ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧವಾದ ಬಿಜೆಪಿ !

ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧವಾದ ಬಿಜೆಪಿ !

0

ಇಡೀ ಭಾರತದಲ್ಲಿ ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಮುಗಿಸುತ್ತಾ ಬಂದಿದೆ, ಆದರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಅಸ್ತಿತ್ವವನ್ನು ಕೊನೆಗೊಳಿಸಲು ಪ್ರಯತ್ನ ಮಾಡಿದಂತಿದೆ. ಹೌದು ನೀವು ಓದುತ್ತಿರುವುದು ನಿಜ ಸಂಪೂರ್ಣ ವಿಷಯವನ್ನು ತಿಳಿಯಲು ಕೆಳಗಡೆ ಓದಿ.

ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿ ಇಲ್ಲದಿದ್ದರೂ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಸಮಿಶ್ರ ಸರ್ಕಾರ ದಿಂದ ಅಧಿಕಾರ ಕಳೆದುಕೊಂಡರು ಬಿಜೆಪಿ ಪಕ್ಷವು ತನ್ನ ಪ್ರಾಬಲ್ಯವನ್ನು ಮೆರೆದಿದೆ. ಇನ್ನು ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳುಗಳ ಕಾಲ ಇವೆ, ಇಂತಹ ಸಮಯದಲ್ಲಿ  ಬಿಜೆಪಿ ಪಕ್ಷವು ಬೃಹತ್ ನಿರ್ಣಯವೊಂದನ್ನು ತೆಗೆದುಕೊಳ್ಳಲು ಹೊರಟಿದೆ ಒಂದು ವೇಳೆ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದ್ದಲ್ಲಿ ಖಂಡಿತ ಕರ್ನಾಟಕದಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರುವಂತೆ ಮಾಡಿದ್ದೆ ಹುಟ್ಟು ಹೋರಾಟ ಸ್ವಭಾವದ ಹೋರಾಟಗಾರರಾದ  ಶ್ರೀ  ಯಡಿಯೂರಪ್ಪನವರು. ಕೆಲವು ರಾಜಕೀಯ ಪಂಡಿತರ ಪ್ರಕಾರ ಒಂದು ವೇಳೆ ಯಡಿಯೂರಪ್ಪನವರು ಇಲ್ಲದಿದ್ದರೆ ಬಿಜೆಪಿ ಪಕ್ಷವು ಇಂದು ಕರ್ನಾಟಕದಲ್ಲಿ ಹತ್ತು ಸೀಟುಗಳನ್ನು ಸಹ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ  ಎಂಬ ಮಾತುಗಳನ್ನು ಹೇಳುತ್ತಾರೆ.

ಯಡಿಯೂರಪ್ಪನವರ ವರ್ಚಸ್ಸು ಏನು ಎಂಬುದು ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಆದರೆ ಹೈಕಮಾಂಡ್ ಯಾರೂ ಊಹಿಸದ ರೀತಿಯಲ್ಲಿ  ಕುತಂತ್ರಗಳಿಗೆ ಬಲಿಯಾಗಿ  ಕರ್ನಾಟಕದಲ್ಲಿ  ಬಿಜೆಪಿ ಪಕ್ಷವನ್ನು ಹಳ್ಳಕ್ಕೆ ತಳ್ಳಲು ಸಿದ್ಧವಾಗಿ ನಿಂತಿದೆ.

ಅಷ್ಟಕ್ಕೂ ಏನು ಮಾಡಲು ಹೊರಟಿದೆ ಬಿಜೆಪಿ ಹೈಕಮಾಂಡ್ ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನು  ಯಡಿಯೂರಪ್ಪನವರ  ಹೆಗಲಿಗೆ ಹೊರಿಸಿದೆ. ಆದರೆ ಕೆಲವರ ಕುತಂತ್ರ ನೀತಿಗಳಿಂದ  ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಡೆ ಇಳಿಸಿ ಒಕ್ಕಲಿಗ ಸಮುದಾಯದ  ನಾಯಕರಿಗೆ   ಅಧಿಕಾರವನ್ನು ನೀಡಲು ಚಿಂತಿಸುತ್ತಿದೆ ಎಂದು  ಅಧಿಕಾರವನ್ನು ಮೂಲಗಳಿಂದ ತಿಳಿದು ಬಂದಿದೆ.

ಈ ನಿರ್ಧಾರವನ್ನು ತೆಗೆದುಕೊಂಡಿದ್ದೇ ಆದಲ್ಲಿ ಅದು ಬಿಜೆಪಿ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಹೊಡೆತ ನೀಡುವಲ್ಲಿ ಯಾವುದೇ ಅನುಮಾನಗಳಿಲ್ಲ ಎಂಬುದು ರಾಜಕೀಯ ಪಂಡಿತರ ವಾದ. ಈಗಾಗಲೇ #no BSY no BJP ಎಂಬ ಟ್ಯಾಗ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀವು ಸಹ ಆದಷ್ಟು ಈ ಪೋಸ್ಟನ್ನು ಶೇರ್ ಮಾಡಿ.ಬಿಎಸ್ ವೈ ರವರಿಗೆ ಬೆಂಬಲ ಸೂಚಿಸಿ.

ದಯವಿಟ್ಟು ಪ್ರತಿಯೊಬ್ಬರು ಶೇರ್ ಮಾಡಿ ಬಿಎಸ್ ವೈ ರವರ ಶಕ್ತಿ ಏನೆಂದು ತೋರಿಸಿ.