ರವಾಂಡಾ ಜನರಿಗೆ ಸಹಾಯ ಹಸ್ತ ಚಾಚಿದ ಮೋದಿ

ರವಾಂಡಾ ಜನರಿಗೆ ಸಹಾಯ ಹಸ್ತ ಚಾಚಿದ ಮೋದಿ

0

ನನಗೆ ತಿಳಿದಿರುವ ಮಟ್ಟಕ್ಕೆ ಕಳೆದ ಸರ್ಕಾರಗಳು ಅಧಿಕಾರದಲ್ಲಿ ಇದ್ದಾಗ ಭಾರತದ ಕೆಲವು ಪ್ರದೇಶಗಳಿಗೆ ವಿದೇಶಗಳಿಂದ ಅನುದಾನ ಬರುತ್ತಿತ್ತು ಕಾರಣ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ಬೃಹತ್ ಆಕಾಂಕ್ಷೆಯಿಂದ ಕೆಲವು ಉದಾರ ಮನಸಿನ ದಾನಿಗಳು ಅಥವಾ ದೇಶಗಳು ಕೆಲವು ದೇಶಗಳ ಕೆಲ ಪ್ರದೇಶಗಳಿಗೆ ಸಹಾಯ ಹಸ್ತವನ್ನು ಚಾಚುತ್ತಿದ್ದರು.

ಆದರೆ ಈಗ ಭಾರತ ಬದಲಾಗಿದೆ, ಮತ್ತೊಬ್ಬರ ಸಹಾಯವನ್ನು ಎದುರು ನೋಡದೆ ಹಿಂದುಳಿದ ದೇಶಗಳಿಗೆ ಸಹಾಯ ಹಸ್ತವನ್ನು ಚಾಚುವ ಮಟ್ಟಕ್ಕೆ ಬೆಳೆದಿದೆ, ಇದಕ್ಕೆಲ್ಲ ಕಾರಣ ಕರ್ತ ಪ್ರಧಾನ ಸೇವಕರಾದ ನರೇಂದ್ರ ಮೋದಿ ಅವರು ಎಂದು ಹೇಳಿದರೆ ತಪ್ಪಾಗಲಾರದು,. ಈಗ ಅದಕ್ಕೆ ನಿದರ್ಶನವಾಗಿ ಮೋದಿ ರವರು ರವಾಂಡಾದ 200 ಕುಟುಂಬಗಳಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ.

ಅಷ್ಟಕ್ಕೂ ಏನಿದು ಯೋಜನೆ?

2006ರಲ್ಲಿ ರವಾಂಡಾ ಸರ್ಕಾರವು ಒಂದು ಯೋಜನೆಯನ್ನು ಆರಂಭಿಸುತ್ತದೆ,ಅದುವೇ ಗಿರಿಂಕಾ ಯೋಜನೆ, ಈ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ ಹಸುವನ್ನು ನೀಡುವುದು ಇದರ ಪ್ರಮುಖ ಉದ್ದೇಶ. ರವಾಂಡಾ ಭಾಷೆಯಾದ ಕಿನ್ಯಾರ್ವಾಂಡಾ ಭಾಷೆಯಲ್ಲಿ ಗಿರಿಂಕಾ ಎಂದರೆ ‘ಹಸುವನ್ನು ಪಡೆಯುವುದು’ ಎಂಬರ್ಥವಿದೆ. ಮೂರುವರೆ ಲಕ್ಷಕ್ಕಿಂತ ಹೆಚ್ಚಿನ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಅಷ್ಟಕ್ಕೂ ಮೋದಿ ಈಗ ಏನು ಮಾಡಲು ಹೊರಟಿದ್ದಾರೆ?

ಮುಂದಿನ ವಾರ ರವಾಂಡಾಕ್ಕೆ ‘ಐತಿಹಾಸಿಕ ಭೇಟಿ’ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರಿಗೆ 200 ಹಸುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ರವಾಂಡಾ ಅಧ್ಯಕ್ಷ ಪೌಲ್ ಕಗಾಮೆ ಅವರ ‘ಗಿರಿಂಕಾ’ ಎಂಬ ಯೋಜನೆಗೆ ಭಾರತದ ಕೊಡುಗೆಯಾಗಿ ಈ ಹಸುಗಳನ್ನು ನೀಡಲಾಗುತ್ತಿದೆ.
ಪೂರ್ವ ರವಾಂಡಾದಲ್ಲಿ ರವೇರು ಮಾದರಿ ಗ್ರಾಮದಲ್ಲಿ ಮೋದಿಯವರು ಅಲ್ಲಿನ ಸ್ಥಳೀಯ ಹಸುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಈ ಬಗ್ಗೆ ಮಾತನಾಡಿದ ವಿದೇಶಾಂಗ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಟಿ.ಎಸ್‌.ತಿರುಮೂರ್ತಿ, ಹಸುಗಳನ್ನು ಉಡುಗೊರೆಯಾಗಿ ನೀಡುವುದು ಆರ್ಥಿಕ ಕೊಡುಗೆ ಮಾತ್ರ ಅಲ್ಲ ರವಾಂಡಾ ಜನತೆಗೆ ಭಾರತೀಯರು ಸಲ್ಲಿಸುವ ಕೃತಜ್ಞತೆ ಎಂದಿದ್ದಾರೆ.