ಮೈತ್ರಿ ಸರ್ಕಾರದ ಕರಾಳ ಮುಖವನ್ನು ವ್ಯಂಗ್ಯದಿಂದ ಬಿಚ್ಚಿಟ್ಟ ಸ್ಪೀಕರ್ ರಮೇಶ್ ಕುಮಾರ್

ಮೈತ್ರಿ ಸರ್ಕಾರದ ಕರಾಳ ಮುಖವನ್ನು ವ್ಯಂಗ್ಯದಿಂದ ಬಿಚ್ಚಿಟ್ಟ ಸ್ಪೀಕರ್ ರಮೇಶ್ ಕುಮಾರ್

0

ಹೌದು ವಿಧಾನಸಭಾ ಕಲಾಪದ ವೇಳೆ ಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ರವರು ಬಹಳ ಅಸಮಾಧಾನಗೊಂಡಿದ್ದರು ಇದೇ ವೇಳೆಯಲ್ಲಿ ಮೈತ್ರಿ ಸರ್ಕಾರದ ಕೆಲವು ಕಹಿ ಸತ್ಯಗಳನ್ನು ನೇರವಾಗಿ ಹೇಳಲಾಗದೆ ವ್ಯಂಗ್ಯದ ಮೂಲಕ ಹೊರಹಾಕಿದರು. ಈ ಮಾತುಗಳನ್ನು ನೋಡಿದರೆ ಮೈತ್ರಿ ಸರ್ಕಾರದ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಅವರು ಬಹಳ ಅಸಮಾಧಾನ ಗೊಂಡಂತೆ ಇದೆ.ಕುಮಾರಸ್ವಾಮಿ. ಸಂಸದ ಎಚ್ ಡಿ ರೇವಣ್ಣ, ಡಿ ಕೆ ಶಿವಕುಮಾರ್ ಮತ್ತು ಇತರ ಸಂಸದರ ವಿರುದ್ಧ ವ್ಯಂಗ್ಯವಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.


ಅಷ್ಟಕ್ಕೂ ಅವರ ಮಾತುಗಳು ಏನು? 

ಮೊದಲಿಗೆ ಇಡೀ ರಾಜ್ಯದಲ್ಲೆಡೆ ಸುದ್ದಿಯಾಗುತ್ತಿರುವುದು ರೇವಣ್ಣ ರವರ ಮೂಡನಂಬಿಕೆಗಳು ಇತ್ತ ಪತ್ರಿಕೆಗಳು ಮತ್ತು ಮಾಧ್ಯಮದವರು ರೇವಣ್ಣ ರವರು ಕೆಲವು ಮೂಢನಂಬಿಕೆಗಳನ್ನು ಪಾಲಿಸುತ್ತಿದ್ದಾರೆ ಆದ ಕಾರಣ ಅವರು ಬೆಂಗಳೂರಿನ ಸುತ್ತಿಲ್ಲ ಪ್ರತಿ ದಿನವೂ ತಮ್ಮ ಮನೆಗೆ ಸುಮಾರು 150ಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಬಹುಶಃ ಈ ಮಾತುಗಳು ಸ್ಪೀಕರ್ ರಮೇಶ್ ಕುಮಾರ್ ಅವರ ಕಿವಿಗೂ ಬಿದ್ದಿರಬೇಕು, ರೇವಣ್ಣ ರವರು ಸದನದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ಕೊಂಡಿದ್ದಾಗ ಸದನದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ಕೊಂಡಿದ್ದಾಗ ಸ್ಪೀಕರ್ ರವರು ವಿನಂತಿಸಿಕೊಳ್ಳುತ್ತಾರೆ ಆದರೆ ರೇವಣ್ಣ ರವರು ಇದನ್ನು ನಿರಾಕರಿಸಿದಾಗ ಸ್ಪೀಕರ್ ರವರು ಪರವಾಗಿಲ್ಲ ಮುಂದಿನ ಸಾಲಿನಲ್ಲೂ ಸಹ ವಾಸ್ತು ಇದೆ ಎಂದು ವ್ಯಂಗ್ಯದ ಮೂಲಕ ರೇವಣ್ಣ ಅವರ ಮೂಢನಂಬಿಕೆಗಳಿಗೆ ಟಾಂಗ್ ನೀಡಿದ್ದಾರೆ.

ಇದೇ ವೇಳೆ ಇಂಧನ ಖಾತೆಯ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ರವರು ಸದನಕ್ಕೆ ತಡವಾಗಿ ಬಂದ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಲು ನೀವು ಬಂದಿರಿ ಕರೆಂಟು ಬಂತು, ಇಂಧನ ಖಾತೆ ಹೆಸರಿಗಷ್ಟೇ ಮುಖ್ಯಮಂತ್ರಿ ರವರ ಕೈಯಲ್ಲಿ ಇದೆ ಆದರೆ ಪವರ್ ಇರುವುದೆಲ್ಲ ಸಚಿವ ಡಿಕೆ ಶಿವಕುಮಾರ್ ಕೈಯಲ್ಲಿ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

ಇದೇ ವೇಳೆಯಲ್ಲಿ ಶಾಸಕರು ಸದನದಲ್ಲಿ ಓಡಾಡುತ್ತಿರುವುದನ್ನು ಕಂಡ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಕಲಾಪವನ್ನು ನೋಡಿದರೆ ನನಗೆ ನನ್ನ ಚಿಕ್ಕಂದಿನಲ್ಲಿ ನೋಡಿದ ಸಂತೆಯ ನೆನಪಾಗುತ್ತದೆ ಎಂದು ಹೇಳಿದರು.

ನೋಡಿದಿರಲ್ಲಾ ಸ್ಪೀಕರ್ ರಮೇಶ್ ಕುಮಾರ್ ಅವರ ಪರೋಕ್ಷವಾದ ಮಾತುಗಳು ಈ ಮಾತುಗಳನ್ನು ಕೇಳಿದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಮೈತ್ರಿ ಸರ್ಕಾರದ ಕೆಲವು ನಡವಳಿಕೆಗಳಿಂದ ಬೇಸರಗೊಂಡತೆ ಕಾಣುತ್ತಿದೆ.