ರಾಷ್ಟ್ರೀಯ ತಂಡದ ಬಳಿಕ ಇದೀಗ ಆರ್ ಸಿಬಿ ಕೂಡ ಸಂಪೂರ್ಣ ‘ಕೊಹ್ಲಿ ಮಯ’!

ರಾಷ್ಟ್ರೀಯ ತಂಡದ ಬಳಿಕ ಇದೀಗ ಆರ್ ಸಿಬಿ ಕೂಡ ಸಂಪೂರ್ಣ ‘ಕೊಹ್ಲಿ ಮಯ’!

0

ಐಪಿಎಲ್ 2018ನ ಸೋಲಿನ ಕಹಿಯನ್ನು ಮರೆಯಲು ಮುಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.ಮೂಲಗಳ ಪ್ರಕಾರ 2019ರ ಐಪಿಎಲ್ ಟೂರ್ನಿ ಹೊತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಕೋಚಿಂಗ್ ಸ್ಟಾಫ್ ಬದಲಾಯಿಸಲು ಮುಂದಾಗಿದೆ. ಕಳೆದ ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿತು. ಹೀಗಾಗಿ ಸಪೋರ್ಟಿಂಗ್ ಸ್ಟಾಫ್​ನಲ್ಲಿ ಚೇಂಜಸ್ ಮಾಡಲು ಹೊರಟಿರುವ ಆರ್​ಸಿಬಿ ಫ್ರಾಂಚೈಸಿ ಕೋಚಿಂಗ್ ಸಿಬ್ಬಂದಿಗಳ ಬದಲಾವಣೆ ಮಾಡಲು ಮುಂದಾಗಿದೆ.

ಮೂಲಗಳ ಪ್ರಕಾರ ಆರ್ ಸಿಬಿಯ ಪ್ರಧಾನ ಕೋಚ್ ಡೇನಿಯಲ್ ವೆಟ್ಟೋರಿ , ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್ ಹಿಲ್, ಬೌಲಿಂಗ್ ಕೋಚ್ ಆಂಡ್ರ್ಯೂ ಮೆಕ್​ಡೊನಾಲ್ಡ್ ಅವರಿ​ಗೆ ಕೊಕ್ ನೀಡಿದೆ. ಆದರೆ ಆರ್​ಸಿಬಿ ಶೇರ್​ ಹೋಲ್ಡರ್ಸ್​ ಡಿಯಾಗೋ ಮ್ಯಾನೇಜ್ಮೆಂಟ್, ಆಶಿಶ್ ನೆಹ್ರಾರನ್ನ ತಂಡದ ಬೌಲಿಂಗ್ ಮೆಂಟರ್ ಆಗಿ ಮುಂದುವರೆಸಲು ತೀರ್ಮಾನಿಸಿದೆ.

ರಾಷ್ಟ್ರೀಯ ತಂಡದಂತೆ ಆರ್ ಸಿಬಿ ಕೂಡ ಕೊಹ್ಲಿ

ಈ ಹಿಂದೆ ಟೀಂ ಇಂಡಿಯಾದ ಕೋಚ್ ಆಯ್ಕೆ ವೇಳೆ ಬಿಸಿಸಿಐ ಕೊಹ್ಲಿ ಅಭಿಪ್ರಾಯದಂತೆ ನಡೆದುಕೊಂಡಿತ್ತು. ಇದೇ ವ್ಯವಸ್ಥೆ ಇಲ್ಲಿಯೂ ಪುನಾರವರ್ತನೆಯಾಗುವು ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ, ತಂಡದ ಮುಖ್ಯ ಕೋಚ್ ಆಯ್ಕೆ ಮಾಡಲಿದ್ದಾರಂತೆ. ಇನ್ನು ಆರ್ ಸಿಬಿ ಪ್ರಧಾನ ಕೋಚ್ ರೇಸ್ ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮುಂದಿದ್ದಾರೆ ಎನ್ನಲಾಗಿದೆ.

ಸಂಜಯ್ ಬಂಗಾರ್ ಗೆ ಎದುರಾಗಲಿದೆ ವೈಯುಕ್ತಿಕ ಹಿತಾಸಕ್ತಿ ಸಂಘರ್ಷದ ಬರೆ

ಒಂದು ವೇಳೆ ಬಂಗಾರ್ ಆರ್​ಸಿಬಿ ಕೋಚ್ ಹುದ್ದೆ ಅಲಂಕರಿಸಿದ್ದೇ ಆದರೆ, ಅಗ ಅವರು ಕಾನ್ ಫ್ಲಿಕ್ಟ್ ಆಫ್ ಇಂಟ್ರೆಸ್ಟ್​ (ವೈಯುಕ್ತಿಕ ಹಿತಾಸಕ್ತಿ ಸಂಘರ್ಷ)ನಿಂದ ಹೊರಬರಲು, ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಹುದ್ದೆಯನ್ನ ತ್ಯಜಿಸಬೇಕಾಗುತ್ತದೆ. ಒಟ್ಟಾರೆ ಇದೀಗ ಆರ್ ಸಿಬಿ ಕೋಚ್ ಆಯ್ಕೆ ಕೂಡ ಕುತೂಹಲ ಕೆರಳಿಸಿದೆ.