ಉತ್ತರ ಕರ್ನಾಟಕ ಕರಾವಳಿ ಪ್ರದೇಶದ ಬಗ್ಗೆ ಕಡೆಗಣನೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ ಪಕ್ಷ.

ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾದ ಮೇಲೆ ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಮಾಡಿದ್ದಾರೆ. ಈ ಬಜೆಟ್ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ.ರಾಜಕೀಯ ಪ್ರೇರಿತವಾದ ರಾಜಕೀಯ ಪ್ರೇರಿತವಾದ ಬಜೆಟನ್ನು ಕುಮಾರಸ್ವಾಮಿ ಅವರು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಜನಪರವಾದ ಯಾವುದೇ ಯೋಜನೆಗಳಿಲ್ಲ, ಕೇವಲ ಹಾಸನ ರಾಮನಗರ ಮಂಡ್ಯ ಸೇರಿದಂತೆ ಜೆಡಿಎಸ್ ಶಾಸಕರು ಇದ್ದ ಕಡೆಗೆ ಮಾತ್ರ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ.

ಉಳಿದಂತೆ ಒಂದು ಸೀಟು ಗೆಲ್ಲಲು ವಿಫಲವಾದ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳ ಹೆಸರನ್ನೇ ಬಜೆಟ್ನಲ್ಲಿ ಹೇಳಲಿಲ್ಲ. ಕೇವಲ ತಮ್ಮ ಕ್ಷೇತ್ರಗಳಿಗೆ ಮಾತ್ರ ಒತ್ತು ನೀಡಲಾಗಿದೆ ಎಂದು ವಿರೋಧ ಪಕ್ಷದವರು ಪ್ರತಿಪಾದಿಸುತ್ತಿದ್ದಾರೆ. ಇದರ ಬದಲಾಗಿ ಕೇವಲ ಜೆಡಿಎಸ್ ಕ್ಷೇತ್ರಗಳ ಬಜೆಟ್ ಎಂದು ಘೋಷಿಸಬಹುದು ಇತ್ತು ಬದಲಾಗಿ ಕರ್ನಾಟಕದ ಬಜೆಟ್ ಎಂದು ಘೋಷಣೆ ಮಾಡಬಾರದಿತ್ತು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಬಜೆಟ್ ನಲ್ಲಿ ಎಲ್ಲಾ ವರ್ಗದವರಿಗೆ ಮೋಸ ಮಾಡಲಾಗಿದೆ, ಹಿಂದುಳಿದ ವರ್ಗದ ಅಭಿವೃಧ್ಧಿಗೆ ಅನುದಾನ ನೀಡಲಾಗಿಲ್ಲ ಎಂದು ವಿರೋಧ ಪಕ್ಷದವರು ಹೇಳಿಕೆಗಳನ್ನು ನೀಡುತ್ತಿದ್ದಾರೆ.

Post Author: Ravi Yadav