇಕೆದಾಟಿನಲ್ಲಿ ಬರೊಬ್ಬರಿ 67 ಟಿಎಂಸಿ ನೀರನ್ನು ಶೇಖರಿಸಲು   ಜಲಾಶಯ ಒಂದನ್ನು ನಿರ್ಮಾಣ ಮಾಡಲು  ಚಿಂತನೆ ಮಾಡುತ್ತಿದೆ ಎಂಬ ವಿಷಯಗಳು ಮೂಲಗಳಿಂದ ಕೇಳಿಬರುತ್ತಿವೆ. ಈ ನೀರನ್ನು ಕುಡಿಯಲು ಮತ್ತು ವ್ಯವಸಾಯಕ್ಕೆ ಬಳಸಲು ಅನುಮತಿ ನೀಡಬಹುದಾಗಿದೆ  ಎಂದು ಮೂಲಗಳಿಂದ ತಿಳಿದು ಬಂದಿದೆ