ರಾಹುಲ್ ಗಾಂಧಿ ರವರ ವಿರುದ್ಧ ಹರಿಹಾಯ್ದ ಬಿಎಸ್ ಯಡಿಯೂರಪ್ಪ

ರಾಹುಲ್ ಗಾಂಧಿ ರವರ ವಿರುದ್ಧ ಹರಿಹಾಯ್ದ ಬಿಎಸ್ ಯಡಿಯೂರಪ್ಪ

0

ರಾಹುಲ್ ಗಾಂಧಿ ರವರು ಸಂಸತ್ತಿನಲ್ಲಿ ಮಾಡಿದ ಅವಾಂತರಗಳು ಒಂದಲ್ಲ ಎರಡಲ್ಲ, ಅವರ ಮಾತುಗಳ ಮಟ್ಟ ಹೇಗಿತ್ತು ಎಂದರೆ ಫ್ರಾನ್ಸ್ ಅಧ್ಯಕ್ಷರೇ ರಾಹುಲ್ ಗಾಂಧಿರವರಿಗೆ ಉತ್ತರ ಕೊಡುವ ಮಟ್ಟಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು.


ಸಾಮಾನ್ಯವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ರವರು ಮತ್ತೊಮ್ಮೆ ಸುದ್ದಿಯಾದರು, ಇದರ ವಿರುದ್ಧ ಟೀಕೆಗಳು ವ್ಯಕ್ತವಾದವು. ತಾವು ಮಾಡಿದ ಅವಂತರ ಸಾಕಾಗುವುದಿಲ್ಲ ಎಂಬುವಂತೆ ಪ್ರಧಾನಿ ರವರನ್ನು ಅಪ್ಪಿಕೊಂಡು ಬಳಿಕ ಕುಳಿತುಕೊಳ್ಳುವಾಗ ಮೋದಿ ರವರಿಗೆ ಕಣ್ಣು ಹೊಡೆದದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.


ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಬಿ ಎಸ್ ಯಡಿಯೂರಪ್ಪನವರು ರಾಹುಲ್ ಗಾಂಧಿ ರವರ ವಿರುದ್ಧ ಹರಿಹಾಯ್ದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಬಿಜೆಪಿ ವಿಶೇಷ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪನವರು ರಾಹುಲ್ ಗಾಂಧಿ ರವರು ಕಣ್ಣು ಹೊಡೆದು ಬೇಜಾಬ್ದಾರಿ ತನವನ್ನು ತೋರಿದ್ದಾರೆ.

ಅಪ್ಪಿಕೊಂಡು ಮೋದಿ ರವರನ್ನು ಮೇಲೆತ್ತುವ ಪ್ರಯತ್ನವನ್ನು ರಾಹುಲ್ ಗಾಂಧಿ ರವರು ಮಾಡಿದ್ದಾರೆ, ಆದರೆ ಅಷ್ಟು ಸುಲಭವಾಗಿ ಮೋದಿ ರವರು ಮೇಲೇಳುವುದಿಲ್ಲ ಕಾರಣ ಅದು ಜನರು ಆರಿಸಿ ಕೂರಿಸಿರುವ ಪ್ರಧಾನ ಮಂತ್ರಿ ಹುದ್ದೆ ಎಂದು ರಾಹುಲ್ ಗಾಂಧಿರವರಿಗೆ ಟಾಂಗ್ ನೀಡಿದರು