ಗರ್ಭಿಣಿಯನ್ನು 5 ಕಿ.ಮೀ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಯೋಧರು

ಗರ್ಭಿಣಿಯನ್ನು 5 ಕಿ.ಮೀ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಯೋಧರು

0

ಛತ್ತೀಸ್ ಗಢ್: ಸಮರ್ಪಕ ರಸ್ತೆ, ಆಯಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಅಸಹಾಯಕತೆಯಲ್ಲಿದ್ದ ತುಂಬು ಗರ್ಭಿಣಿಯನ್ನು ಭಾರತ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ) ಸಿಬ್ಬಂದಿಗಳು ಸ್ಟ್ರೇಚರ್ ನಲ್ಲಿ ಮಲಗಿಸಿ ಸುಮಾರು ಐದು ಕಿಲೋ ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಹೊತ್ತೊಯ್ದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಛತ್ತೀಗಢದ ಕೊಂಡಗಾಂವ್ ಜಿಲ್ಲೆಯ ಹಾಡೇಲಿ ಗ್ರಾಮದ ಸಾದೈ ಎಂಬಾಕೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಈ ಸಂದರ್ಭದಲ್ಲಿ ವಿಷಯ ತಿಳಿದ ಐಟಿಬಿಪಿಯ 41ನೇ ಬೆಟಾಲಿಯನ್ ಯೋಧರು ತಾವೇ ಸ್ಟ್ರೇಚರ್ ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೊತ್ತೊಯ್ದು ಸೇರಿಸಿದ್ದರು.

ಈ ಘಟನೆಯನ್ನು ಐಟಿಬಿಪಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ, ಐಟಿಬಿಪಿಯ ಮತ್ತೊಂದು ಮಾನವೀಯತೆ ಕೆಲಸ ಎಂಬುದಾಗಿ ಬರೆದು ವಿಡಿಯೋ ಸಹಿತ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ನಂತರ ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಯೋಧರ ಈ ಕರ್ತವ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಏತನ್ಮಧ್ಯೆ ಇನ್ನೂ ಕೆಲವರು ಪ್ರತಿ ಬಾರಿಯೂ ಇಂತಹ ಸಂದರ್ಭದಲ್ಲಿ ಯೋಧರು ಅಲ್ಲಿರಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಅಲ್ಲಿ ಜನರ ಅಗತ್ಯದ ಮೂಲಭೂತ ಸೌಕರ್ಯ ಒದಗಿಸುವುದು ಉತ್ತಮ ಎಂಬುದಾಗಿಯೂ ಸಲಹೆ ನೀಡಿದ್ದರು.

Creadits: UdayaVaani