ಮೋದಿ ಫುಲ್ ಖುಷ್: ಮೋದಿ ರವರ ಮೇಲೆ ನಂಬಿಕೆ ಇಟ್ಟ ಜನರು ಎಷ್ಟು ಗೊತ್ತಾ?

ಮೋದಿ ಫುಲ್ ಖುಷ್: ಮೋದಿ ರವರ ಮೇಲೆ ನಂಬಿಕೆ ಇಟ್ಟ ಜನರು ಎಷ್ಟು ಗೊತ್ತಾ?

0

ಮೋದಿ ರವರು ಅಧಿಕಾರಕ್ಕೆ ಬಂದಾಗ ದೇಶದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತ್ತು. ಬರೋಬ್ಬರಿ ೬೦ ವರ್ಷಗಳ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷವು ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿತ್ತು. ಮೋದಿ ರವರು ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ಯೋಜನೆಗಳನ್ನು ರೂಪಿಸಲು ಬಾರಿ ಹಣದ ಅಗತ್ಯವಿತ್ತು, ಆ ಹಣ ಹೇಗೆ ತರುವುದು ಎಂಬ ದೊಡ್ಡ ಸವಾಲು ಮೋದಿ ರವರಿಗೆ ಮುಂದಿತ್ತು.

ಮತ್ತೆ ವಿಶ್ವ ಬ್ಯಾಂಕ್ ಬಳಿ ಸಾಲ ಕೇಳುವುದೇ? ಅದು ಸಾಧ್ಯವಿರಲಿಲ್ಲ ಯಾಕೆಂದರೆ ಭಾರತದ ಮೇಲಿನ ಸಾಲದ ಬಡ್ಡಿ  ಸಹ ಬೆಳೆದು ನಿಂತಿತ್ತು. ಮತ್ತೊಮ್ಮೆ ಸಾಲ ಮಾಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಹದೆಗೆಟ್ಟಿಸಲು ಮೋದಿ ಮುಂದಾಗಲಿಲ್ಲ. ಬದಲಾಗಿ ದೇಶದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಜನರಿಗೆ ಒಂದು ಭರವಸೆಯ ಸರ್ಕಾರ ನೀಡುತ್ತಾರೆ ಎಂಬ ಆಶಾಭಾವನೆ ಮೂಡಿಸಿ ದೇಶದ ಅಭಿವೃದ್ದಿಯ ಹಣಕ್ಕಾಗಿ ಜನರ ಬಳಿಯೇ ತಮಗೆ ಇಷ್ಟವಿದ್ದರೆ ನೀಡಿ ಎಂಬ ಮಾತನ್ನು ಆಡಿದ್ದರು.

ಜನರ ಬಳಿ ನೇರವಾಗಿ ಹಣ ಕೇಳದೆ, ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ಸರ್ಕಾರ ನೀಡುವ ಕೆಲವು ಸಬ್ಸಿಡಿಗಳನ್ನು ಪಡೆಯಬೇಡಿ, ನಿಮ್ಮ ಹಣವನ್ನು ಬಡವರ ಮತ್ತು ಆಯಾ ಕ್ಷೇತ್ರಗಳ ಅಭಿವೃದ್ದಿ ಬಳಸಲಾಗುವುದು ಎಂದು ಹೇಳಿದರು. ಅದರಂತೆಯೇ ವಿವಿಧ ಕ್ಷೇತ್ರಗಳಲ್ಲಿ ಜನರ ಸಹಾಯ ಕೋರಿದ ಮೋದಿ ರವರಿಗೆ ಎಷ್ಟು ಜನರು ಬೆಂಬಲಿಸಿದ್ದಾರೆ ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ಮೊದಲು ರೈಲ್ವೆ ಇಲಾಖೆಯಲ್ಲಿ ಕಳೆದ ೯ ತಿಂಗಳ ಹಿಂದೆ ಮೋದಿ ರವರು ಹಿರಿಯ ನಾಗರಿಕರಲ್ಲಿ ಒಂದು ಮನವಿ ಮಾಡಿದ್ದರು. ನಿಮ್ಮ ಇಚ್ಚೆಯಿಂದ ರಿಯಾಯಿತಿಯನ್ನು ಕೈಬಿಡಿ ಎಂದು ಕೋರಿದ್ದರು. ಇದಕ್ಕೆ ಬರೋಬ್ಬರಿ ೪೨ ಲಕ್ಷ ಜನ ಹಿರಿಯ ನಾಯಕರು ರಿಯಾಯಿತಿ ಯನ್ನು ಕೈಬಿಟ್ಟು ಸಾಮಾನ್ಯ ದರದಲ್ಲಿ ಟಿಕೆಟ್ ಖರೀದಿಸಿದ್ದಾರೆ. ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದ್ದು ಆ ಹಣವನ್ನು ರೈಲ್ವೆ ಇಲಾಖೆಯ ಯೋಜನೆಗಳಿಗೆ ಬಳಸಲಾಗಿದೆ.

ವೈದ್ಯರಲ್ಲಿ ಮೋದಿ ರವರು ನೀವು ತಿಂಗಳಿಗೆ ಒಬ್ಬ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿ ಎಂದು ಮನವಿ ಮಾಡಿದ್ದರು. ಈ ಮನವಿಗೆ ಅದ್ಭುತವಾಗಿ ಸ್ಪಂದಿಸಿದ ವೈದ್ಯರು ಬರೊಬ್ಬ್ಬರಿ ೧.೨೫ ಕೋಟಿ ಮಹಿಳೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಸ್ವತಹ ಮೋದಿರವರೇ ಹೇಳಿದರು.

ಇಷ್ಟು ಮಾತ್ರವಲ್ಲದೆ ೧.೨೫ ಕೋಟಿ ಜನರು ತಮ್ಮ ಗ್ಯಾಸ್ ಸಬ್ಸಿಡಿಯನ್ನು ಸ್ವಯಂ ಪ್ರೇರಣೆಯಿಂದ ಕೈ ಬಿಟ್ಟಿದ್ದಾರೆ ಎಂದು ಮೋದಿ ಹೇಳಿದ್ದಾರೆ.ಇದರಿಂದ ದೇಶದ ಮೂಲೆ ಮೂಲೆಯ ಹಳ್ಳಿಗಳಿಗೆ ಗ್ಯಾಸ್ ವಿತರಿಸಲು ಹಣ ಉಪಯೋಗವಾಗುತ್ತಿದೆ ಎಂದು ಹೇಳಿದರು.

ಈ ಎಲ್ಲ ಕಾರ್ಯಗಳು ದೇಶದ ಜನರಿಗೆ ಸರ್ಕಾರದ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ.ದೇಶದಲ್ಲಿ ಪ್ರಾಮಾಣಿಕ ವಾತಾವರಣೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿದೇಶದ ಜನರು ಸ್ವಯಂ ಪ್ರೇರಿತವಾಗಿ ಸಬ್ಸಿಡಿಗಳನ್ನು ಕೈಬಿಟ್ಟು ದೇಶ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ ಎಂದು ಮೋದಿರವರು ಹೇಳಿದ್ದಾರೆ. ಜನರಿಗೆ ತಮ್ಮ ತೆರಿಗೆ ಹಣ ಯೋಜನೆಗಳಿಗೆ ಉಪಯೋಗವಾಗುತ್ತಿದೆ ಎಂಬುದು ತಿಳಿದಿದೆ ಈ ನಂಬಿಕೆಯೇ ನನಗೆ ಶ್ರೀ ರಕ್ಷೆ ಎಂದು ಅಭಿಪ್ರಾಯ ಪಟ್ಟರು.